ವಾರಾಂತ್ಯ ತಿರುಪತಿ ಕಡೆ ಹೋಗುವವರು ಹುಷಾರು! ಚಿರತೆ, ಕರಡಿ ಕಾಣಿಸಿಕೊಂಡಿದೆ

ತಿರುಪತಿ ತಿರುಮಲ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಆತಂಕಕಾರಿ ಸಂಗತಿಯೊಂದು ಕೇಳಿಬಂದಿದೆ. 2-3 ತಿಂಗಳುಗಳ ಹಿಂದೆ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಭಕ್ತರು ಹಿಂಡುಹಿಂಡಾಗಿ ನಡೆದು ಹೋಗುತ್ತಿದ್ದಾಗಲೇ ಚಿರತೆ ಕರಡಿ ದಾಳಿ ಮಾಡಿತ್ತು. ಈ ಮಧ್ಯೆ ಚಿರತೆ, ಕರಡಿ ಹಾವಳಿ ಮತ್ತೆ ಧುತ್ತನೆ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ವತಃ TTDevasthanams ಆತಂಕ ವ್ಯಕ್ತಪಡಿಸಿದೆ.

ವಾರಾಂತ್ಯ ತಿರುಪತಿ ಕಡೆ ಹೋಗುವವರು ಹುಷಾರು! ಚಿರತೆ, ಕರಡಿ ಕಾಣಿಸಿಕೊಂಡಿದೆ
ವಾರಾಂತ್ಯ ತಿರುಪತಿ ಕಡೆ ಹೋಗುವವರು ಹುಷಾರು!
Follow us
ಸಾಧು ಶ್ರೀನಾಥ್​
|

Updated on: Oct 28, 2023 | 9:10 AM

ತಿರುಪತಿ, ಅಕ್ಟೋಬರ್ 28: ತಿರುಮಲ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನಕ್ಕೆ (Tirupati, Tirumala) ತೆರಳುವ ಭಕ್ತರಿಗೆ ಆತಂಕಕಾರಿ ಸಂಗತಿಯೊಂದು ಕೇಳಿಬಂದಿದೆ. 2-3 ತಿಂಗಳುಗಳ ಹಿಂದೆ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ ಭಕ್ತರು ಹಿಂಡುಹಿಂಡಾಗಿ ನಡೆದು ಹೋಗುತ್ತಿದ್ದಾಗಲೇ ಚಿರತೆ ಕರಡಿಗಳು ದಾಳಿ ಮಾಡಿದ್ದು 2-3 ಮಕ್ಕಳು ಸಾವಿಗೀಡಾಗಿದ್ದರು. ಅದಾದ ಮೇಲೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ವತಿಯಿಂದ ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅದರ ಪರಿಣಾಮ ಆ ವನ್ಯ ಮೃಗಗಳ ಹಾವಳಿ ಸಾಕಷ್ಟು ತಹಬಂದಿಗೆ ಬಂದಿತ್ತು. ಆದರೆ ಈ ಮಧ್ಯೆ ಮತ್ತೆ ಚಿರತೆ, ಕರಡಿ ಹಾವಳಿ (leopard, bear) ಧುತ್ತನೆ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ವತಃ TTDevasthanams ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯು ಯಾತ್ರಾರ್ಥಿಗಳಿಗೆ ಮನವಿ ಮಾಡಿಕೊಂಡಿದೆ. ಇದೇ ಅಕ್ಟೋಬರ್ ತಿಂಗಳ 24 ಮತ್ತು 27 ರ ನಡುವೆ ಚಿರತೆ ಮತ್ತು ಕರಡಿ ಚಲನವಲನಗಳು ದಾಖಲಾಗಿದ್ದು, ತಿರುಮಲಕ್ಕೆ ಹೋಗುವ ಅಲಿಪಿರಿ ವಾಕ್‌ ವೇನಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದಿಂದ ರಿಪೀಟರ್‌ ನ ಮಧ್ಯದ ಪ್ರದೇಶದಲ್ಲಿ ವಾಕಿಂಗ್ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ದಾಖಲಾಗಿದೆ ಎಂದು ಎಚ್ಚರಿಸಿದೆ.

Also Read: ತಿರುಪತಿ ತಿರುಮಲ ಬೆಟ್ಟದಲ್ಲಿ ಕಾಡು ಪ್ರಾಣಿಗಳ ಸಂಚಾರ ಹೆಚ್ಚಳ; ಭಕ್ತರ ಸುರಕ್ಷತೆಗೆ ಟಿಟಿಡಿಯಿಂದ ಡ್ರೋನ್ ಬಳಕೆ

ಹಾಗಾಗಿ ವಾರಾಂತ್ಯದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಜ್ಜಾಗಿರುವ ತಕ್ಷಣಕ್ಕೆ ಜಾಗ್ರತೆ ವಹಿಸುವುದು ಸೂಕ್ತ. Tirumala Tirupati Devasthanams @TTDevasthanams ಟ್ವಿಟ್ಟರ್​ ಎಕ್ಸ್ ಮೂಲಕ ಈ ಮಾಹಿತಿ ಹಂಚಿಕೊಂಡಿದೆ:

​ An appeal to the pilgrims: The movements of a leopard and bear were recorded between 24th and 27th of October month, in the camera trap walking in the middle area of ​​the Repeator from Sri Lakshmi Narayanaswamy temple on the Alipiri walkway leading to Tirumala.

leopard and bear movements recorded in the camera trap walking Sri Lakshmi Narayanaswamy temple on the Alipiri walkway leading to Tirumala says TTD

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!