ಕಾಂಗ್ರೆಸ್ನೊಂದಿಗಿನ ಆಪ್ ಮೈತ್ರಿ ಅಂತ್ಯ; ದೆಹಲಿಯಲ್ಲಿ ಆಮ್ ಆದ್ಮಿ ಏಕಾಂಗಿ ಹೋರಾಟ
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರೈ ಕಾಂಗ್ರೆಸ್ ಜೊತೆಗಿನ ತಮ್ಮ ಪಕ್ಷದ ಮೈತ್ರಿ ಲೋಕಸಭೆ ಚುನಾವಣೆಗೆ ಮಾತ್ರ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಎಎಪಿ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha Election Results) ಪ್ರಕಟವಾದ 2 ದಿನಗಳ ನಂತರ ಹಲವಾರು ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಇಂಡಿಯ (INDIA) ಬ್ಲಾಕ್ ದೊಡ್ಡ ಅಂಕ ಗಳಿಸಿ ಬಿಜೆಪಿ ನೇತೃತ್ವದ ಎನ್‌ಡಿಎಯ ‘400 ಪಾರ್’ ಕನಸನ್ನು ಮುರಿದಿದೆ. ಆಮ್ ಆದ್ಮಿ ಪಕ್ಷ (AAP) ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಕೇವಲ ಸಂಸತ್ ಚುನಾವಣೆಗೆ ಮಾತ್ರವೇ ಹೊರತು ವಿಧಾನಸಭಾ ಚುನಾವಣೆಗೆ ಅಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಈ ಕುರಿತು ಮಾತನಾಡಿರುವ ದೆಹಲಿ ಸಚಿವ ಗೋಪಾಲ್ ರೈ, I.N.D.I.A ಬ್ಲಾಕ್ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಇದು ಸ್ಪಷ್ಟವಾಗಿದೆ.
“ಲೋಕಸಭಾ ಚುನಾವಣೆಗೆ ಇಂಡಿಯ ಬ್ಲಾಕ್ ಜೊತೆ ಆಪ್ ಕೂಡ ಮೈತ್ರಿ ಮಾಡಿಕೊಂಡಿರುವುದು ಮೊದಲ ದಿನವೇ ಸ್ಪಷ್ಟವಾಗಿದೆ. ಆದರೆ, ನಾವು ವಿಧಾನಸಭೆಗೆ ಸಂಬಂಧಿಸಿದಂತೆ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ. ಆಮ್ ಆದ್ಮಿ ಪಕ್ಷ ತನ್ನ ಸಂಪೂರ್ಣ ಶಕ್ತಿಯೊಂದಿಗೆ ಚುನಾವಣೆ ಎದುರಿಸಲಿದೆ” ಎಂದು ರೈ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷವು ತನ್ನ ಶಾಸಕರ ಸಭೆ ಕರೆದ ನಂತರ ಗೋಪಾಲ್ ರೈ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಆಮ್ ಆದ್ಮಿ ನಾಯಕರು ಹೋಲ್ಸೇಲ್ ಡ್ರಗ್ಸ್ ವ್ಯಾಪಾರಿಗಳು; ಪಂಜಾಬ್‌ನಲ್ಲಿ ಮೋದಿ ಟೀಕೆ
ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 3 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. I.N.D.I.A ಬ್ಲಾಕ್ 232 ಸ್ಥಾನಗಳನ್ನು ಗಳಿಸಿದರೆ NDA 293 ಸ್ಥಾನಗಳನ್ನು ಗೆದ್ದುಕೊಂಡಿದೆ. ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಎನ್ಡಿಎಯಲ್ಲಿ ಮಾತ್ರ ಉಳಿಯುವುದಾಗಿ ಪ್ರತಿಪಾದಿಸಿದ ನಂತರ ಇಂಡಿಯ ಬ್ಲಾಕ್ ಪ್ರತಿಪಕ್ಷವಾಗಿ ಉಳಿಯಲು ನಿರ್ಧರಿಸಿದೆ.
ಎಎಪಿ-ಕಾಂಗ್ರೆಸ್ ಮೈತ್ರಿಯ ದೊಡ್ಡ ಅನುಕೂಲವೆಂದರೆ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‌ಗೆ ಜೈಲಿನಲ್ಲಿ ಕೂಲರ್ ನೀಡಿಲ್ಲ; ಆಮ್ ಆದ್ಮಿ ಆರೋಪ
“ಜೂನ್ 8ರಂದು ನಾವು ಕೌನ್ಸಿಲರ್‌ಗಳೊಂದಿಗೆ ಸಭೆ ನಡೆಸುತ್ತೇವೆ ಮತ್ತು ಜೂನ್ 13ರಂದು ದೆಹಲಿಯ ಎಲ್ಲಾ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಕೇಜ್ರಿವಾಲ್ ಜೈಲಿನಲ್ಲಿರುವ ಕಾರಣ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ಎಎಪಿ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ