Republic Day: 40 ವರ್ಷಗಳ ನಂತರ ಸಾರೋಟಿನಲ್ಲಿ ಬಂದ ಮುರ್ಮು, ಮ್ಯಾಕ್ರನ್, ಇದಕ್ಕಾಗಿ ಪಾಕಿಸ್ತಾನದ ಜತೆಗೆ ಟಾಸ್ ಗೆದ್ದ ಭಾರತ
buggy: ಭಾರತದ ಪದ್ಧತಿಯಂತೆ ಈ ವರ್ಷದ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ರಾಷ್ಟ್ರಪತಿಯವರ (ದ್ರೌಪದಿ ಮುರ್ಮು) ಜತೆಗೆ ದೆಹಲಿಯ ಕರ್ತವ್ಯ ಪಥಕ್ಕೆ ಸಾರೋಟುನಲ್ಲಿ ಬಂದಿದ್ದಾರೆ. ಒಂದು ದೇಶದ ನಾಯಕನಿಗೆ ಭದ್ರತೆ ವಿಚಾರವಾಗಿ ಅನೇಕ ಬೆಂಗಾವಲು ವ್ಯವಸ್ಥೆಗಳನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಆ ಪದ್ಧತಿಯನ್ನು ಮುರಿದು, ಭಾರತದ ರಾಷ್ಟ್ರಪತಿ ಹಾಗೂ ಫ್ರಾನ್ಸ್ ಅಧ್ಯಕ್ಷರು ಜತೆಯಾಗಿ ಸಾರೋಟುನಲ್ಲಿ ಬಂದಿದ್ದಾರೆ.
ಭಾರತ ಇಂದು 75ನೇ ಗಣರಾಜ್ಯೋತ್ಸವವನ್ನು(Republic Day) ಆಚರಣೆ ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ದೇಶದ ರಾಜಧಾನಿ ದೆಹಲಿಯಲ್ಲೂ ಗಣರಾಜ್ಯೋತ್ಸವವನ್ನು ಆಚರಣೆಯನ್ನು ಮಾಡಲಾಗಿದೆ. ಭಾರತದ ಪದ್ಧತಿಯಂತೆ ಈ ವರ್ಷದ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ರಾಷ್ಟ್ರಪತಿಯವರ (ದ್ರೌಪದಿ ಮುರ್ಮು) ಜತೆಗೆ ದೆಹಲಿಯ ಕರ್ತವ್ಯ ಪಥಕ್ಕೆ ಸಾರೋಟಿನಲ್ಲಿ ಬಂದಿದ್ದಾರೆ. ಒಂದು ದೇಶದ ನಾಯಕನಿಗೆ ಭದ್ರತೆ ವಿಚಾರವಾಗಿ ಅನೇಕ ಬೆಂಗಾವಲು ವ್ಯವಸ್ಥೆಗಳನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಆ ಪದ್ಧತಿಯನ್ನು ಮುರಿದು, ಭಾರತದ ರಾಷ್ಟ್ರಪತಿ ಹಾಗೂ ಫ್ರಾನ್ಸ್ ಅಧ್ಯಕ್ಷರು ಜತೆಯಾಗಿ ಸಾರೋಟಿನಲ್ಲಿ ಬಂದಿದ್ದಾರೆ. ಈ ಸಾರೋಟಿಗೆ ಒಂದು ದೊಡ್ಡ ಇತಿಹಾಸವೇ ಇದೆ.
ಪ್ರತಿ ವರ್ಷವೂ ಭಾರತದ ಗಣರಾಜ್ಯೋತ್ಸವಕ್ಕೆ ಬರುವ ಅತಿಥಿಗಳಿಗೆ ಬಿಗಿ ಭದ್ರತೆ ಮೂಲಕವೇ ರಾಷ್ಟ್ರ ಭವನಕ್ಕೆ ಬರುತ್ತಾರೆ. ಆದರೆ ಈ ಬಾರಿ ಭಾರತ ಹಳೆಯ ಪದ್ಧತಿಯನನ್ನು ಅನುಸರಿಸಿದೆ. ಸಾಮಾನ್ಯ ಬೇರೆ ದೇಶದ ಅಧ್ಯಕ್ಷರು ಅಥವಾ ನಾಯಕರು ಭಾರತಕ್ಕೆ ಬಂದಾಗ ಅವರಿಗೆ ವಿಶೇಷ ರಕ್ಷಣೆಯನ್ನು ನೀಡಲಾಗುತ್ತದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಇಂದು ಕರ್ತವ್ಯಪಥಕ್ಕೆ ಬರುವಾಗ ಸಾರೋಟಿನಲ್ಲಿ ಬಂದರು. ಬ್ರಿಟಿಷರ ಕಾಲದಲ್ಲಿ ಈ ಸಾರೋಟುಗಳನ್ನು ಬಳಸಲಾಗಿತ್ತು. ಬ್ರಿಟಿಷರು ಭಾರತದಲ್ಲಿ ಈ ಪದ್ಧತಿಯನ್ನು (ಸಾರೋಟಿ) ಬೆಳೆಸಿಕೊಂಡು ಬಂದಿದ್ದರು. ಇದೀಗ ಈ ಸಂಸ್ಕೃತಿಯನ್ನು ಭಾರತ ಅನುಸರಿಸುತ್ತಿದ್ದರು ಎಂದು ಹೇಳಲಾಗಿದೆ.
#WATCH | Delhi | President Droupadi Murmu and French President Emmanuel Macron leave for the Kartavya Path, in a special presidential carriage.#RepublicDay2024 pic.twitter.com/gH1I6kjFUV
— ANI (@ANI) January 26, 2024
ಗಣರಾಜ್ಯೋತ್ಸವದಲ್ಲಿ ಸಾರೋಟು ಬಳಕೆ ಯಾಕಿರಲಿಲ್ಲ?
1984ರವರೆಗೆ ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಈ ಸಾರೋಟುಗಳನ್ನು ಬಳಕೆ ಮಾಡಲಾಗಿತ್ತು. ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಈ ಸಾರೋಟು ಸ್ಥಗಿತಗೊಂಡಿತು. ಆದರೆ 2014ರಲ್ಲಿ, ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾರೋಟುಗಳನ್ನು ಬಳಕೆ ಮಾಡಿದರು. ಭದ್ರತಾ ಕಾರಣಗಳಿಂದಾಗಿ 30 ವರ್ಷಗೊಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅದರ ಬಳಕೆ ಸ್ಥಗಿತಗೊಂಡಿತ್ತು. ಇದಕ್ಕೂ ಮೊದಲು ಅಂದರೆ 32 ವರ್ಷಗಳ ಹಿಂದೆ ಮಾಜಿ ರಾಷ್ಟ್ರಪತಿ ದಿವಂಗತ ಫಕ್ರುದ್ದೀನ್ ಅಲಿ ಅಹ್ಮದ್ ಅವರು ರಾಷ್ಟ್ರಪತಿ ಭವನದಿಂದ ಭವನ ಗೇಟ್ವರೆಗೆ ಈ ಸಾರೋಟು ಬಳಸುತ್ತಿದ್ದರು. ಗೇಟ್ನ ನಂತರ ಅವರು ಕಾರನ್ನು ಬಳಸುತ್ತಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಭಾರತದ ರಕ್ಷಣಾ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನ ಇಲ್ಲಿದೆ
ರಾಷ್ಟ್ರಪತಿಗಳು ಸಾರೋಟುಗಳನ್ನು ಬಳಸುವ ಹಿಂದಿನ ಕಥೆ
ಬ್ರಿಟಿಷರ ಕಾಲದಲ್ಲಿ ಆರು ಕುದುರೆಗಳನ್ನು ಹೊಂದಿರುವ ಸಾರೋಟನ್ನು ಭಾರತದ ವೈಸರಾಯ್ ಬಳಸುತ್ತಿದ್ದರು. ಆಗಿನ ರಾಜಮನೆತನದ ವ್ಯಕ್ತಿಗಳು ಹಾಗೂ ಅಂದಿನ ವೈಸರಾಯಿಗಳು ಸುತ್ತಾಡಲು ಈ ಸಾರೋಟು ಬಳಸುತ್ತಿದ್ದರು. ಬ್ರಿಟಿಷ್ ಆಳ್ವಿಕೆ ನಂತರ ಭಾರತ ರಾಷ್ಟ್ರಪತಿಗಳು ಇದನ್ನು ಬಳಸಲು ಶುರು ಮಾಡಿದರು.
ಇದಕ್ಕೂ ಮೊದಲು ಬ್ರಿಟಿಷರ್ ಬಳಸುತ್ತಿದ್ದ ಈ ಸಾರೋಟುನ್ನು ಪಡೆಯಲು ಪಾಕಿಸ್ತಾನ ದೊಡ್ಡ ಪ್ರಯತ್ನವನ್ನು ಮಾಡಿತ್ತು. ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡ ನಂತರ ಪಾಕಿಸ್ತಾನ ಈ ಸಾರೋಟು ನಮಗೆ ಬೇಕು ಎಂಬ ಬೇಡಿಕೆಯನ್ನು ಇಟ್ಟಿತ್ತು. ಆದರೆ ಭಾರತ ಇದಕ್ಕೆ ಒಪ್ಪಿರಲಿಲ್ಲ. ಇದಕ್ಕಾಗಿ ನ್ಯಾಣದ ಟಾಸ್ ಹಾಕಲಾಯಿತು. ಈ ಟಾಸ್ನಲ್ಲಿ ಭಾರತ ಗೆದ್ದು ಈ ಸಾರೋಟುನ್ನು ತನ್ನ ಬಳಿಯೇ ಉಳಿಸಿಕೊಂಡಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Fri, 26 January 24