Air India Plane Crash: ಅಹಮದಾಬಾದ್ ವಿಮಾನ ದುರಂತ; 200 ಡಿಎನ್‌ಎ ಮಾದರಿಗಳ ಸಂಗ್ರಹ, 110 ಜನರ ಗುರುತು ಪತ್ತೆ

ಅಹಮದಾಬಾದ್​ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 200ಕ್ಕೂ ಹೆಚ್ಚು ಜನರ ಡಿಎನ್​ಎಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೂ 230ಕ್ಕೂ ಹೆಚ್ಚು ಮೃತದೇಹಗಳು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಧಿವಿಜ್ಞಾನ ತಂಡಗಳು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿವೆ. ಏಕೆಂದರೆ ಅವಶೇಷಗಳಿಂದ ಹೊರತೆಗೆಯಲಾದ ಹೆಚ್ಚಿನ ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ.

Air India Plane Crash: ಅಹಮದಾಬಾದ್ ವಿಮಾನ ದುರಂತ; 200 ಡಿಎನ್‌ಎ ಮಾದರಿಗಳ ಸಂಗ್ರಹ, 110 ಜನರ ಗುರುತು ಪತ್ತೆ
Plane Crash In Ahmedabad

Updated on: Jun 13, 2025 | 6:30 PM

ಅಹಮದಾಬಾದ್, ಜೂನ್ 13: ಗುಜರಾತ್​​ನ (Gujarat Plane Crash) ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ (Air India Plane Crash) ಮೃತಪಟ್ಟವರನ್ನು ಗುರುತಿಸಲು ಅಧಿಕಾರಿಗಳು ಇಂದು ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಮೃತರ ಕುಟುಂಬಗಳು ಸಿವಿಲ್ ಆಸ್ಪತ್ರೆಯಲ್ಲಿಯೇ ಕಾಯುತ್ತಿದ್ದಾರೆ. ಡಿಎನ್​ಎ ಪರೀಕ್ಷೆಯ ನಂತರವೇ ಶವಗಳನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿರುವುದರಿಂದ ತಮ್ಮ ಕುಟುಂಬದವರ ಡಿಎನ್​ಎ ಪರೀಕ್ಷೆಗಾಗಿ ಸಂಬಂಧಿಕರು ಕಾಯುತ್ತಿದ್ದಾರೆ. ಆ ವಿಮಾನ ಎಷ್ಟು ಪ್ರಮಾಣದಲ್ಲಿ ಸುಟ್ಟುಹೋಗಿದೆಯೆಂದರೆ ಕೆಲವು ಶವಗಳು ಸಂಪೂರ್ಣವಾಗಿ ಬೂದಿಯಾಗಿವೆ. ಆದರೂ ಅವಶೇಷಗಳಲ್ಲಿ ಸಿಕ್ಕ ಮೂಳೆಗಳನ್ನು ಕಲೆಹಾಕಿ, ಅದನ್ನು ಈಗಾಗಲೇ ಸಂಗ್ರಹಿಸಲಾದ ಕುಟುಂಬಸ್ಥರ ಟಿಎನ್​ಎ ಜೊತೆ ಹೋಲಿಸಲಾಗುತ್ತಿದೆ.

ಸದ್ಯದ ಮಟ್ಟಿಗೆ 110 ಪ್ರಯಾಣಿಕರ ಡಿಎನ್​ಎ ಮ್ಯಾಚ್ ಆಗಿದೆ ಎನ್ನಲಾಗುತ್ತಿದೆ. ಅವರ ಶವಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸಿಎನ್‌ಎನ್-ನ್ಯೂಸ್ 18 ವರದಿಯ ಪ್ರಕಾರ ಇಲ್ಲಿಯವರೆಗೆ 200 ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಗುರುತಿನ ಪ್ರಕ್ರಿಯೆಯ ನಂತರ ಅಧಿಕಾರಿಗಳು ಶವಗಳನ್ನು ಹಸ್ತಾಂತರಿಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: Plane Crash: ಕೊನೆಗೂ ಸಿಕ್ಕಿತು ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಡಿವಿಆರ್​; ಇದರಿಂದ ಏನು ಪ್ರಯೋಜನ?

ಇದನ್ನೂ ಓದಿ
ಭಾರತವನ್ನು ಬೆಚ್ಚಿ ಬೀಳಿಸಿದ 8 ಭಯಾನಕ ವಿಮಾನ ದುರಂತಗಳಿವು
ಅಹಮದಾಬಾದ್​​ನಲ್ಲಿ ಏರ್ ಇಂಡಿಯಾ ವಿಮಾನ ಪತನ; 241 ಪ್ರಯಾಣಿಕರ ಸಾವು
ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!
ನಾಳೆ ಅಹಮದಾಬಾದ್​​ಗೆ ಮೋದಿ ಭೇಟಿ; ಭಾರತಕ್ಕೆ ಸಹಾಯಹಸ್ತ ಚಾಚಿದ ಟ್ರಂಪ್

ಜೂನ್ 12ರಂದು ಅಹಮದಾಬಾದ್​​ನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ AI-171 ವಿಮಾನ, ಬೋಯಿಂಗ್ 787-8 ಡ್ರೀಮ್‌ಲೈನರ್, ಅಹಮದಾಬಾದ್‌ನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಯಿತು. ಈ ವಿಮಾನವು ಬಿ.ಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ ಕಟ್ಟಡಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ.

ಇದನ್ನೂ ಓದಿ: ಗಣಪತಿಯೇ ನನ್ನ ಕಾಪಾಡಿದ!; 10 ನಿಮಿಷ ತಡವಾಗಿ ಏರ್​ಪೋರ್ಟ್​ಗೆ ಬಂದಿದ್ದಕ್ಕೆ ಉಳಿಯಿತು ಯುವತಿಯ ಪ್ರಾಣ

ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ. ಏಕೆಂದರೆ ಅವಶೇಷಗಳಿಂದ ಹೊರತೆಗೆಯಲಾದ ಹೆಚ್ಚಿನ ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಮೃತಪಟ್ಟವರಲ್ಲಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳೂ ಸೇರಿದ್ದಾರೆ. ಇನ್ನೂ ಕೆಲವರು ಕಾಣೆಯಾಗಿರುವುದರಿಂದ ಆ ಹಾಸ್ಟೆಲ್​ನಲ್ಲಿ ಎಷ್ಟು ಸಾವು ಸಂಭವಿಸಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:28 pm, Fri, 13 June 25