AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಜೊರಾಂನಲ್ಲಿ ಎನ್ಎಲ್ಎಫ್​​ಟಿ ನಾಯಕನ ಬಂಧನ

ಅಸ್ಸಾಂ ರೈಫಲ್ಸ್ ಮತ್ತು ಮಿಜೊರಾಂ ಪೊಲೀಸರು ಐಜ್ವಾಲ್​​ನ ವೈವಾಕನ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಜಂಟಿಯಾಗಿ ಶೋಧ ಕಾರ್ಯ ನಡೆಸಿದ್ದು ಎನ್ಎಲ್ಎಫ್​​ಟಿ(ಬಿಎಂ) ಘಟಕದ ಸ್ವಯಂಘೋಷಿತ ಅಧ್ಯಕ್ಷ ಜಾಕಬ್ ರಂಗ್​​ಖ್ವಾಲ್ ಎಂಬಾತನನ್ನು ಬಂಧಿಸಿದೆ.

ಮಿಜೊರಾಂನಲ್ಲಿ ಎನ್ಎಲ್ಎಫ್​​ಟಿ ನಾಯಕನ ಬಂಧನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 07, 2022 | 4:16 PM

ಕಾನೂನುಬಾಹಿರ ಸಂಘಟನೆಯಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾದ ((NLFT) ಹಿರಿಯ ನಾಯಕನನ್ನು ಬುಧವಾರ ಬಂಧಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ (Assam Rifles )ಹೇಳಿಕೆಯಲ್ಲಿ ತಿಳಿಸಿದೆ. ಅಸ್ಸಾಂ ರೈಫಲ್ಸ್ ಮತ್ತು ಮಿಜೊರಾಂ ಪೊಲೀಸರು ಐಜ್ವಾಲ್​​ನ ವೈವಾಕನ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಜಂಟಿಯಾಗಿ ಶೋಧ ಕಾರ್ಯ ನಡೆಸಿದ್ದು ಎನ್ಎಲ್ಎಫ್​​ಟಿ(ಬಿಎಂ) ಘಟಕದ ಸ್ವಯಂಘೋಷಿತ ಅಧ್ಯಕ್ಷ ಜಾಕಬ್ ರಂಗ್​​ಖ್ವಾಲ್ (Jacob Hrangkhawl) ಎಂಬಾತನನ್ನು ಬಂಧಿಸಿದೆ. 55ರ ಹರೆಯದ ಈತನಿಂದ ಎರಡು ಮೊಬೈಲ್, ಕೆಲವು ದಾಖಲೆಗಳು, ಡೈರಿಯನ್ನು ವಶ ಪಡಿಸಿಕೊಳ್ಳಲಾಗಿದೆ. ಪಶ್ಚಿಮ ತ್ರಿಪುರಾದ ತೆಲಿಯಾಮುರಾ ನಿವಾಸಿಯಾಗಿದ್ದಾನೆ ಜಾಕಬ್ ಎಂದು ಭದ್ರತಾ ಪಡೆಯ ವಕ್ತಾರರು ಹೇಳಿದ್ದಾರೆ.ತ್ರಿಪುರಾ ಪೊಲೀಸರು ಐಜ್ವಾಲ್ ಗೆ ಹೋಗಿದ್ದು ಅಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ರಂಗ್​​ಖ್ವಾಲ್​​ನ್ನು ಅಗರ್ತಲಾಕ್ಕೆ ಕರೆತರಲಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

1989ರಲ್ಲಿ ಬಿವಾಮೋಹನ್ ದೆಬರ್ಮಾ ನೇತೃತ್ವದಲ್ಲಿ ಎನ್ಎಲ್ಎಫ್ ಟಿ ರೂಪುಗೊಂಡಿತ್ತು. ಈ ಬಂಡುಕೋರರ ಗುಂಪು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್​​ನಲ್ಲಿ ಈ ಹಿಂದೆ ಶಿಬಿರಗಳನ್ನು ಮಾಡುತ್ತಿತ್ತು. 1991ರಲ್ಲಿ ಇದನ್ನು ಕೇಂದ್ರ ಗೃಹಸಚಿವಾಲಯ ನಿಷೇಧಿಸಿದೆ. ಈ ಹಿಂದೆ ಪ್ರಸ್ತುತ ಸಂಘಟನೆಯ ಹಲವಾರು ಜನರು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.

Published On - 4:04 pm, Thu, 7 July 22