ಉತ್ತರಾಖಂಡ್: ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸೊಸೆ ಆರೋಪ ಮಾಡಿದ ಕೆಲ ದಿನಗಳ ಬಳಿಕ ಉತ್ತರಾಖಂಡ್ ಮಾಜಿ ಸಚಿವ ರಾಜೇಂದ್ರ ಬಹುಗುಣ ಡೆಹ್ರಾಡೂನ್ನ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಸಚಿವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ಆತ್ಮಹತ್ಯೆಗೂ ಮೊದಲು ಪೊಲೀಸರಿಗೆ ಕರೆ ಮಾಡಿದ್ದ, ಪೊಲೀಸರು ಭೇಟಿ ನೀಡುವಷ್ಟರಲ್ಲಿ ಮಾಜಿ ಸಚಿವ ರಾಜೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಬಳಸಿದ್ದ ಪಿಸ್ತೂಲ್ ಮೃತದೇಹದ ಬಳಿ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಬಹುಗುಣ ಅವರು ಟ್ಯಾಂಕ್ ಮೇಲೆ ಹತ್ತಿದ್ದರು. ಗುಂಡು ಹಾರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಅವರ ಜತೆ ಲೌಡ್‌ಸ್ಪೀಕರ್ ಸಹಾಯದಿಂದ ಪೊಲೀಸರು ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ, ತಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದರು. ಆತ್ಮಹತ್ಯೆ ನಿರ್ಧಾರ ಕೈಬಿಟ್ಟು ಕೆಳಕ್ಕೆ ಇಳಿಯುವ ಸೂಚನೆ ನೀಡಿದ್ದರು. ಆದರೆ ಹಠಾತ್ತನೆ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ; ದೇಹಕ್ಕೆ ಸಂಜೀವಿನಿಯಾಗಿರುವ ಅಮೃತ ಬಳ್ಳಿಯ ಉಪಯೋಗಗಳು ಇಲ್ಲಿವೆ
ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ಭಟ್ ಮಾತನಾಡಿ, ರಾಜೇಂದ್ರ ಬಹುಗುಣ ಅವರ ಸೊಸೆ ಮಾಡಿದ್ದ ಆರೋಪದಿಂದ ತೀವ್ರ ಬೇಸರಗೊಂಡಿದ್ದರು. ಅವರು ನೀರಿನ ಟ್ಯಾಂಕ್ ಏರುವ ಮೊದಲು ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ಪೊಲೀಸ್ ತಂಡವು ತಕ್ಷಣವೇ ಸ್ಥಳಕ್ಕೆ ತಲುಪಿದ್ದು, ಅವರನ್ನು ಕೆಳಗಿಳಿಸಲು ಮನವೊಲಿಸಲು ಪ್ರಯತ್ನಿಸಿತು, ಅದಕ್ಕೆ ಅವರು ಆರಂಭದಲ್ಲಿ ಒಪ್ಪಿದರು. ಆದರೆ, ಏಕಾಏಕಿ ತಮ್ಮ ಬಳಿಯಿದ್ದ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಅಪ್ರಾಪ್ತ ಬಾಲಕಿಯ ಹೇಳಿಕೆಯನ್ನು ದಾಖಲಿಸುವ ಮುನ್ನವೇ ಅವರು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಬಹುಗುಣ ಅವರ ಕುಟುಂಬದ ಪ್ರಕಾರ, ಅವರು ತಮ್ಮ ಸೊಸೆ ತನ್ನ ವಿರುದ್ಧ ಮಾಡಿದ ಆರೋಪಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಅತ್ತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆಗೆ ಬೆದರಿಕೆ, ನಿಂದನೆ ಮತ್ತು ಹಲ್ಲೆ ನಡೆಸಿದ್ದಕ್ಕಾಗಿ ಮತ್ತೊಬ್ಬ ನೆರೆಹೊರೆಯವರು ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಜೇಂದ್ರ ಬಹುಗುಣ ಅವರ ಪುತ್ರ ಅಜಯ್ ಬಹುಗುಣ ಅವರ ದೂರಿನ ಮೇರೆಗೆ ಸೊಸೆ, ಆಕೆಯ ತಂದೆ ಮತ್ತು ನೆರೆಹೊರೆಯವರು ಹೊರಿಸಿದ ಹಲ್ಲೆ ಆರೋಪದಿಂದ ಅವರನ್ನು ಆತ್ಮಹತ್ಯೆಗೆ ದೂಡಲಾಗಿದೆ ಎಂದು ಆರೋಪಿಸಲಾಗಿದೆ. ಕಾಂಗ್ರೆಸ್‌ನಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದ ಬಹುಗುಣ ಅವರಿಗೆ 2004-5ರಲ್ಲಿ ಎನ್‌ಡಿ ತಿವಾರಿ ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿತ್ತು. ರೋಡ್‌ವೇಸ್ ಒಕ್ಕೂಟದ ನಾಯಕರಾಗಿದ್ದ ಅವರು ಹಲ್ದ್ವಾನಿ ಡಿಪೋ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅಕ್ಟೋಬರ್ 31 ರಂದು ನಿವೃತ್ತರಾಗಿದ್ದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.