ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದ ಏಮ್ಸ್ ಸೆಕ್ಯೂರಿಟಿ ಗಾರ್ಡ್ಗೆ ತೀವ್ರ ಅಲರ್ಜಿ; ಚಿಕಿತ್ಸೆ ನೀಡುತ್ತಿರುವ ವೈದ್ಯರು
ಕೊವ್ಯಾಕ್ಸಿನ್ಗೆ ಅನುಮೋದನೆ ಸಿಗುತ್ತಿದ್ದಂತೆ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಲಸಿಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕ್ಲಿನಿಕಲ್ ಟ್ರಯಲ್ ಮುಗಿಸಿಲ್ಲ. ಆಗಲೇ ಬಳಕೆಗೂ ಅನುಮತಿ ನೀಡಿದೆ. ನಾಳೆ ಇದರಿಂದ ಜನರಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಹಲವು ನಾಯಕರು ಪ್ರಶ್ನಿಸಿದ್ದರು.
ದೆಹಲಿ: ಕೋವಿಡ್-19 ಲಸಿಕೆ ಪಡೆದ ದೆಹಲಿಯ ಏಮ್ಸ್ನ ಸೆಕ್ಯುರಿಟಿ ಗಾರ್ಡ್ ತೀವ್ರ ಅಲರ್ಜಿಗೆ ಒಳಗಾಗಿದ್ದಾರೆ. ಗಂಭೀರ ಪ್ರಮಾಣದ ಅಲರ್ಜಿಯಾದ ಅನಾಫಿಲಾಕ್ಸಿಸ್ಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಇದ್ದರೆ, ಇದರಿಂದ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯೂ ಇರುತ್ತದೆ ಎನ್ನಲಾಗಿದೆ.
ಈ 20 ವರ್ಷದ ಸೆಕ್ಯೂರಿಟಿ ಗಾರ್ಡ್ನನ್ನು ಸದ್ಯ ಏಮ್ಸ್ (AIIMS) ಅಬ್ಸರ್ವೇಶನ್ನಲ್ಲಿ ಇಡಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ನಿನ್ನೆಯಿಂದ (ಜ.16) ದೇಶಾದ್ಯಂತ ಕೊವಿಡ್-19 ಲಸಿಕೆ ಹಾಕುವ ಕಾರ್ಯ ಆರಂಭವಾಗಿದ್ದು, ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ಕೊಡಲಾಗುತ್ತಿದೆ. ಈ ಸೆಕ್ಯೂರಿಟಿ ಗಾರ್ಡ್ ನಿನ್ನೆ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದಿದ್ದರು. ಲಸಿಕೆ ಪಡೆದ ಕೆಲವೇ ಹೊತ್ತಲ್ಲಿ ಅಲರ್ಜಿಗೆ ಒಳಗಾಗಿದ್ದಾರೆ.
ಕೊವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ್ದು, ಸದ್ಯ 12 ರಾಜ್ಯಗಳಿಗೆ ವಿತರಣೆ ಮಾಡಲಾಗಿದೆ. ನಿನ್ನೆ ದೆಹಲಿಯಲ್ಲಿ ಒಟ್ಟು 4319 ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ 19 ಲಸಿಕೆ ನೀಡಿದ್ದಾಗಿ ಸ್ಥಳೀಯ ಆರೋಗ್ಯ ಇಲಾಖೆ ತಿಳಿಸಿದೆ.