ತನಿಖೆಗೆ ಬಂದ ಎಸಿಬಿ ಅಧಿಕಾರಿಗಳಿಗೆ ನೋ ಎಂಟ್ರಿ; ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಹೈಡ್ರಾಮಾ
ಆಮ್ ಆದ್ಮಿ ಪಕ್ಷದ ನಾಯಕರಿಗೆ ಬಿಜೆಪಿ 15 ಕೋಟಿ ರೂ. ಆಮಿಷವೊಡ್ಡಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಈ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಎಸಿಬಿ ತನಿಖೆಗೆ ಆದೇಶಿಸಿದ್ದರು. ಈ 15 ಕೋಟಿ ರೂ.ಗಳ ಆರೋಪದ ತನಿಖೆಗೆ ಅರವಿಂದ್ ಕೇಜ್ರಿವಾಲ್ ಮನೆಗೆ ಹೋದ ಎಸಿಬಿ ಅಧಿಕಾರಿಗಳಿಗೆ ಮನೆಯೊಳಗೆ ಪ್ರವೇಶಿಸಲು ನಿರಾಕರಿಸಲಾಗಿದೆ. ‘ಆಪರೇಷನ್ ಕಮಲ’ ಗಲಾಟೆಯ ನಡುವೆ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭ್ರಷ್ಟಾಚಾರ ನಿಗ್ರಹ ದಳದ ತಂಡಕ್ಕೆ ಪ್ರವೇಶ ನಿರಾಕರಿಸಲಾಗಿದೆ.

ನವದೆಹಲಿ: 70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆದಿದ್ದು, ನಾಳೆ (ಶನಿವಾರ) ಮತಗಳ ಎಣಿಕೆ ನಡೆಯಲಿದೆ. ಎಎಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ ದೆಹಲಿಯನ್ನು ಆಳಲು ಬಿಜೆಪಿ ತನ್ನ 27 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸುತ್ತದೆಯೇ ಎಂಬುದನ್ನು ಫಲಿತಾಂಶಗಳು ನಿರ್ಧರಿಸುತ್ತವೆ. ಬಿಜೆಪಿ ಪಕ್ಷಾಂತರ ಮಾಡಲು ಆಮ್ ಆದ್ಮಿ ಪಕ್ಷದ ತಲಾ 15 ಕೋಟಿ ರೂ.ಗಳನ್ನು ನೀಡುವುದಾಗಿ ಆಮಿಷವೊಡ್ಡಿದೆ ಎಂಬ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಹೇಳಿಕೆಯ ಸುತ್ತ ವಿವಾದ ಉಂಟಾಗಿದೆ.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವಾಗ ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಹೈಡ್ರಾಮಾ ನಡೆಯಿತು. ಅವರು ಬಿಜೆಪಿ ವಿರುದ್ಧ ಮಾಡಿರುವ ಕಳ್ಳಬೇಟೆ ಅಥವಾ ಆಪರೇಷನ್ ಕಮಲ ಆರೋಪಗಳ ತನಿಖೆಯ ಭಾಗವಾಗಿ ಇಂದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತಂಡವು ಅವರ ನಿವಾಸಕ್ಕೆ ತಲುಪಿತು.
ಇದನ್ನೂ ಓದಿ: ಭಾರತದ ಅತಿದೊಡ್ಡ ಗೂಂಡಾ ಯಾರು?; ಚುನಾವಣಾ ಆಯೋಗ, ಬಿಜೆಪಿ ಸರ್ಕಾರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ಬಿಜೆಪಿ ತನ್ನ ಶಾಸಕರಿಗೆ ಲಂಚ ನೀಡುವ ಮೂಲಕ ಆಪರೇಷನ್ ಕಮಲ ಮಾಡಲು ಪ್ರಯತ್ನಿಸಿದೆ ಎಂಬ ಆಮ್ ಆದ್ಮಿ ಪಕ್ಷದ ಆರೋಪಗಳ ಬಗ್ಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ವಿ.ಕೆ ಸಕ್ಸೇನಾ ಸಮಗ್ರ ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಮಾಡಿರುವ ಆರೋಪಗಳ ಹಿಂದಿನ ಸತ್ಯವನ್ನು ಪರಿಶೀಲಿಸಲು ಎಸಿಬಿ ತನಿಖೆ ನಡೆಸಲಿದೆ.
#WATCH | A team of Anti Corruption Bureau (ACB) arrives at the residence of AAP national convener Arvind Kejriwal after Delhi LG’s principal secretary writes to the chief secretary to conduct an ACB Inquiry on allegations of bribes offered to MLAs of the Aam Aadmi Party pic.twitter.com/yt2ZMW5ZH3
— ANI (@ANI) February 7, 2025
ಎಸಿಬಿ ತಂಡವು ಕೇಜ್ರಿವಾಲ್ ಅವರ ನಿವಾಸಕ್ಕೆ ಬಂದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್ ಅವರ ವಕೀಲ ರಿಷಿಕೇಶ್ ಕುಮಾರ್, ಎಸಿಬಿ ಅಧಿಕಾರಿಗಳು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಎಎಪಿ ಮುಖ್ಯಸ್ಥರ ನಿವಾಸಕ್ಕೆ ಬಂದರು. ತನಿಖೆ ಅಥವಾ ಶೋಧಕ್ಕಾಗಿ ಯಾರದ್ದಾದರೂ ನಿವಾಸವನ್ನು ಪ್ರವೇಶಿಸಲು, ಸಂಬಂಧಪಟ್ಟ ಸಂಸ್ಥೆಯು ಹಾಗೆ ಮಾಡಲು ಲಿಖಿತ ಆದೇಶಗಳನ್ನು ಹೊಂದಿರಬೇಕು. ಕಾನೂನು ಆದೇಶಗಳಿಲ್ಲದೆ ಯಾರೊಬ್ಬರ ಆಸ್ತಿಯನ್ನು ಪ್ರವೇಶಿಸುವುದನ್ನು ಕಾನೂನುಬಾಹಿರ ಮತ್ತು ಅತಿಕ್ರಮಣವೆಂದು ಪರಿಗಣಿಸಲಾಗುತ್ತದೆ. ಅವರು ಆ ಹಳದಿ ಲಕೋಟೆಯಲ್ಲಿ ಸ್ಟೇಷನರಿ ವಸ್ತುಗಳನ್ನು ಸಾಗಿಸುತ್ತಿದ್ದರು. ಅರವಿಂದ್ ಕೇಜ್ರಿವಾಲ್ ಅವರ ನಿವಾಸವನ್ನು ಅವರು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಪ್ರವೇಶಿಸಿದರು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಕಳ್ಳಬೇಟೆ ಆರೋಪ; ದೆಹಲಿ ಲೆಫ್ಟಿನೆಂಟ್ ಗವರ್ನರ್ ಎಸಿಬಿ ತನಿಖೆಗೆ ಆದೇಶ
ಬಿಜೆಪಿ 16 ಎಎಪಿ ಶಾಸಕರಿಗೆ ತಮ್ಮ ಪಕ್ಷಕ್ಕೆ ಬರಲು 15 ಕೋಟಿ ರೂ.ಗಳ ಆಫರ್ ನೀಡುತ್ತಿದೆ ಎಂಬ ಅರವಿಂದ್ ಕೇಜ್ರಿವಾಲ್ ಅವರ ಆರೋಪದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ದೆಹಲಿ ಎಲ್-ಜಿ ವಿಕೆ ಸಕ್ಸೇನಾ ಇಂದು ಶಿಫಾರಸು ಮಾಡಿದ್ದಾರೆ. ಈ ವಿಷಯವು ತನಿಖೆಗೆ ಅರ್ಹವಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ ಮತ್ತು ಆರೋಪಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.
VIDEO | Here’s what AAP legal cell head Sanjeev Nasiar (@Sanjeevnasiar) said after ACB officials left from Arvind Kejriwal’s residence.
“When the ACB team came here, they didn’t have a notice, but after taking instructions from someone, they have served us a notice. We will… pic.twitter.com/Fg9owYhgYI
— Press Trust of India (@PTI_News) February 7, 2025
ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ 16 ಎಎಪಿ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಆಫರ್‌ಗಳು ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಪಕ್ಷಾಂತರ ಮಾಡಿದರೆ ಅವರಿಗೆ ಸಚಿವ ಸ್ಥಾನಗಳು ಮತ್ತು ತಲಾ 15 ಕೋಟಿ ರೂ.ಗಳ ಭರವಸೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದರು.
2015ರಿಂದ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಎಎಪಿಗಿಂತ ಬಿಜೆಪಿಗೆ ಮೇಲುಗೈ ನೀಡಿವೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ತಮ್ಮ ಪಕ್ಷ ಸುಮಾರು 50 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಎಎಪಿ ಚುನಾವಣೋತ್ತರ ಸಮೀಕ್ಷೆಯ ಭವಿಷ್ಯವಾಣಿಗಳನ್ನು ತಿರಸ್ಕರಿಸಿದೆ. ಅದರ ಸಂಚಾಲಕ ಅರವಿಂದ್ ಕೇಜ್ರಿವಾಲ್ 4ನೇ ಬಾರಿಗೆ ಮುಖ್ಯಮಂತ್ರಿಯಾಗುವುದರೊಂದಿಗೆ ಮತ್ತೆ ಸರ್ಕಾರ ರಚಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ