AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Babul Supriyo ‘ಸಂಸದನಾಗಿಯೇ ಉಳಿಯುತ್ತೇನೆ’: ಜೆಪಿ ನಡ್ಡಾ ಭೇಟಿ ನಂತರ ನಿರ್ಧಾರ ಬದಲಿಸಿದ ಮಾಜಿ ಸಚಿವ ಬಾಬುಲ್ ಸುಪ್ರಿಯೊ

ಸಚಿವ ಸಂಪುಟ ಪುನರ್ ರಚನೆ ನಂತರ ಇತ್ತೀಚೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿಯ ಅಸನ್ಸೋಲ್ ಸಂಸದ ಭಾನುವಾರ ತಮ್ಮ ನಿರ್ಧಾರವನ್ನು ಘೋಷಿಸುವ ಭಾವನಾತ್ಮಕ ಸಂದೇಶವನ್ನು ತಮ್ಮ ಫೇಸ್​​ಬುಕ್ ವಾಲ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

Babul Supriyo 'ಸಂಸದನಾಗಿಯೇ ಉಳಿಯುತ್ತೇನೆ': ಜೆಪಿ ನಡ್ಡಾ ಭೇಟಿ ನಂತರ ನಿರ್ಧಾರ ಬದಲಿಸಿದ ಮಾಜಿ ಸಚಿವ ಬಾಬುಲ್ ಸುಪ್ರಿಯೊ
ಬಾಬುಲ್ ಸುಪ್ರಿಯೊ
TV9 Web
| Edited By: |

Updated on: Aug 02, 2021 | 10:18 PM

Share

ದೆಹಲಿ: ರಾಜಕೀಯ ಮತ್ತು ಸಂಸದ ಸ್ಥಾನವನ್ನು ತೊರೆಯುವ ನಿರ್ಧಾರವನ್ನು ಘೋಷಿಸಿದ ಒಂದು ದಿನದ ನಂತರ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಎರಡನೇ ನಿರ್ಧಾರ ಬಗ್ಗೆ ಮರುಚಿಂತನೆ ನಡೆಸಿದ್ದಾರೆ. ಬಾಲಿವುಡ್-ಗಾಯಕ-ರಾಜಕಾರಣಿ ಆಗಿರುವ ಬಾಬುಲ್ ಸುಪ್ರಿಯೊ ರಾಜಕೀಯವಾಗಿ ಸಕ್ರಿಯರಾಗದೆಯೇ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವುದನ್ನು ಮುಂದುವರಿಸುವುದಾಗಿ ಸೋಮವಾರ ಹೇಳಿದ್ದಾರೆ. ಇಂದು ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ನಂತರ ಸುಪ್ರಿಯೋ ಅವರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ನಂತರ ಇತ್ತೀಚೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿಯ ಅಸನ್ಸೋಲ್ ಸಂಸದ ಭಾನುವಾರ ತಮ್ಮ ನಿರ್ಧಾರವನ್ನು ಘೋಷಿಸುವ ಭಾವನಾತ್ಮಕ ಸಂದೇಶವನ್ನು ತಮ್ಮ ಫೇಸ್​​ಬುಕ್ ವಾಲ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನಾನು ಹೊರಡುತ್ತಿದ್ದೇನೆ … ಅಲ್ವಿದಾ (ವಿದಾಯ) … ನೀವು ಸಮಾಜಸೇವೆಯನ್ನು ಮಾಡಲು ಬಯಸಿದರೆ, ನೀವು ರಾಜಕೀಯದಲ್ಲಿ ಇರದೆ ಅದನ್ನು ಮಾಡಬಹುದು …” ಎಂದು ಅವರು ಫೇಸ್ ಬುಕ್ ನಲ್ಲಿ ಬರೆದಿದ್ದರು. ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಕುನಾಲ್ ಘೋಷ್ ಸೇರಿದಂತೆ ರಾಜಕೀಯ ವಿರೋಧಿಗಳು ಸುಪ್ರಿಯೊ ನಡೆಯನ್ನು “ನಾಟಕ” ಎಂದು ಕರೆದಿದ್ದರು. ’ ಆದರೆ, ಸಂಸದ ಸುಪ್ರಿಯೊ ರಾಜಕೀಯ ತೊರೆಯುವ ತಮ್ಮ ನಿರ್ಧಾರದಲ್ಲಿ ಅಚಲರಾಗಿದ್ದಾರೆ. “ನಾನು ಸಂಸದನಾಗಿ ಮುಂದುವರಿಯುತ್ತೇನೆ ಆದರೆ ನಾನು ರಾಜಕೀಯವನ್ನು ಬಿಡುತ್ತೇನೆ. ನಾನು ಸಾಂವಿಧಾನಿಕ ಹುದ್ದೆಯನ್ನು ಬಳಸುವುದನ್ನು ಮುಂದುವರಿಸುತ್ತೇನೆ. ನಾನು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ” ಎಂದು ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಸುಪ್ರಿಯೊ ಹೇಳಿದರು.

“ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ. ನಾನು ಬಂಗಲೆಯನ್ನು ತೊರೆಯುತ್ತಿದ್ದೇನೆ.ಕೊಲ್ಕತ್ತಾ ಅಥವಾ ಮುಂಬೈಗೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಸಂಪುಟ ಪುನರ್ ರಚನೆ ವೇಳೆ ತನ್ನ ಸಚಿವ ಸ್ಥಾನದ ನಷ್ಟವು “ಖಂಡಿತವಾಗಿಯೂ, ಭಾಗಶಃ” ತನ್ನ ರಾಜೀನಾಮೆ ನಿರ್ಧಾರಕ್ಕೆ ಕಾರಣ ಎಂದು ಸುಪ್ರಿಯೋ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಅವರನ್ನು ಕೈಬಿಟ್ಟಾಗ, “ನನ್ನಲ್ಲಿ ರಾಜೀನಾಮೆ ಕೇಳಲಾಯಿತು”ಎಂದು ಪೋಸ್ಟ್ ಮಾಡಿದ್ದ ಅವರು ಆಮೇಲೆ ಆ ಪೋಸ್ಟ್ ತೆಗೆದಿದ್ದರು.

ಈ ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಅಸೆಂಬ್ಲಿ ಚುನಾವಣೆಯಲ್ಲಿ ದಕ್ಷಿಣ ಕೊಲ್ಕತ್ತಾದ ಟಾಲಿಗಂಜ್ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದ್ದ ಸುಪ್ರಿಯೊ ಸುಮಾರು 50,000 ಮತಗಳಿಂದ ಸೋತಿದ್ದರು.

ಇದನ್ನೂ ಓದಿ: Babul Supriyo: ಬಿಜೆಪಿ ತೊರೆದು ಬೇರೆ ಪಕ್ಷ ಸೇರುತ್ತಾರಾ ಸಂಸದ ಬಾಬುಲ್ ಸುಪ್ರಿಯೋ?; ಅನುಮಾನಕ್ಕೆ ಕಾರಣವಾಯ್ತು ಫೇಸ್​ಬುಕ್ ಪೋಸ್ಟ್

ಇದನ್ನೂ ಓದಿ: ‘ರಾಜೀನಾಮೆ ಕೊಡಿ ಎಂದಿದ್ದರು’ ಬಾಬುಲ್ ಸುಪ್ರಿಯೊ ಫೇಸ್​ಬುಕ್ ಪೋಸ್ಟ್ ವಿರುದ್ಧ ಗರಂ ಆದ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್

(After JP Nadda Meet Former Union Minister Babul Supriyo said he will Stay MP)