ಚೆನ್ನೈ: ನಟ-ರಾಜಕಾರಣಿ ಕಮಲ್ ಹಾಸನ್ (Kamal Haasan )ಅವರಿಗೆ ಕೊವಿಡ್-19 (Covid-19) ದೃಢಪಟ್ಟಿದೆ . ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದಾರೆ. ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಂತರ ಸ್ವಲ್ಪ ಕೆಮ್ಮು ಕಾಣಿಸಿಕೊಂಡಿತ್ತು. ನಂತರ ಕೊವಿಡ್ ಪರೀಕ್ಷೆಗೊಳಗಾಗಿದ್ದು ಕೊರೊನಾ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದ್ದಾರೆ. ಕಮಲ್ ಹಾಸನ್ ಆಸ್ಪತ್ರೆಯಲ್ಲಿ ಸ್ವತಃ ಐಸೋಲೇಟ್ ಆಗಿದ್ದಾರೆ. “ಸಾಂಕ್ರಾಮಿಕ ರೋಗವು ಇನ್ನೂ ಕೊನೆಗೊಂಡಿಲ್ಲ” ಎಲ್ಲರೂ ಕಾಳಜಿ ವಹಿಸುವಂತೆ ಅವರು ಅಭಿಮಾನಿಗಳಿಗೆ ಹೇಳಿದ್ದಾರೆ. ಕಮಲ್ ಹಾಸನ್ ಅವರ ಅಭಿಮಾನಿಗಳು ಅವರ ಪೋಸ್ಟ್‌ಗೆ ಶೀಘ್ರವಾಗಿ ಗುಣವಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಇದೀಗ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿರುವ ನಂತರ ಬಿಗ್ ಬಾಸ್ ತಮಿಳು ಸೀಸನ್ 5 ಅನ್ನು ಯಾರು ನಡೆಸುತ್ತಾರೆ ಎಂದು ಕೆಲವರು ಕೇಳುತ್ತಿದ್ದಾರೆ.
அமெரிக்கப் பயணம் முடிந்து திரும்பிய பின் லேசான இருமல் இருந்தது. பரிசோதனை செய்ததில் கோவிட் தொற்று உறுதியானது. மருத்துவமனையில் தனிமைப்படுத்திக் கொண்டுள்ளேன். இன்னமும் நோய்ப்பரவல் நீங்கவில்லையென்பதை உணர்ந்து அனைவரும் பாதுகாப்பாக இருங்கள்.
— Kamal Haasan (@ikamalhaasan) November 22, 2021
ಕಮಲ್ ಹಾಸನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಎರಡು ವಾರಗಳ ನಂತರ ಅವರಿಗೆ ಕೊರೊನಾ ದೃಢಪಟ್ಟಿದೆ. ಕಮಲ್ ಅವರ ಹುಟ್ಟುಹಬ್ಬದ ಮುನ್ನಾದಿನದಂದು, ಅವರ ಮುಂಬರುವ ಚಿತ್ರ ವಿಕ್ರಮ್‌ನ ತಯಾರಕರು ಅದರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್, ಕಮಲ್ ಹಾಸನ್ ಅವರ 232 ನೇ ಚಿತ್ರವಾಗಿದೆ. ಹಾಸನ್ ಕೂಡ ಟ್ವಿಟರ್ನಲ್ಲಿ ವಿಕ್ರಮ್ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ. ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ ಅವರು “ಕಮಲ್ ಹಾಸನ್ ಸರ್ ಅವರಿಗೆ ನನ್ನಿಂದ ಒಂದು ಸಣ್ಣ ಉಡುಗೊರೆ. ಜನ್ಮದಿನದ ಶುಭಾಶಯಗಳು ಉಲಗನಾಯಗನ್” ಎಂದು ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಕಮಲ್ ಹಾಸನ್ ಹೊಸ ಟೀಸರ್‌ನ ಲಿಂಕ್ ಅನ್ನು ಲಗತ್ತಿಸಿ “ಪ್ರೀತಿಗೆ ಧನ್ಯವಾದಗಳು, ಲೋಕೇಶ್” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಇಬ್ಬರು ಸ್ಟಾರ್ ನಟರ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಕಮಲ್ ಹಾಸನ್
Published On - 3:33 pm, Mon, 22 November 21