ಭಾರತ ಸೇರಿದಂತೆ 12 ರಾಷ್ಟ್ರಗಳಿಗೆ ಫೈಟರ್ ಜೆಟ್, ಕ್ಷಿಪಣಿ ರಫ್ತು ಮಾಡಲು ಜಪಾನ್ ಚಿಂತನೆ

ಭಾರತ ಸೇರಿದಂತೆ 12 ರಾಷ್ಟ್ರಗಳಿಗೆ ಫೈಟರ್ ಜೆಟ್, ಕ್ಷಿಪಣಿ ರಫ್ತು ಮಾಡಲು ಜಪಾನ್ ಚಿಂತನೆ
ಕಿಶಿದಾ ಜತೆ ಮೋದಿ

ನಿಕಟ ಮಿಲಿಟರಿ ಸಹಕಾರವನ್ನು ಹೆಚ್ಚಿಸಲು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಭದ್ರತೆಗೆ ಕೊಡುಗೆ ನೀಡಲು ತಮ್ಮ ರಕ್ಷಣಾ ಪಡೆಗಳ ನಡುವೆ ಸರಬರಾಜು ಮತ್ತು ಸೇವೆಗಳ ಪರಸ್ಪರ ಪೂರೈಕೆಗಾಗಿ ಜಪಾನ್ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ.

TV9kannada Web Team

| Edited By: Rashmi Kallakatta

May 27, 2022 | 9:48 PM

ದೆಹಲಿ: ಭಾರತ ಮತ್ತು ಇತರ 11 ದೇಶಗಳಿಗೆ ಕ್ಷಿಪಣಿಗಳು (missile) ಮತ್ತು ಜೆಟ್‌ಗಳು (jets) ಸೇರಿದಂತೆ ಪ್ರಬಲ ಮಿಲಿಟರಿ ಉಪಕರಣಗಳನ್ನು ರಫ್ತು ಮಾಡಲು ಜಪಾನ್  ಚಿಂತನೆ ನಡೆಸಿದೆ.ಇದು ರಕ್ಷಣಾ ಸಾಧನಗಳ ಉತ್ಪಾದನೆಯಲ್ಲಿ ಭಾರತ ಮತ್ತು ಜಪಾನ್ (Japan) ನಡುವಿನ ಸಹಕಾರಕ್ಕೆ ಉತ್ತೇಜನ ನೀಡಲಿದೆ.  ನಿಕ್ಕೈ ವರದಿಯ ಪ್ರಕಾರ ಜಪಾನ್, ಭಾರತ, ಆಸ್ಟ್ರೇಲಿಯಾ, ಕೆಲವು ಯುರೋಪಿಯನ್ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಿಗೆ ರಫ್ತು ಮಾಡಲು ಮುಂದಿನ ವರ್ಷ ಮಾರ್ಚ್ ವೇಳೆಗೆ ನಿಯಮಾವಳಿಗಳನ್ನು ಸರಾಗಗೊಳಿಸಲಾಗುವುದು. ಜಪಾನ್ ರಕ್ಷಣಾ ಸಾಧನಗಳ ವರ್ಗಾವಣೆಗೆ ಒಂದು ತತ್ವ ಸ್ಥಾಪಿಸಿದ್ದು ಇದು 2014 ರಲ್ಲಿ ಅವುಗಳ ರಫ್ತು ನಿಷೇಧಿಸುವ ನಿಯಮಗಳನ್ನು ಸಡಿಲಗೊಳಿಸಿತು. ಆದಾಗ್ಯೂ, ಇದು ಇನ್ನೂ ಪ್ರಬಲ ಶಸ್ತ್ರಾಸ್ತ್ರಗಳ ರಫ್ತುಗಳನ್ನು ನಿಷೇಧಿಸುತ್ತದೆ. ಮಂಗಳವಾರ ಟೋಕಿಯೊದಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆ (Quard Summit) ವೇಳೆಗೆ ನಡೆದ ಸಭೆಯಲ್ಲಿ ರಕ್ಷಣಾ ಉತ್ಪಾದನೆ ಸೇರಿದಂತೆ ದ್ವಿಪಕ್ಷೀಯ ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಜಪಾನ್ ಕೌಂಟರ್ ಫ್ಯುಮಿಯೊ ಕಿಶಿದಾ ಒಪ್ಪಿಕೊಂಡ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ನಿಕಟ ಮಿಲಿಟರಿ ಸಹಕಾರವನ್ನು ಹೆಚ್ಚಿಸಲು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಭದ್ರತೆಗೆ ಕೊಡುಗೆ ನೀಡಲು ತಮ್ಮ ರಕ್ಷಣಾ ಪಡೆಗಳ ನಡುವೆ ಸರಬರಾಜು ಮತ್ತು ಸೇವೆಗಳ ಪರಸ್ಪರ ಪೂರೈಕೆಗಾಗಿ ಜಪಾನ್ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ದೇಶಗಳಲ್ಲಿ ಭಾರತವೂ ಸೇರಿದೆ.

ಜಪಾನ್‌ನ ಸ್ವ-ರಕ್ಷಣಾ ಪಡೆಗಳು ಮತ್ತು ಭಾರತದ ಮಿಲಿಟರಿ ನಡುವಿನ ಸ್ವಾಧೀನ ಮತ್ತು ಕ್ರಾಸ್-ಸರ್ವಿಸಿಂಗ್ ಒಪ್ಪಂದಕ್ಕೆ (ACSA) ಸೆಪ್ಟೆಂಬರ್ 2020 ರಲ್ಲಿ ಸಹಿ ಹಾಕಲಾಯಿತು.

ಜಪಾನ್ ಸರ್ಕಾರವು ಟೋಕಿಯೊದೊಂದಿಗೆ ವೈಯಕ್ತಿಕ ಭದ್ರತಾ ಒಪ್ಪಂದಗಳಿಗೆ ಸಹಿ ಹಾಕಿದ ದೇಶಗಳೊಂದಿಗೆ ಸಹಕರಿಸುವ ಮೂಲಕ ಚೀನಾಕ್ಕೆ ಅಡ್ಡಿ ಪಡಿಸುವ ಗುರಿಯನ್ನು ಹೊಂದಿದೆ” ಎಂದು ನಿಕ್ಕೈ ವರದಿ ಹೇಳಿದೆ. ಈ ದೇಶಗಳಲ್ಲಿ ವಿಯೆಟ್ನಾಂ, ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಯುಎಸ್, ಬ್ರಿಟನ್, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ಸೇರಿವೆ.

2014 ರ ತತ್ವದ ಪ್ರಕಾರ, ಜಪಾನ್‌ನೊಂದಿಗೆ ಜಂಟಿಯಾಗಿ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದ ದೇಶಗಳಿಗೆ ರಕ್ಷಣೆ, ಸಾರಿಗೆ, ಎಚ್ಚರಿಕೆ, ಕಣ್ಗಾವಲು ಮತ್ತು ಮೈನ್‌ಸ್ವೀಪಿಂಗ್ ಕಾರ್ಯಾಚರಣೆಗಳಿಗ ಉಪಕರಣಗಳಿಗೆ ಸೀಮಿತವಾಗಿದೆ. ರಕ್ಷಣಾ ರಫ್ತುಗಳ ಮೇಲಿನ ಹೊಸ ನಿಯಮಗಳು ಜೂನ್‌ನಲ್ಲಿ ಅಂತಿಮಗೊಳ್ಳಲಿರುವ ಆರ್ಥಿಕ, ಹಣಕಾಸಿನ ನಿರ್ವಹಣೆ ಮತ್ತು ಸುಧಾರಣೆಯ ಮೇಲಿನ ಜಪಾನ್ ಸರ್ಕಾರದ ನೀತಿಯ ಭಾಗವಾಗಿದೆ.

ಈ ವರ್ಷದ ಅಂತ್ಯದ ವೇಳೆಗೆ ಜಪಾನ್‌ನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ರೂಪಿಸಿದ ನಂತರ ರಕ್ಷಣಾ ರಫ್ತುಗಳ ತತ್ವವನ್ನು ಪರಿಷ್ಕರಿಸಲಾಗುವುದು.  ಭಾರತ ಮತ್ತು ಜಪಾನ್ ಈಗ ಇಂಡೋ-ಪೆಸಿಫಿಕ್‌ನಲ್ಲಿ ಬಲವಾದ ಭದ್ರತಾ ಸಹಕಾರವನ್ನು ಹೊಂದಿವೆ. ಹೆಚ್ಚಿನ ಸಹಕಾರವು ಪ್ರದೇಶದಾದ್ಯಂತ ಚೀನಾದ ಆಕ್ರಮಣಕಾರಿ ನಿಲುವಿನ ಬಗ್ಗೆ ಹಂಚಿಕೊಂಡ ಕಳವಳಗಳಿಂದ ಪ್ರೇರೇಪಿಸಲ್ಪಟ್ಟಿದೆ.

ಭಾರತದಲ್ಲಿ ರಕ್ಷಣಾ ಉಪಕರಣಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ವಿಷಯದ ಬಗ್ಗೆ ಮೋದಿ ಅವರು ಕಿಶಿದಾ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಬ್ರಿಟನ್ ಮತ್ತು ಅಮೆರಿಕದೊಂದಿಗೆ ಹೊಸ ಯುದ್ಧ ಜೆಟ್‌ಗಳು ಮತ್ತು ವಿಮಾನ ವಿರೋಧಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಲ್ಲಿ ಜಪಾನ್ ಕೆಲಸ ಮಾಡುತ್ತಿದೆ.

ಇದನ್ನೂ ಓದಿ

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada