ಅತ್ಯಾಚಾರ, ಲೂಟಿ, ಡಕಾಯಿತಿಯಲ್ಲಿ ಮುಸ್ಲಿಮರೇ ನಂ.1 ಎಂದ ಅಸ್ಸಾಂ ರಾಜಕಾರಣಿ ಬದ್ರುದ್ದೀನ್ ಅಜ್ಮಲ್: ಕೊಟ್ಟ ಕಾರಣ ಹೀಗಿದೆ
ಬದ್ರುದ್ದೀನ್ ಅಜ್ಮಲ್ ಸುಗಂಧ ದ್ರವ್ಯ ಉದ್ಯಮಿ ಮತ್ತು ಎಐಯುಡಿಎಫ್ ಮುಖ್ಯಸ್ಥರಾಗಿದ್ದಾರೆ. ಅವರು ಅಸ್ಸಾಂ ಮುಸ್ಲಿಮರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದು, ರಾಜಕೀಯದಲ್ಲೂ ಅವರಿಗೆ ಉತ್ತಮ ಹಿಡಿತವಿದೆ. ಪ್ರಸ್ತುತ, 126 ಸ್ಥಾನಗಳ ಅಸ್ಸಾಂ ವಿಧಾನಸಭೆಯಲ್ಲಿ AIUDF 15 ಶಾಸಕರನ್ನು ಹೊಂದಿದೆ.
ದಿಸ್ಪುರ, ಅಕ್ಟೋಬರ್ 28: ಕಳ್ಳತನ, ಡಕಾಯಿತಿ, ಅತ್ಯಾಚಾರ, ದರೋಡೆಯಂತಹ ಅಪರಾಧಗಳನ್ನು ಮಾಡಿ ಜೈಲಿಗೆ ಹೋಗುವುದರಲ್ಲಿ ಮುಸ್ಲಿಮರು ಮೊದಲ ಸ್ಥಾನದಲ್ಲಿದ್ದಾರೆ ಎಂದು ಅಸ್ಸಾಂ ರಾಜಕಾರಣಿ, ಆಲ್ ಇಂಡಿಯಾ ಯುನೈಟೆಡ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ವಿವಾದಾತ್ಮಕ ಹೇಳಿಕೆ ಹೇಳಿದ್ದಾರೆ. ಬದ್ರುದ್ದೀನ್ ಅವರ ಈ ಹೇಳಿಕೆಗೆ ಮುಸ್ಲಿಂ ಸಮುದಾಯದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ಅಜ್ಮಲ್ ಹೇಳಿದ್ದಾರೆ. ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರ ಬಗ್ಗೆ ಪ್ರತಿಕ್ರಿಯಿಸಿದ ಎಐಯುಡಿಎಫ್ ಮುಖ್ಯಸ್ಥರು, ಮುಸ್ಲಿಮರು ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಶಿಕ್ಷಣದ ಕೊರತೆಯೇ ಕಾರಣ ಎಂದು ಹೇಳಿದ್ದಾರೆ. ಬದ್ರುದ್ದೀನ್ ಅಜ್ಮಲ್ ಸುಗಂಧ ದ್ರವ್ಯ ಉದ್ಯಮಿ ಮತ್ತು ಎಐಯುಡಿಎಫ್ ಮುಖ್ಯಸ್ಥರಾಗಿದ್ದಾರೆ. ಅವರು ಅಸ್ಸಾಂ ಮುಸ್ಲಿಮರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದು, ರಾಜಕೀಯದಲ್ಲೂ ಅವರಿಗೆ ಉತ್ತಮ ಹಿಡಿತವಿದೆ. ಪ್ರಸ್ತುತ, 126 ಸ್ಥಾನಗಳ ಅಸ್ಸಾಂ ವಿಧಾನಸಭೆಯಲ್ಲಿ AIUDF 15 ಶಾಸಕರನ್ನು ಹೊಂದಿದೆ.
ಮುಸ್ಲಿಮರಲ್ಲಿ ಶಿಕ್ಷಣದ ಕೊರತೆ: ಅಜ್ಮಲ್
ದೇಶಾದ್ಯಂತ ಮುಸ್ಲಿಮರಲ್ಲಿ ಶಿಕ್ಷಣದ ಕೊರತೆ ಇದೆ ಎಂದ ಅವರು, ಸಮುದಾಯದಲ್ಲಿ ಅದರ ಬಗ್ಗೆ ಅರಿವು ಇಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಯುವಕರಿಗೆ ಶಿಕ್ಷಣ ಬಹಳ ಮುಖ್ಯ ಆದರೆ ನಮ್ಮ ಮಕ್ಕಳು ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಸರಿಯಲ್ಲ: ಅಜ್ಮಲ್
ಬಾಲಕಿಯರ ಬಗ್ಗೆ ಹುಡುಗರು ಒಳ್ಳೆಯ ಚಿಂತನೆಗಳನ್ನು ಮಾಡಬೇಕು. ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡುವುದನ್ನು ಇಸ್ಲಾಂನಲ್ಲಿ ಒಳ್ಳೆಯದೆಂದು ಪರಿಗಣಿಸುವುದಿಲ್ಲ. ತಮ್ಮ ಮನೆಯಲ್ಲಿ ವಾಸಿಸುವ ಮಹಿಳೆಯರ ಬಗ್ಗೆ ಯೋಚಿಸುವ ರೀತಿಯಲ್ಲಿ ಅವರು ಇತರರ ಬಗ್ಗೆ ಯೋಚಿಸಬೇಕು ಎಂದು ಅಜ್ಮಲ್ ಹೇಳಿದ್ದಾರೆ.
ಇದನ್ನೂ ಓದಿ: ಗಗನಯಾನ: 20 ವರ್ಷಗಳ ಹಿಂದೆ ಭಾರತ ಕಂಡ ಕನಸನ್ನು ನನಸು ಮಾಡಹೊರಟ ಮೂವರಿವರು
ಅಜ್ಮಲ್ ಅವರ ಪ್ರಕಾರ, ಮುಸ್ಲಿಮರ ಅಭಿವೃದ್ಧಿಗೆ ಅಡ್ಡಿಯಾಗಲು ಮುಖ್ಯ ಕಾರಣವೆಂದರೆ ಕಡಿಮೆ ಸಾಕ್ಷರತೆ. ಆದರೆ ಇದಕ್ಕೆ ಸಂಪೂರ್ಣ ಸರಕಾರವೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ