‘ಎನ್‌ಆರ್‌ಸಿ ಸಿಎಎ ಬೇಡ’ ಎಂಬ ಥೀಮ್ನಲ್ಲಿ ದುರ್ಗಾ ಪೂಜೆ ಆಚರಿಸಿದ ಅಖಿಲ ಭಾರತೀಯ ಹಿಂದೂ ಮಹಾಸಭಾ
'No to NRC CAA': ಪ್ರತಿ ವರ್ಷ ನವರಾತ್ರಿ ಹಬ್ಬವನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾ ಅದ್ಧೂರಿಯಾಗಿ ಆಚರಣೆ ಮಾಡುತ್ತದೆ. ಒಂದೊಂದು ವಿಚಾರಗಳನ್ನು ಇಟ್ಟುಕೊಂಡ ಆಚರಣೆ ಮಾಡಲಾಗುತ್ತದೆ. ಈ ಬಾರಿ ನವರಾತ್ರಿ ಹಬ್ಬದಂದು ಸಿಸಿಎ, ಎನ್‌ಆರ್‌ಸಿ ಬೇಡ ಎಂಬ ಉದ್ದೇಶದಡಿಯಲ್ಲಿ ದುರ್ಗ ಮಾತೆಯ ಮೆರವಣಿಗೆ ನಡೆಲಾಗಿದೆ. ಇದೀಗ ಈ ವಿಚಾರ ಎಲ್ಲ ಕಡೆ ಚರ್ಚೆಯಾಗುತ್ತಿದೆ.
ಕೋಲ್ಕತ್ತಾ, ಅ.16: ದೇಶದ್ಯಾಂತ ನವರಾತ್ರಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಈ ಹಬ್ಬ ಒಂದೊಂದು ಕಡೆ ಒಂದೊಂದು ರೀತಿಯಲ್ಲಿರುತ್ತದೆ. ಪಶ್ಚಿಮ ಬಂಗಾಳದಲ್ಲೂ ಕೂಡ ನವರಾತ್ರಿ ಹಬ್ಬ ವಿಶೇಷವಾಗಿದೆ. ಪ್ರತಿ ವರ್ಷ ಈ ಹಬ್ಬವನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾ ಅದ್ಧೂರಿಯಾಗಿ ಆಚರಣೆ ಮಾಡುತ್ತದೆ. ಒಂದೊಂದು ವಿಚಾರಗಳನ್ನು ಇಟ್ಟುಕೊಂಡ ಆಚರಣೆ ಮಾಡಲಾಗುತ್ತದೆ. ಈ ಬಾರಿ ನವರಾತ್ರಿ ಹಬ್ಬದಂದು ಸಿಸಿಎ, ಎನ್‌ಆರ್‌ಸಿ ಬೇಡ ಎಂಬ ಉದ್ದೇಶದಡಿಯಲ್ಲಿ ದುರ್ಗ ಮಾತೆಯ ಮೆರವಣಿಗೆ ನಡೆಲಾಗಿದೆ. ಇದೀಗ ಈ ವಿಚಾರ ಎಲ್ಲ ಕಡೆ ಚರ್ಚೆಯಾಗುತ್ತಿದೆ. ಪಶ್ಚಿಮ ಬಂಗಾಳ ಕೋಲ್ಕತ್ತಾದ ರೂಬಿ ಪಾರ್ಕ್ ಬಳಿ ದುರ್ಗಾ ಪೂಜೆ ನಡೆಸಲಾಗಿತ್ತು. ಪ್ರತಿ ವರ್ಷವೂ ಅಖಿಲ ಭಾರತೀಯ ಹಿಂದೂ ಮಹಾಸಭಾ ಬೇರೆ ಬೇರೆ ಥೀಮ್ ಇಟ್ಟುಕೊಂಡ ದುರ್ಗಾ ಪೂಜೆ ಮಾಡುತ್ತಾರೆ. ಈ ಬಾರಿಯೂ ‘ಎನ್‌ಆರ್‌ಸಿ ಸಿಎಎ ಬೇಡ’ ಎಂಬ ವಿಷಯದಡಿಯಲ್ಲಿ ದುರ್ಗಾ ಮೆರವಣಿಗೆ ನಡೆಸಿದ್ದಾರೆ. ನಾವು ಸನಾತನಿಗಳು ಪಶ್ಚಿಮ ಬಂಗಾಳ ಸ್ಥಳೀಯ ಜನರಿಗೆ ಬೇಷರತ್ತಾದ ಪೌರತ್ವ ನೀಡಿ ಎಂಬು ಘೋಷಣೆಗಳನ್ನು ಕೂಡ ಹಾಕಲಾಗಿದೆ.
ನಿಮ್ಮ ರಾಜಕೀಯಕ್ಕಾಗಿ ಬಂಗಾಳವನ್ನು ವಿಭಜನೆ ಮಾಡಬೇಡಿ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ ಹೇಳಿದೆ. ಕಳೆದ ವರ್ಷ ಈ ಮಹಾಸಭಾ ದೇವಿಯ ಪಾದದ ಕೆಳಗೆ ರಾಕ್ಷಸ ರೂಪದಲ್ಲಿ ಮಹಾತ್ಮಾ ಗಾಂಧೀಜಿಯನ್ನು ಇಡಲಾಗಿತ್ತು ಎಂಬ ವಿವಾದವನ್ನು ಸೃಷ್ಟಿಸಲಾಗಿತ್ತು. ಆದರೆ ಈ ಬಗ್ಗೆ ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಚಂದ್ರಚೂಡ್ ಗೋಸ್ವಾಮಿ ಅವರು ಸ್ಪಷ್ಟನೆ ನೀಡಿದ್ದು, ರಾಕ್ಷಸ ಬದಲು ಗಾಂಧೀಜಿಯನ್ನು ಇಟ್ಟಿಲ್ಲ. ಗಾಂಧೀಜಿಯನ್ನು ಮಹಿಷಾಸುರನನ್ನಾಗಿ ಮಾಡಿಲ್ಲ. ಆದರೆ ನಾವು ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಒಪ್ಪಿಕೊಳ್ಳುವುದಿಲ್ಲ. ನಮಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೇ ನಮ್ಮ ದೇಶದ ಐಕಾನ್ ಎಂದು ಹೇಳಿದ್ದಾರೆ.
ಇನ್ನು ಈ ಬಾರಿಯ ದುರ್ಗಾ ಮೆರವಣಿಯಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧದ ಬಗ್ಗೆ ಮಾತನಾಡಿದ ಅವರು ಬಂಗಾಳದ ಒಟ್ಟಾರೆ ಅಭಿವೃದ್ಧಿಯ ಜತೆಗೆ ನಾವು ಮತುವ ಸಮುದಾಯ ಸೇರಿದಂತೆ ಎಲ್ಲಾ ಸನಾತನಿಗೆ ಬೇಷರತು ಪೌರತ್ವವನ್ನು ನೀಡಬೇಕು. ಭಾರತ ನಮ್ಮ ದೇಶ ಎಂದ ಮೇಲೆ ನಮಗೆ ಯಾಕೆ ಎನ್‌ಆರ್‌ಸಿ, ಸಿಎಎ ಬೇಕು? ಗುರುತಿನ ಆಧಾರದ ಮೇಲೆ ಬಂಗಾಳದ ಜನತೆಗೆ ಏಕೆ ಕಿರುಕುಳ ನೀಡಲಾಗುತ್ತದೆ. ಇದು ಮಾತ್ರವಲ್ಲದೆ ಮತುವ ಸಮುದಾಯಕ್ಕೆ ಪದೇ ಪದೇ ಅನ್ಯಾಯ ಆಗುತ್ತಿದೆ. ಅವರನ್ನು ಏನು ಈ ದೇಶದಿಂದ ಓಡಿಸಬೇಕು ಎಂದು ಹುನ್ನಾರವೇ ನಿಮ್ಮದು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಾದ್ಯಂತ ಎನ್‌ಆರ್‌ಸಿ ಜಾರಿ ಬಗ್ಗೆ ತೀರ್ಮಾನ ಮಾಡಿಲ್ಲ; ಸಂಸತ್ಗೆ ಕೇಂದ್ರ ಸರ್ಕಾರ ಮಾಹಿತಿ
ಈ ಕಾರಣಕ್ಕೆ ಈ ಬಾರಿ ಮೆರವಣಿಯಲ್ಲಿ ಎನ್‌ಆರ್‌ಸಿ, ಸಿಎಎ ಬೇಡ, ನಾವು ಬಂಗಾಳವನ್ನು ವಿಭಜನೆ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕೆಳೆದ ವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಗೆ ವಿವಿಧ ಸಂಘಟನೆಗಳ ಸಭೆ ನಡೆಸಿತ್ತು. ಈ ಸಭೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಚಂದ್ರಚೂಡ್ ಗೋಸ್ವಾಮಿ ಭಾಗವಹಿಸಿದರು. ಸಭೆಯಲ್ಲಿ ಸಿಸಿಎ , ಎನ್‌ಆರ್‌ಸಿ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಜತೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು. ಈ ಸಭೆಯ ನಂತರ ತೃಣಮೂಲ ಕಾಂಗ್ರೆಸ್ ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆ ನಡೆಸಿತ್ತು. ಇದೀಗ ಅಖಿಲ ಭಾರತ ಹಿಂದೂ ಮಹಾಸಭಾ ಈ ಹಾದಿಯಲ್ಲಿ ಸಾಗಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Mon, 16 October 23