ಬಡ ಹಣ್ಣಿನ ವ್ಯಾಪಾರಿಗೆ ದಾರಿಯಲ್ಲಿ ಸಿಕ್ಕಿತು ಚಿನ್ನ, ಮುಂದೇನಾಯ್ತು ಅಂತಾ ಗೊತ್ತಾದರೆ ಅಚ್ಚರಿ ಪಡುತ್ತೀರಿ!

ಇದರೊಂದಿಗೆ ಮುಹಮ್ಮದ್ ವಾಲಿಯವರ ಪ್ರಾಮಾಣಿಕತೆಯನ್ನು ಮೆಚ್ಚಿದ ರಾಮಚಂದ್ರ ಅವರು ಉದಾರವಾಗಿ ಐದು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಿದರು. ದಿನಕ್ಕೆ 1000 ರೂಪಾಯಿ ವ್ಯಾಪಾರ ಮಾಡುವ ಸಾಮಾನ್ಯ ಹಣ್ಣು ಮಾರಾಟಗಾರ ಮಹಮ್ಮದ್ ವಾಲಿ ಮೂರು ತೊಲ ಚಿನ್ನವನ್ನು ಕಂಡು ಪ್ರಾಮಾಣಿಕವಾಗಿ ಠಾಣೆಗೆ ತಂದು ಕಳೆದುಕೊಂಡ ಸಂತ್ರಸ್ತರಿಗೆ ಹಿಂದಿರುಗಿಸಿರುವುದು ಪೊಲೀಸರ ಮೆಚ್ಚುಗೆಗೆ ಪಾತ್ರವಾಗಿದೆ.

ಬಡ ಹಣ್ಣಿನ ವ್ಯಾಪಾರಿಗೆ ದಾರಿಯಲ್ಲಿ ಸಿಕ್ಕಿತು ಚಿನ್ನ, ಮುಂದೇನಾಯ್ತು ಅಂತಾ ಗೊತ್ತಾದರೆ ಅಚ್ಚರಿ ಪಡುತ್ತೀರಿ!
ಬಡ ಹಣ್ಣಿನ ವ್ಯಾಪಾರಿಗೆ ದಾರಿಯಲ್ಲಿ ಸಿಕ್ಕಿತು ಚಿನ್ನ! ಮುಂದೇನಾಯ್ತು
Follow us
ಸಾಧು ಶ್ರೀನಾಥ್​
|

Updated on:Jan 26, 2024 | 3:05 PM

ಅನಂತಪುರ, ಜನವರಿ 26: ರಸ್ತೆಯಲ್ಲಿ ಹೋಗುವಾಗ 100 ರೂಪಾಯಿ ಸಿಕ್ಕರೆ ಏನು ಮಾಡ್ತಾರೆ.. ಖುಷಿಯಿಂದ ತೆಗೆದುಕೊಂಡು ಜೇಬಿಗೆ ಹಾಕಿಕೊಳ್ಳುತ್ತಿದ್ದರು.. ಅಷ್ಟಲ್ಲದೆ ಇನ್ನೇನು ಮಾಡುತ್ತಾರೆ ಅಲ್ಲವಾ.. ಅದೇ ಅಮೂಲ್ಯ ಚಿನ್ನ ಸಿಕ್ಕರೆ.. ಹಬ್ಬ ಆಚರಿಸಿದಷ್ಟು ಸಂತೋಷ ಆಗುತ್ತೆ ಅಷ್ಟೆ, ಅದೂ ಇಂದಿನ ದಿನಮಾನದಲ್ಲಿ ಹೀಗೆ ಮಾಡುವುದು ನಿರೀಕ್ಷಿತ.. ಆದ್ರೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ 3 ತೊಲದಷ್ಟು ಚಿನ್ನಾಭರಣ ಸಿಕ್ಕಿತು. ಆದರೆ ಆತ ಮಾಡಿದ್ದೇನು ಗೊತ್ತಾದ್ರೆ ನೀವು ಶಾಕ್ ಆಗ್ತೀರ. ಅನಂತಪುರದಲ್ಲಿ ಪೇಟೆ ಬೀದಿಯಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿದೆ. ಅನಂತಪುರದಲ್ಲಿ ಈ ಸುದ್ದಿ ಚರ್ಚೆಯ ವಿಷಯವಾಗಿದೆ. ವಿವರಗಳಿಗೆ ಹೋದರೆ..

ಅನಂತಪುರದ ಹೌಸಿಂಗ್ ಬೋರ್ಡ್ ನಿವಾಸಿ ರಾಮಚಂದ್ರ ಎಂಬುವರು ಗುರುವಾರ ಸ್ಟೇಟ್ ಬ್ಯಾಂಕ್ ಆಫ್ ಹೌಸಿಂಗ್ ಬೋರ್ಡ್ ಗೆ ತೆರಳಿ ಖಾತೆಗೆ ಒಂದಷ್ಟು ಹಣ ಹಾಕಿದ್ದರು. ಬಳಿಕ ದ್ವಿಚಕ್ರ ವಾಹನದಲ್ಲಿ ಸ್ಥಳೀಯ ಡಿ ಮಾರ್ಟ್ ಬಳಿ ಖರೀದಿಗೆ ತೆರಳಿದ್ದರು. ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೀಗೆ ತೆರಳುವಾಗ ಮೂರು ತೊಲ ಬಂಗಾರದ ಒಡವೆಗಳಿದ್ದ ಚೀಲವನ್ನು ನೇತುಹಾಕಿಕೊಂಡು ಹೋಗಿದ್ದರು. ಆದರೆ ದಾರಿಯಲ್ಲಿ ಅದೆಲ್ಲೋ ಚೀಲ ಬಿದ್ದುಹೋಗಿದೆ.

ಆದರೆ ಅದು ರಾಮಚಂದ್ರ ಗಮನಕ್ಕೆ ಬಂದಿಲ್ಲ, ಹಾಗೆಯೇ ಮನೆಗೆ ಹೋಗಿದ್ದಾರೆ. ಆದರೆ, ಅದೇ ವೇಳೆ ಅದೇ ಮಾರ್ಗವಾಗಿ ಹೋಗುತ್ತಿದ್ದ ಹಣ್ಣಿನ ವ್ಯಾಪಾರಿ ಮೊಹಮ್ಮದ್ ವಾಲಿ ಎಂಬುವವರಿಗೆ ಆ ಚಿನ್ನದ ಚೀಲ ಸಿಕ್ಕಿದೆ. ತಕ್ಷಣ ವಾಲಿ ಅಲ್ಲಿದ್ದವರನ್ನು ಕೇಳಿದ್ದಾರೆ. ಆದರೆ ಅದು ಯಾರ ಬ್ಯಾಗ್ ಎಂಬುದು ಸ್ಪಷ್ಟವಾಗದ ಕಾರಣ ಅದನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಬ್ಯಾಗ್‌ನಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿದಾಗ ಚಿನ್ನದ ಸರ ಹಾಗೂ ಒಂದು ಜೊತೆ ಕಿವಿಯೋಲೆಗಳು ಪತ್ತೆಯಾಗಿವೆ. ಅದ ಕಂಡು ಅವರು ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ. ಬ್ಯಾಗ್ ನಲ್ಲಿ ಸಿಕ್ಕ ಬ್ಯಾಂಕ್ ಪಾಸ್ ಬುಕ್ ಆಧರಿಸಿ ಅದು ರಾಮಚಂದ್ರ ಅವರದ್ದು ಎಂಬುದು ಅವರ ತಿಳಿವಳಿಕೆಗೆ ಬಂದಿದೆ.

ಚಿನ್ನವಿದ್ದ ಬ್ಯಾಗ್ ನಲ್ಲಿ ರಾಮಚಂದ್ರ ಅವರು ಬ್ಯಾಂಕ್ ಪಾಸ್ ಬುಕ್, ರಿಸಿಪ್ಟ್​​ ಕೂಡ ಇಟ್ಟಿದ್ದ ಕಾರಣ ಪತ್ತೆ ಸುಲಭವಾಗಿದೆ. ಹಣ್ಣಿನ ವ್ಯಾಪಾರಿ ಮೊಹಮ್ಮದ್ ವಾಲಿ ತಡಮಾಡದೆ ಚಿನ್ನದ ಬ್ಯಾಗ್ ಸಮೇತ ಅನಂತಪುರದ ನಾಲ್ಕನೇ ಟೌನ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಲ್ಲಿ ಬ್ಯಾಗ್​​ ಕಳೆದುಕೊಂಡಿದ್ದ ರಾಮಚಂದ್ರ ಅವರನ್ನು ಕರೆಸಿದ್ದಾರೆ. ಆಗಲೇ ಚಿನ್ನದ ಚೀಲ ಕಳೆದುಕೊಂಡಿದ್ದ ರಾಮಚಂದ್ರ ಗಾಬರಿಗೊಂಡಿದ್ದರು. ಅದೇ ಆತಂಕದಲ್ಲಿ ಠಾಣೆಯತ್ತ ಓಡೋಡಿ ಬಂದಿದ್ದಾರೆ. ಅಲ್ಲಿ ಪೊಲೀಸರ ಸಮ್ಮುಖದಲ್ಲಿ ಹಣ್ಣಿನ ವ್ಯಾಪಾರಿ ಮಹಮ್ಮದ್ ವಾಲಿ ಅವರು ರಾಮಚಂದ್ರನಿಗೆ ಮೂರು ತೊಲ ಚಿನ್ನ ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ ತಾವು ಕಳೆದುಕೊಂಡಿದ್ದ ಸುಮಾರು ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನ ಸಿಕ್ಕಿದ್ದರಿಂದ ರಾಮಚಂದ್ರ ಕೂಡ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಮುಹಮ್ಮದ್ ವಾಲಿಯವರ ಪ್ರಾಮಾಣಿಕತೆಯನ್ನು ಮೆಚ್ಚಿದ ರಾಮಚಂದ್ರ ಅವರು ಉದಾರವಾಗಿ ಐದು ಸಾವಿರ ರೂಪಾಯಿಗಳನ್ನು ಬಹುಮಾನವಾಗಿ ನೀಡಿದರು. ದಿನಕ್ಕೆ 1000 ರೂಪಾಯಿ ವ್ಯಾಪಾರ ಮಾಡುವ ಸಾಮಾನ್ಯ ಹಣ್ಣು ಮಾರಾಟಗಾರ ಮಹಮ್ಮದ್ ವಾಲಿ ಮೂರು ತೊಲ ಚಿನ್ನವನ್ನು ಕಂಡು ಪ್ರಾಮಾಣಿಕವಾಗಿ ಠಾಣೆಗೆ ತಂದು ಕಳೆದುಕೊಂಡ ಸಂತ್ರಸ್ತರಿಗೆ ಹಿಂದಿರುಗಿಸಿರುವುದು ಪೊಲೀಸರ ಮೆಚ್ಚುಗೆಗೆ ಪಾತ್ರವಾಗಿದೆ.

Published On - 3:05 pm, Fri, 26 January 24