AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India: 20 ಗಂಟೆ ತಡವಾಗಿ ಹೊರಟ ಏರ್​ ಇಂಡಿಯಾ ವಿಮಾನ, ಎಸಿ ಇಲ್ಲದೆ ಮೂರ್ಛೆ ಹೋದ ಪ್ರಯಾಣಿಕರು

ಏರ್​ ಇಂಡಿಯಾ ವಿಮಾನದಲ್ಲಿ ಕೆಲವು ಮಂದಿ ಮೂರ್ಛೆ ತಪ್ಪಿ ಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸ್ಯಾನ್​ ಫ್ರಾನ್ಸಿಸ್ಕೋಗೆ ಬರೋಬ್ಬರಿ 20 ಗಂಟೆಗಳ ತಡವಾಗಿ ವಿಮಾನ ಹೊರಟಿತ್ತು, ಅದಕ್ಕೂ ಮುನ್ನ ಎಸಿ ಇಲ್ಲದೆ ಪ್ರಯಾಣಿಕರಿಗೆ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪ್ರಯಾಣಿಕರನ್ನು ಕೆಳಗಿಳಿಯುವಂತೆ ಸೂಚನೆ ನೀಡಲಾಗಿತ್ತು.

Air India: 20 ಗಂಟೆ ತಡವಾಗಿ ಹೊರಟ ಏರ್​ ಇಂಡಿಯಾ ವಿಮಾನ, ಎಸಿ ಇಲ್ಲದೆ ಮೂರ್ಛೆ ಹೋದ ಪ್ರಯಾಣಿಕರು
Image Credit source: India Today
ನಯನಾ ರಾಜೀವ್
|

Updated on:May 31, 2024 | 1:47 PM

Share

ದೆಹಲಿಯಿಂದ ಸ್ಯಾನ್​ ಫ್ರಾನ್ಸಿಸ್ಕೋಗೆ ಏರ್​ ಇಂಡಿಯಾ(Air India) ವಿಮಾನ 20 ಗಂಟೆಗಳು ತಡವಾಗಿ ಹೊರಟ ಪರಿಣಾಮ ಪ್ರಯಾಣಿಕರು ಎಸಿ ಇಲ್ಲದೆ ಉಸಿರುಗಟ್ಟುವ ವಾತಾವರಣದಲ್ಲಿ ಪರಿತಪಿಸುವಂತಾಯಿತು. ಎಸಿ ಇಲ್ಲದೆ ವಿಮಾನದೊಳಗೆ ಕಾಯುತ್ತಿರುವಾಗ ಕೆಲವು ಮಂದಿ ಮೂರ್ಛೆ ತಪ್ಪಿ ಬಿದ್ದಿರುವ ಘಟನೆಯೂ ನಡೆಯಿತು.

ಎಸಿ ಇಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಫೋಟೊವನ್ನು ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ್ದಾರೆ. ಹವಾ ನಿಯಂತ್ರಣವಿಲ್ಲದೆ ಹಲವರು ಪರದಾಡಿದರು. ಈ ವೇಳೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಪ್ರಯಾಣಿಕರಿಗೆ ವಿಮಾನದಿಂದ ಅವರಿಗೆ ಕೆಳಗಿಳಿಯುವಂತೆ ಸೂಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ಉಷ್ಣಾಂಶ ದಾಖಲೆಯ ಮಟ್ಟಕ್ಕೆ ಏರಿದೆ. ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ 52.9 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಕಂಡು ಬಂದಿತ್ತು. ಇದಲ್ಲದೆ ಬಿಹಾರದಲ್ಲಿ ಹೀಟ್​ಸ್ಟ್ರೋಕ್​ನಿಂದ 19 ಮಂದಿ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: ವಿಮಾನ ಟೇಕ್​ ಆಫ್​ ಆಗುವ ಸಮಯದಲ್ಲಿ ಇಂಜಿನ್​ನಲ್ಲಿ ಸಿಲುಕಿ ವ್ಯಕ್ತಿ ಸಾವು

ಏರ್​ ಇಂಡಿಯಾವು ಪ್ರತಿಕ್ರಿಯೆ ನೀಡಿ, ಈ ಘಟನೆಗಾಗಿ ವಿಷಾಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ತಂಡದವರು ಸೂಕ್ತವಾಗಿ ಸ್ಪಂದಿಸಲಿದ್ದಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಇದೇ ರೀತಿಯ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ಬೆಂಗಳೂರಿಗೆ ಡಿ. 23ರ ರಾತ್ರಿ 8.15ಕ್ಕೆ ಮಂಗಳೂರಿನಿಂದ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದಾಗಿತ್ತು. ಇದರಿಂದ ಪ್ರಯಾಣಿಕರು ಕೋಪಗೊಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:32 am, Fri, 31 May 24