
ಲಖನೌ: ‘ಹಿಂದೂಗಳು (Hindu) ಹುಳಗಳು, ಒಂದು ಮದುವೆಯಾಗಿ ಮೂವರನ್ನು ಇಟ್ಟುಕೊಂಡಿರುತ್ತಾರೆ’ ಎಂದು ಎಐಎಂಐಎಂ (AIMIM) ಉತ್ತರ ಪ್ರದೇಶ (Uttar Pradesh) ಘಟಕದ ಅಧ್ಯಕ್ಷ ಶೌಕತ್ ಅಲಿ (Shaukat Ali) ಹೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ನೀಡುವ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿರುವ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಸಂಭಾಲ್ನಲ್ಲಿ ನಡೆದ ಜಾಥಾದಲ್ಲಿ ಮಾತನಾಡಿದ್ದ ಶೌಕತ್ ಅಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಮುಸ್ಲಿಮರು 832 ವರ್ಷಗಳ ಕಾಲ ಹಿಂದೂಗಳನ್ನು ಆಳಿದರು. ಹಿಂದೂಗಳು ಕೈಮುಗಿದು ‘ಜಿ ಹುಜೂರ್’ ಎನ್ನುತ್ತಿದ್ದರು. ಅಂದು ನಮಗೆ ಕೈಮುಗಿಯುತ್ತಿದ್ದವರು ಇಂದು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಶೌಕತ್ ಹೇಳಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊದಲ್ಲಿದೆ. ಮುಂದುವರಿದು, ಮುಸ್ಲಿಮರು ಎರಡು ಮದುವೆಯಾಗುತ್ತಾರೆ. ಆದರೆ, ಇಬ್ಬರು ಪತ್ನಿಯರನ್ನೂ ಗೌರವಿಸುತ್ತಾರೆ. ಹಿಂದೂಗಳು ಒಂದು ಮದುವೆಯಾಗಿ ಮೂವರನ್ನು ಇಟ್ಟುಕೊಂಡಿರುತ್ತಾರೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಟಿಪ್ಪು ಪರಂಪರೆ ಅಳಿಸಲು ಸಾಧ್ಯವಿಲ್ಲ: ಟಿಪ್ಪು ಎಕ್ಸ್ಪ್ರೆಸ್ ಹೆಸರು ಬದಲಾವಣೆಗೆ ಅಸಾದುದ್ದೀನ್ ಒವೈಸಿ ಆಕ್ಷೇಪ
ಶೌಕತ್ ಅಲಿ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮದ ಸ್ಥಳ, ಭಾಷೆಯ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಹರಡಲು ಪ್ರಚೋದನೆ ನೀಡುವುದು), 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಬಿಜೆಪಿ ದುರ್ಬಲಗೊಂಡಾಗ ಅವರು ಮುಸ್ಲಿಮರ ಹಿಂದೆ ಬೀಳುತ್ತಾರೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಪಡೆಯುತ್ತಾರೆ, ಎರಡು ಮದುವೆಯಾಗುತ್ತಾರೆ ಎಂದೆಲ್ಲ ಹೇಳುತ್ತಾರೆ. ಅದು ನಿಜ. ನಾವು ಎರಡು ಮದುವೆಯಾಗುತ್ತೇವೆ, ಆದರೆ, ಇಬ್ಬರು ಪತ್ನಿಯರನ್ನೂ ಒಂದೇ ರೀತಿ ಗೌರವಿಸುತ್ತೇವೆ. ಹಿಂದೂಗಳು ಒಂದು ಮದುವೆಯಾಗಿ ಮೂವರನ್ನು ಇಟ್ಟುಕೊಳ್ಳುತ್ತಾರೆ. ಅದು ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಶೌಕತ್ ಅಲಿ ಹೇಳಿದ್ದಾರೆ.
ನಿರ್ದಿಷ್ಟ ಧರ್ಮ ಉದ್ದೇಶಿಸಿ ಹೇಳಿಲ್ಲವೆಂದ ಅಲಿ:
ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಅಲಿ, ನಿರ್ದಿಷ್ಟ ಧರ್ಮವನ್ನು ಉದ್ದೇಶಿಸಿ ಹಾಗೆ ಹೇಳಿಲ್ಲ. ನಮ್ಮ ವಿರುದ್ಧ ಯಾರು ಆರೋಪಗಳನ್ನು ಮಾಡುತ್ತಾರೋ ಅವರನ್ನಷ್ಟೇ ಉದ್ದೇಶಿಸಿ ಹೇಳಿಕೆ ನೀಡಿದ್ದೇನೆ ಎಂದಿದ್ದಾರೆ. ಅವರ ಹೇಳಿಕೆಗೆ ಬಗ್ಗೆ ಎಐಎಂಐಎಂ ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ.
Published On - 10:47 am, Sun, 16 October 22