ಅತುಲ್ ಸುಭಾಷ್ ಪ್ರಕರಣದ ಬಳಿಕ ಗುರುಗ್ರಾಮದ ವ್ಯಕ್ತಿಯಿಂದಲೂ ಪತ್ನಿ ವಿರುದ್ಧ ಮಾನಸಿಕ ಕಿರುಕುಳದ ಆರೋಪ
ಅತುಲ್ ಸುಭಾಷ್ ಪ್ರಕರಣದ ಬಳಿಕ ಇದೀಗ ಗುರುಗ್ರಾಮದ ವ್ಯಕ್ತಿಯಿಂದ ತಮ್ಮ ಹೆಂಡತಿ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ. ನನ್ನ ಪತ್ನಿ ಜೀವನಾಂಶ ಮತ್ತು ಬೃಹತ್ ಮೊತ್ತದ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಗುರುಗ್ರಾಮದ ವ್ಯಕ್ತಿ ಆರೋಪಿಸಿದ್ದಾರೆ. ಹೊಸ ಕೆಲಸಕ್ಕೆ ಸೇರಬೇಕೆಂದು ಒತ್ತಾಯಿಸಿದ್ದ ಆ ವ್ಯಕ್ತಿಯ ಪತ್ನಿ ಬಳಿಕ ಅವರಿಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕ ನಂತರ ತಾನು ಅಪ್ಪ-ಅಮ್ಮನ ಜೊತೆಯೇ ಇರುವುದಾಗಿ ಹಠ ಹಿಡಿದಿದ್ದರು.
ಗುರುಗ್ರಾಮ: ಬೆಂಗಳೂರಿನ ಅತುಲ್ ಸುಭಾಷ್ ಆತ್ಮಹತ್ಯೆಯ ಬೆನ್ನಲ್ಲೇ ಮತ್ತೋರ್ವ ವ್ಯಕ್ತಿ ತನ್ನ ಪತ್ನಿಯು 1 ಕೋಟಿ ಮೊತ್ತದ ಹಣವನ್ನು ಪರಿಹಾರವಾಗಿ ಮತ್ತು ತಿಂಗಳಿಗೆ 1.5 ಲಕ್ಷ ರೂ.ಗಳ ನಿರ್ವಹಣೆಗೆ ಬೇಡಿಕೆಯಿಡುತ್ತಿದ್ದಾಳೆ ಎಂದು ಹೇಳಿಕೊಂಡು ತನ್ನ ಸಂಕಷ್ಟವನ್ನು ಮುಂದಿಟ್ಟಿದ್ದಾರೆ. ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ಅಲೋಕ್ ಮಿತ್ತಲ್ ಲಿಂಕ್ಡ್‌ಇನ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸುಳ್ಳು ವರದಕ್ಷಿಣೆ ಪ್ರಕರಣಗಳು ಮತ್ತು ಕೌಟುಂಬಿಕ ಹಿಂಸೆಯ ಮೂಲಕ ಆಕೆ ತನಗೆ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪ ಮಾಡಿದ್ದಾರೆ.
ಅಲೋಕ್ ಮಿತ್ತಲ್ 2023ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾನ್ಸಿ ಅಗರ್ವಾಲ್ ಅವರನ್ನು ವಿವಾಹವಾದರು. ಮದುವೆಯಾದ ಕೆಲವು ತಿಂಗಳ ನಂತರ ಮಾನ್ಸಿ ಗರ್ಭಿಣಿಯಾದರು. ಆದರೆ, ದುರಾದೃಷ್ಟದಿಂದ ಅದೇ ವೇಳೆ ಅಲೋಕ್ ಕೆಲಸ ಕಳೆದುಕೊಂಡರು. ಮಾನ್ಸಿ ಹೊಸ ಕೆಲಸವನ್ನು ಹುಡುಕಲು ಅವರ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದಳು. 5 ತಿಂಗಳ ಕೆಲಸದ ಹುಡುಕಾಟದ ನಂತರ, ಅಲೋಕ್‌ಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ಆದರೆ ಮಾನ್ಸಿ ಬೆಂಗಳೂರಿಗೆ ಹೋಗಲು ನಿರಾಕರಿಸಿದರು. ಅವಳು ತನ್ನ ಹೆತ್ತವರ ಮನೆಗೆ ಮರಳಲು ನಿರ್ಧರಿಸಿದಳು.
ಇದನ್ನೂ ಓದಿ: Bengaluru techie death: ಟೆಕ್ಕಿ ಅತುಲ್ ಸುಭಾಷ್ ಮಗು ಎಲ್ಲಿ? ಬೆಂಗಳೂರು ಪೊಲೀಸರಿಂದ ಮಹತ್ವದ ಸುಳಿವು
ಮಾನ್ಸಿ ಸ್ವಲ್ಪ ಸಮಯದ ನಂತರ ಅಲೋಕ್ ಜೊತೆ ಇರಲು ಬೆಂಗಳೂರಿಗೆ ಬರುವುದಾಗಿ ಭರವಸೆ ನೀಡಿದಳು. ಅಲೋಕ್ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಲು ದೆಹಲಿಗೆ ಹೋದಾಗ ಮಾನ್ಸಿಯ ಪೋಷಕರು ಅವನ ಬಗ್ಗೆ ಅಸಡ್ಡೆ ತೋರಿದರು. ಮಾನ್ಸಿ ಅಲೋಕ್‌ಗೆ ಬೆಂಗಳೂರಿನಲ್ಲಿ ಕೆಲಸ ಬಿಡುವಂತೆ ಒತ್ತಾಯಿಸಿದಳು.
ಅಲೋಕ್ ಹೆಂಡತಿ ಮಾನ್ಸಿ ಕೂಡ ಉದ್ಯೋಗದಲ್ಲಿದ್ದು, ತಿಂಗಳಿಗೆ 80,000 ರೂ. ಗಳಿಸುತ್ತಾರೆ. ಉತ್ತಮ ಗಳಿಕೆಯಿದ್ದರೂ ಮಾನ್ಸಿ 1.5 ಲಕ್ಷ ರೂ. ಹಣವನ್ನು ನಿರ್ವಹಣೆ ಹಾಗೂ ಒಂದು ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ ಎಂದು ಅಲೋಕ್ ಆರೋಪಿಸಿದ್ದಾರೆ.
ತನ್ನ 10 ತಿಂಗಳ ಮಗನನ್ನು ಭೇಟಿಯಾಗಲು ತನ್ನ ಅತ್ತೆ ಮತ್ತು ಹೆಂಡತಿ ಬಿಡುತ್ತಿಲ್ಲ ಎಂದು ಕೂಡ ಅಲೋಕ್ ಆರೋಪಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ