ಸಂಬಂಧಿಕರೊಂದಿಗೆ ಜಗಳ, ಕೋಪದ ಭರದಲ್ಲಿ ಗರ್ಭಿಣಿ ಪತ್ನಿ, ಕಾರು ಸಮೇತ ಗಂಗಾ ನದಿಗೆ ಹಾರಿದ ವ್ಯಕ್ತಿ

ವ್ಯಕ್ತಿಯೊಬ್ಬ ಸಂಬಂಧಿಕರೊಂದಿಗೆ ಜಗಳವಾಡಿ, ಕೋಪದ ಭರದಲ್ಲಿ ಗರ್ಭಿಣಿ ಪತ್ನಿಯೊಂದಿಗೆ ಕಾರು ಚಲಾಯಿಸಿಕೊಂಡು ಹೋಗಿ ಗಂಗಾನದಿಗೆ ಹಾರಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಘಟನೆ ನಡೆದಿದೆ, ಸಂಬಂಧಿಕರೊಂದಿಗೆ ಜಗಳವಾಡಿದ ಬಳಿಕ ಗರ್ಭಿಣಿ ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ವೇಗವಾಗಿ ಕಾರು ಚಲಾಯಿಸಿಕೊಂಡು ಗಂಗಾ ನದಿಗೆ ಹಾರಿರುವ ಘಟನೆ ವರದಿಯಾಗಿದೆ.

ಸಂಬಂಧಿಕರೊಂದಿಗೆ ಜಗಳ, ಕೋಪದ ಭರದಲ್ಲಿ ಗರ್ಭಿಣಿ ಪತ್ನಿ, ಕಾರು ಸಮೇತ ಗಂಗಾ ನದಿಗೆ ಹಾರಿದ ವ್ಯಕ್ತಿ
ಪೊಲೀಸ್

Updated on: Aug 27, 2023 | 2:37 PM

ವ್ಯಕ್ತಿಯೊಬ್ಬ ಸಂಬಂಧಿಕರೊಂದಿಗೆ ಜಗಳವಾಡಿ, ಕೋಪದ ಭರದಲ್ಲಿ ಗರ್ಭಿಣಿ ಪತ್ನಿಯೊಂದಿಗೆ ಕಾರು ಚಲಾಯಿಸಿಕೊಂಡು ಹೋಗಿ ಗಂಗಾನದಿಗೆ ಹಾರಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಘಟನೆ ನಡೆದಿದೆ, ಸಂಬಂಧಿಕರೊಂದಿಗೆ ಜಗಳವಾಡಿದ ಬಳಿಕ ಗರ್ಭಿಣಿ ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ವೇಗವಾಗಿ ಕಾರು ಚಲಾಯಿಸಿಕೊಂಡು ಗಂಗಾ ನದಿಗೆ ಹಾರಿರುವ ಘಟನೆ ವರದಿಯಾಗಿದೆ.

ಶಾ ಆಲಂ ಎಂಬ ಆರೋಪಿ ತನ್ನ ಪತ್ನಿ ನಾಜಿಯಾಳನ್ನು ದೆಹಲಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದ, ಆದರೆ, ಸಂಬಂಧಿಕರು ಒಪ್ಪದ ಕಾರಣ ಅವರ ನಡುವೆ ವಾಗ್ವಾದ ನಡೆದಿದೆ.

ನಂತರ ಕೋಪದ ಭರದಲ್ಲಿ ಶಾ ಆಲಂ ಮೊದಲು ತನ್ನ ಹೆಂಡತಿಯನ್ನು ಕಾರಿನೊಳಗೆ ಕೂರಿಸಿ ಲಾಕ್​ ಮಾಡಿ, ಬಳಿಕ ತಂದೆಯ ಮೇಲೆ ಕೈ ಮಾಡಿದ್ದ.
ನಂತರ ಅವರ ತಂದೆಯನ್ನು ಮೀರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ.

ದಂಪತಿಗಳು ದೆಹಲಿಯತ್ತ ಸಾಗಿದಾಗ, ಅವರ ಸಹೋದರಿ ಕೂಡ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಇದರ ಪರಿಣಾಮವಾಗಿ ಕಾರಿಗೆ ಡಿಕ್ಕಿ ಹೊಡೆದಾಗ ಸಣ್ಣಪುಟ್ಟ ಗಾಯಗಳಾಗಿವೆ.

ಮತ್ತಷ್ಟು ಓದಿ: ತಾಯಿಯ ಸಮಾಧಿ ಪಕ್ಕದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಪಪ್ಸೆರಾ ಗ್ರಾಮವನ್ನು ತಲುಪಿದ ನಂತರ, ಶಾ ಆಲಂ ಕಾರನ್ನು ಗಂಗಾ ನದಿಯತ್ತ ಕಾರು ಓಡಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಶಾ ಆಲಂ ಅವರ ದೇಹವನ್ನು ನದಿಯಿಂದ ಹೊರತೆಗೆಯಲಾಯಿತು. ಪತ್ನಿ ನಾಜಿಯಾ ಮತ್ತು ಕಾರು ನಾಪತ್ತೆಯಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ನಾಜಿಯಾ ಮೃತದೇಹ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us