ಸದ್ಗುರು ಮಾರ್ಗದರ್ಶನದಲ್ಲಿ ಗ್ರಾಮೀಣ ಪುನರುಜ್ಜೀವನ ಯೋಜನೆ; ಸಮುದಾಯದ ಏಳ್ಗೆಗೆ ಹಾಕುತ್ತಿರುವ ಶ್ರಮಗಳೇನು?
Action for Rural Rejuvenation Project: 2003ರಲ್ಲಿ ಸದ್ಗುರು ಸ್ಥಾಪಿಸಿದ ಆ್ಯಕ್ಷನ್ ಫಾರ್ ರೂರಲ್ ರಿಜುವಿನೇಶನ್ ಪ್ರಾಜೆಕ್ಟ್ ದಕ್ಷಿಣ ಭಾರತದಲ್ಲಿ 7,500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪರಿವರ್ತನೆ ತಂದಿದೆ. ಆರೋಗ್ಯ, ನೈರ್ಮಲ್ಯ ಮತ್ತು ಸಮುದಾಯ ಏಳ್ಗೆ ಈ ಮೂರಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದ ಜನರು ಸ್ವಾವಲಂಬಿಗಳಾಗಿ ಬದುಕಲು ಈ ಪ್ರಾಜೆಕ್ಟ್ ನೆರವಾಗುತ್ತಿದೆ.
ಬೆಂಗಳೂರು, ಜುಲೈ 17: ಸದ್ಗುರು ಜಗ್ಗಿವಾಸುದೇವ್ ಸಂಸ್ಥಾಪಿಸಿದ ಆ್ಯಕ್ಷನ್ ಫಾರ್ ರೂರಲ್ ರಿಜುವಿನೇಶನ್ ಪ್ರಾಜೆಕ್ಟ್ ಗ್ರಾಮೀಣ ಭಾಗದಲ್ಲಿ ಮಹತ್ತರ ಪರಿವರ್ತನೆಗೆ ಶ್ರಮಿಸುತ್ತಿದೆ. ಗ್ರಾಮೀಣ ಪ್ರದೇಶದ ಸಮುದಾಯದ ಪುನಶ್ಚೇತನ, ವಿಪತ್ತು ನಿರ್ವಹಣೆ, ಆರೋಗ್ಯ ಪಾಲನೆ, ಬದುಕು ನಿರ್ವಹಣೆ ಕಾರ್ಯಕ್ರಮಗಳನ್ನು ಕಳೆದ 21 ವರ್ಷಗಳಿಂದಲೂ ನಡೆಸಲಾಗುತ್ತಿದೆ. 2003ರಲ್ಲಿ ಸದ್ಗುರು ಆರಂಭಿಸಿದ ಈ ಪ್ರಾಜೆಕ್ಟ್ ದಕ್ಷಿಣ ಭಾರತದ 7,500ಕ್ಕೂ ಹೆಚ್ಚು ಗ್ರಾಮಗಳ ಮೇಲೆ ಪರಿಣಾಮ ಬೀರಿದೆ. ಆರೋಗ್ಯ, ನೈರ್ಮಲ್ಯ ಮತ್ತು ಸಮುದಾಯ ಏಳ್ಗೆ ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ಹಾಕಿದೆ. 21 ವರ್ಷಗಳಿಂದ ಮಾಡಲಾಗುತ್ತಿರುವ ಸಾಧನೆಗಳನ್ನು ಹೇಳುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಅದರ ಮುಖ್ಯಾಂಶಗಳು ಈ ಕೆಳಕಂಡಂತಿವೆ:
ಶೇ 64ರಷ್ಟು ಭಾರತೀಯರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಾರೆ. ಗ್ರಾಮೀಣ ಭಾಗದಲ್ಲಿ 5 ವರ್ಷದೊಳಗಿನ ಶೇ. 70ರಷ್ಟು ಮಕ್ಕಳು ಮತ್ತು ಶೇ. 50ರಷ್ಟು ಮಹಿಳೆಯರು ಅನೀಮಿಯಾದಿಂದ ಬಳಲುತ್ತಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆ ಇರುವ ಶೇ. 80ರಷ್ಟು ವ್ಯಕ್ತಿಗಳಿಗೆ ಅಗತ್ಯ ನೆರವು ಸಿಗುತ್ತಿಲ್ಲ ಎಂದು ಈ ಪ್ರಾಜೆಕ್ಟ್ ಸಮಸ್ಯೆ ಎತ್ತಿತೋರಿಸಿದೆ.
ಇದನ್ನೂ ಓದಿ: ಕರ್ನಾಟಕದಂತೆ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ 75 ಮೀಸಲಾತಿ ಮಸೂದೆ ತಂದಿತ್ತು ಹರ್ಯಾಣ ಸರ್ಕಾರ; ಆಮೇಲೇನಾಯ್ತು?
ಗ್ರಾಮೀಣ ಪುನಶ್ಚೇತನ ಯೋಜನೆಯ ಸಾಧನೆಗಳು
- ಹೆಲ್ತ್ ಚೆಕಪ್ ಮತ್ತು ಮನೆಬಾಗಿಲಿನಲ್ಲಿ ಚಿಕಿತ್ಸೆ ಸೇವೆಯನ್ನು ಜನಸಾಮಾನ್ಯರಿಗೆ ಒದಗಿಸುತ್ತಿದೆ.
- ಗರ್ಭಿಣಿಯರಿಗೆ ಪ್ರತೀ ವಾರವೂ ಪೌಷ್ಟಿಕಾಂಶ ಒದಗಿಸಲಾಗುತ್ತಿದೆ.
- ಕಸ ನಿರ್ವಹಣೆ ಯೋಜನೆ ಅಡಿಯಲ್ಲಿ ಕಳೆದ 7 ವರ್ಷಗಳಿಂದ 1,278 ಟನ್ ಕಸವನ್ನು ಸಂಗ್ರಹಿಸಲಾಗಿದೆ.
- ಬುಡಕಟ್ಟು ಮಹಿಳೆಯರು ವರ್ಷಕ್ಕೆ 1.78 ಕೋಟಿ ರೂ ಆದಾಯ ಗಳಿಸುವ ಲಾಭದಾಯಕ ಉದ್ಯಮಗಳನ್ನು ನಡೆಸಲು ಶಕ್ತರನ್ನಾಗಿ ಮಾಡಿದೆ.
- ಗ್ರಾಮೀಣ ಭಾಗದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ, ಮಾರ್ಷಲ್ ಆರ್ಟ್ಸ್, ಡ್ಯಾನ್ಸ್ ಕ್ಲಾಸ್ಗಳನ್ನು ನಡೆಸಲಾಗುತ್ತಿದೆ.
- ರೈತರ ಆದಾಯ ಹೆಚ್ಚಿಸಲು ಅವರಿಗೆ ಸೂಕ್ತ ತರಬೇತಿ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ನೆರವಾಗಲಾಗುತ್ತಿದೆ.
- 60,000ಕ್ಕೂ ಹೆಚ್ಚು ಜನರು ವಾರ್ಷಿಕ ಕ್ರೀಡೋತ್ಸವ, ಗ್ರಾಮೋತ್ಸವದಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಮುದಾಯದ ಏಳ್ಗೆಗೆ ಸಹಕಾರಿಯಾಗುತ್ತಿದೆ.
- ವಿಪತ್ತುಗಳ ಸಂದರ್ಭದಲ್ಲಿ ಹಸಿವಿನ ಸಮಸ್ಯೆ ನಿಯಂತ್ರಿಸಲು ಕ್ಷಿಪ್ರವಾಗಿ ಸ್ಪಂದಿಸಲಾಗುತ್ತಿದೆ.
Action for Rural Rejuvenation is a rural revitalization program that has impacted over 7500 villages in rural Southern India.
Under Sadhguru’s guidance, it takes a comprehensive approach to the challenges faced by rural communities by implementing a range of holistic health… pic.twitter.com/UiTj4OsVtS
— Conscious Planet #SaveSoil (@cpsavesoil) July 16, 2024
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ