AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indrani Mukerjea 2012 ಶೀನಾ ಬೋರಾ ಹತ್ಯೆ ಪ್ರಕರಣ: ಆರೂವರೆ ವರ್ಷದ ಬಳಿಕ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ

ನಿಗದಿತ ಸಮಯಕ್ಕೆ ದಾಖಲೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಗುರುವಾರ ಆಕೆಯನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡುತ್ತಿದ್ದೇವೆ. ಆರೂವರೆಗೆ ವರ್ಷ ತುಂಬಾ ದೀರ್ಘ ಸಮಯ ಎಂದು ನ್ಯಾಯಾಲಯ ಗುರುವಾರ ಹೇಳಿತ್ತು

Indrani Mukerjea 2012 ಶೀನಾ ಬೋರಾ ಹತ್ಯೆ ಪ್ರಕರಣ: ಆರೂವರೆ ವರ್ಷದ ಬಳಿಕ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿ
TV9 Web
| Edited By: |

Updated on:May 20, 2022 | 6:46 PM

Share

ದೆಹಲಿ: 2012ರಲ್ಲಿ ತನ್ನ ಮಗಳು ಶೀನಾ ಬೋರಾ ಹತ್ಯೆಯ (Sheena Bora Murder) ಆರೋಪದಲ್ಲಿ ಜೈಲುವಾಸ ಅನುಭವಿಸಿದ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ (Indrani Mukerjea) ಸುಪ್ರೀಂಕೋರ್ಟ್‌ನ (Supreme Court) ಆದೇಶದ ನಂತರ ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ನಿಗದಿತ ಸಮಯಕ್ಕೆ ದಾಖಲೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಗುರುವಾರ ಆಕೆಯನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡುತ್ತಿದ್ದೇವೆ. ಆರೂವರೆಗೆ ವರ್ಷ ತುಂಬಾ ದೀರ್ಘ ಸಮಯ ಎಂದು ನ್ಯಾಯಾಲಯ ಗುರುವಾರ ಹೇಳಿತ್ತು. 2015ರಿಂದ ಇಂದ್ರಾಣಿ ಮುಖರ್ಜಿ ಮುಂಬೈ ಜೈಲಿನಲ್ಲಿದ್ದು, ಸ್ಪೆಷಲ್ ಸಿಬಿಐ ಕೋರ್ಟ್ ಪದೇ ಪದೇ ಜಾಮೀನು ನಿರಾಕರಿಸುತ್ತಿದ್ದರಿಂದ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಜೈಲಿನಲ್ಲಿ ಈಗಾಗಲೇ ಸುದೀರ್ಘ ಕಾಲ ಶಿಕ್ಷೆ ಅನುಭವಿಸಿರುವುದರಿಂದ ಆಕೆಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರ್ಧರಿಸಿತ್ತು.ದೇಶ ಬಿಟ್ಟು ಹೋಗಬಾರದು ಮತ್ತು ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ ಎಂಬ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಇಂದ್ರಾಣಿ ಮುಖರ್ಜಿಯ ಪತಿ ಪೀಟರ್ ಮುಖರ್ಜಿ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದರೂ 2020 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.24 ವರ್ಷದ ಶೀನಾ ಬೋರಾಳ ಕೊಲೆ 2012ರ ಏಪ್ರಿಲ್‌ನಲ್ಲಿ ನಡೆದಿದ್ದು, ಆಕೆಯ ಶವವನ್ನು ಮುಂಬೈ ಪಕ್ಕದ ರಾಯಗಡದಲ್ಲಿ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶೀನಾ ಬೋರಾ ಇಂದ್ರಾಣಿ ಮುಖರ್ಜಿಯ ಬೇರೊಂದು ಸಂಬಂಧದಲ್ಲಿ ಹುಟ್ಟಿದ ಮಗಳು, ಸಾರ್ವಜನಿಕವಾಗಿ ಈಕೆ ತನ್ನ ಸಹೋದರಿ ಎಂದೇ ಇಂದ್ರಾಣಿ ಪರಿಚಯಿಸುತ್ತಿದ್ದರು. ಇಂದ್ರಾಣಿ ಮದುವೆಯಾಗಿದ್ದ  ಪೀಟರ್ ಮುಖರ್ಜಿಗೆ ಅವರ ಹಿಂದಿನ ದಾಂಪತ್ಯದಲ್ಲಿ ಹುಟ್ಟಿದ ಮಗ ರಾಹುಲ್ ಮುಖರ್ಜಿಯೊಂದಿಗೆ ಶೀನಾ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಈ ಸಂಬಂಧವನ್ನು ಇಂದ್ರಾಣಿ ಒಪ್ಪಲಿಲ್ಲ.

ಈ ಕೊಲೆ ನಡೆದಿದ್ದು ಮೂರು ವರ್ಷಗಳವರೆಗೆ ಬೆಳಕಿಗೆ ಬರಲೇ ಇಲ್ಲ. ಆ ಸಮಯದಲ್ಲಿ ಇಂದ್ರಾಣಿ ಮುಖರ್ಜಿ ಶೀನಾ ಬೋರಾ ಯುಎಸ್‌ಗೆ ತೆರಳಿದ್ದಾರೆ ಎಂದು ಸ್ನೇಹಿತರು ಮತ್ತು ಕುಟುಂಬಕ್ಕೆ ಹೇಳಿದ್ದರು. ಇನ್ನೂ ಜೈಲಿನಲ್ಲಿದ್ದಾಗ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ತಮ್ಮ 17 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದರು ಮತ್ತು 2019 ರಲ್ಲಿ ವಿಚ್ಛೇದನವನ್ನು ನೀಡಲಾಯಿತು.

ಇದನ್ನೂ ಓದಿ
Image
Indrani Mukerjea: ಶೀನಾ ಬೋರಾ ಕೊಲೆ ಕೇಸ್; ಕೊನೆಗೂ ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು
Image
ಥ್ರಿಲ್ಲರ್​ ಕಾದಂಬರಿಯಂತಾದ ಶೀನಾ ಬೋರಾ ಕೊಲೆ ಕೇಸ್​; ಕಾರ್ಯಪ್ರವೃತ್ತರಾದ ಇಂದ್ರಾಣಿ ಪರ ವಕೀಲರು !
Image
Sheena Bora Murder: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ; ಅಚ್ಚರಿಯ ವಿಷಯ ತಿಳಿಸಿದ ಇಂದ್ರಾಣಿ ಮುಖರ್ಜಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 6:20 pm, Fri, 20 May 22

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!