ಬೆಂಗಳೂರು, ಸೆ.02: ಭಾರತದ ಮೊಟ್ಟ ಮೊದಲ ಸೂರ್ಯಯಾನದ ಮೊದಲ ಹೆಜ್ಜೆ ಇಂದು ಯಶಸ್ವಿಯಾಗಿದೆ. ಆದಿತ್ಯ ಎಲ್1 ಉಪಗ್ರಹ ಹೊತ್ತ PSLV-C57 ರಾಕೆಟ್ ಬೆಳಗ್ಗೆ 11 ಗಂಟೆ 50 ನಿಮಿಷಕ್ಕೆ ಆಕಾಶಕ್ಕೆ ಜಿಗಿದಿದ್ದು, ಭೂಕಕ್ಷೆಗೆ ಯಶಸ್ವಿಯಾಗಿ ಸೇರಿದೆ. ಇನ್ನು ನೌಕೆ ಯಶಸ್ವಿ ಉಡಾವಣೆ ಬಗ್ಗೆ ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ ನೀಡಿದ್ದು ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಇಸ್ರೋದ ಮಹತ್ವಾಕಾಂಕ್ಷಿ ಆದಿತ್ಯ ಎಲ್-1 ನೌಕೆ ಉಡಾವಣೆ ಯಶಸ್ವಿಯಾಗಿದೆ. ಈ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು, ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ವಿಜ್ಞಾನಿಗಳು, ಇಂಜಿನಿಯರ್ಗಳು, ಸಿಬ್ಬಂದಿ ವರ್ಗ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಇನ್ನು ಆದಿತ್ಯ L-1 ನೌಕೆ ಯಶಸ್ವಿ ಉಡಾವಣೆ ಹಿನ್ನೆಲೆ ವಿಜ್ಞಾನಿಗಳ ಸಂಭ್ರಮಾಚರಣೆ ಜೋರಾಗಿದೆ.
ಇದನ್ನೂ ಓದಿ: ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ
ಚಂದ್ರಯಾನ-3 ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರೆಸಿದೆ. ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ವಿಜ್ಞಾನಿಗಳು, ಇಂಜಿನಿಯರ್ಗಳು ಎಲ್ಲರಿಗೂ ಅಭಿನಂದನೆಗಳು. ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
After the success of Chandrayaan-3, India continues its space journey.
Congratulations to our scientists and engineers at @isro for the successful launch of India’s first Solar Mission, Aditya -L1.
Our tireless scientific efforts will continue in order to develop better…
— Narendra Modi (@narendramodi) September 2, 2023
ಭೂಮಿಯಿಂದ ಯಶಸ್ವಿಯಾಗಿ ಪ್ರಯಾಣ ಆರಂಭಿಸಿರುವ ಆದಿತ್ಯ ಎಲ್ 1 ನೌಕೆ ಇನ್ನು ನಾಲ್ಕು ತಿಂಗಳುಗಳ ಬಳಿಕ ತನ್ನ ನಿಗದಿತ ಕಕ್ಷೆಗೆ ತಲುಪಲಿದೆ. ಸೂರ್ಯ ನಿಂದ 148.5 ಮಿಲಿಯನ್ ಕಿಲೋ ಮೀಟರ್ ಮತ್ತು ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದಲ್ಲಿರುವ L1 ಪಾಯಿಂಟ್ ತಲುಪಲು ಈ ನೌಕೆಗೆ ಇನ್ನು ನಾಲ್ಕು ತಿಂಗಳುಗಳ ಕಾಲ ಬೇಕು. ಅಂದ್ರೆ ಇಂದು ಸೆಪ್ಟಂಬರ್ 2 2023ರಂದು ಹಾರಿಬಿಟ್ಟಿರುವ ಆದಿತ್ಯ ನೌಕೆ 2024ರ ಜನವರಿ 12ರಂದು ಎಲ್ 1 ಕಕ್ಷೆಗೆ ತಲುಪಲಿದೆ. ಭೂಕಕ್ಷೆಗೆ ಸೇರಿಸಿದ ಬಳಿಕ ಕ್ರೂಸ್ ಫೇಸ್ನ ವೇಗವನ್ನು ಹೆಚ್ಚಿಸಲಾಗುತ್ತೆ. ಬಳಿಕ ಅದನ್ನು ಹಾಲೋ ಆರ್ಬಿಟ್ಗೆ ಸೇರಿಸಲಾಗುತ್ತದೆ. ಭೂಮಿ ಮತ್ತು ಚಂದ್ರನ ಪ್ರಭಾವಲಯಕ್ಕೆ ಸಿಲುಕುವ ನೌಕೆ ಹಾಲೋ ಆಕಾರದಲ್ಲಿ ಇದು ತಿರುಗುವ ಕಾರಣದಿಂದ ಇದನ್ನು ಹಾಲೋ ಆರ್ಬಿಟ್ ಎಂದು ಕರೆಯಲಾಗುತ್ತದೆ. ಬಳಿಕ ಅಲ್ಲಿಂದ ಬೂಸ್ಟ್ ಮಾಡುವ ಮೂಲಕ L1 ಕಡೆಗೆ ಪಾಯಿಂಟ್ಗೆ ಸೇರಿಸಲಾಗುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ