AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಾ ಈ ನಾಯಿಗಳು ಬೊಗಳುತ್ತವೆ ಸುಮ್ನೆ ಕಿರಿ ಕಿರಿ ಎಂದು 25 ನಾಯಿಗಳಿಗೆ ವಿಷ ಹಾಕಿ ಕೊಂದ ವ್ಯಕ್ತಿ

ಎಲ್ಲರಿಗೂ ಹೇಗೆ ಅವರವರ ಕೆಲಸವಿರುತ್ತದೆಯೋ ಹಾಗೆಯೇ ಬೊಗುಳುವುದು ನಾಯಿ ಕಾಯಕ, ಹಾಗೆಂದ ಮಾತ್ರಕ್ಕೆ ನಾಯಿಗಳನ್ನು ಕೊಲ್ಲಬೇಕೇ? ಹೀಗೊಂದು ಚರ್ಚೆ ಹುಟ್ಟಿಕೊಂಡಿದೆ. ಮಹಾರಾಷ್ಟ್ರದ ಅಕೋಲಾದಲ್ಲಿ ದಿನಾ ನಾಯಿಗಳು ಬೊಗುಳುತ್ತವೆ ಕಿರಿ ಕಿರಿ ಎಂದು ವ್ಯಕ್ತಿಯೊಬ್ಬ 25 ನಾಯಿಗಳಿಗೆ ವಿಷ ಹಾಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.ವಿಷಪೂರಿತ ಆಹಾರವನ್ನು ಸೇವಿಸಿದ 24 ಗಂಟೆಗಳಲ್ಲಿ 25 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿವೆ, ಆದರೆ ಕೆಲವು ಇನ್ನೂ ಗಂಭೀರ ಸ್ಥಿತಿಯಲ್ಲಿವೆ.

ದಿನಾ ಈ ನಾಯಿಗಳು ಬೊಗಳುತ್ತವೆ ಸುಮ್ನೆ ಕಿರಿ ಕಿರಿ ಎಂದು 25 ನಾಯಿಗಳಿಗೆ ವಿಷ ಹಾಕಿ ಕೊಂದ ವ್ಯಕ್ತಿ
ನಾಯಿಗಳು, ಸಾಂದರ್ಭಿಕ ಚಿತ್ರImage Credit source: Deccan Herald
ನಯನಾ ರಾಜೀವ್
|

Updated on:Apr 04, 2025 | 2:39 PM

Share

ಅಕೋಲಾ, ಏಪ್ರಿಲ್ 04: ಇದಕ್ಕಿಂತಾ ಕ್ರೂರತೆ ಬೇರೆ ಇದೆಯೇ, ನಾಯಿ(Dog) ಬೊಗಳುತ್ತವೆ ಕಿರಿ ಕಿರಿ ಎಂದು 25 ನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ. ಈ ಘಟನೆಯ ನಂತರ, ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸತ್ತ ನಾಯಿಗಳಲ್ಲಿ ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳು ಸೇರಿವೆ.

25ಕ್ಕೂ ಹೆಚ್ಚು ನಾಯಿಗಳು ಸತ್ತಿವೆ

ಈ ಆಘಾತಕಾರಿ ಘಟನೆ ಅಕೋಲಾ ನಗರದ ಪಕ್ಕದಲ್ಲಿರುವ ಗುಡ್ಡಿ ಪ್ರದೇಶದಲ್ಲಿ ನಡೆದಿದೆ. ತಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೀದಿ ನಾಯಿಗಳು ನಮ್ಮನ್ನು ನೋಡಿ ಬೊಗಳುತ್ತವೆ ಎನ್ನುವ ಈ ಕ್ಷುಲ್ಲಕ ಕಾರಣಕ್ಕಾಗಿ, ಅಪರಿಚಿತ ವ್ಯಕ್ತಿಯೊಬ್ಬ ಈ ಮೂಕ ಪ್ರಾಣಿಗಳಿಗೆ ವಿಷ ನೀಡಿ ಕೊಂದಿದ್ದಾನೆ. ವಿಷಪೂರಿತ ಆಹಾರವನ್ನು ಸೇವಿಸಿದ 24 ಗಂಟೆಗಳಲ್ಲಿ 25 ಕ್ಕೂ ಹೆಚ್ಚು ನಾಯಿಗಳು ಸಾವನ್ನಪ್ಪಿವೆ, ಹಾಗೆಯೇ ಕೆಲವು ಇನ್ನೂ ಗಂಭೀರ ಸ್ಥಿತಿಯಲ್ಲಿವೆ.

ಇದನ್ನೂ ಓದಿ
Image
ಹನುಮಾನ್ ಚಾಲೀಸಾಕ್ಕೆ ಪರವಶವಾದ ಶ್ವಾನ ರೈಗ್ನರ್
Image
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Image
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
Image
49 ಕೋಟಿ ಕೊಟ್ಟು ವಿಶ್ವದ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ಶ್ವಾನ ಪ್ರೇಮಿ

ಸಿಸಿಟಿವಿಯಲ್ಲಿ ಬಯಲಾದ ಕೃತ್ಯ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪ್ರದೇಶದ ನಿವಾಸಿಗಳು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯ ನಂತರ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು. ಘಟನೆಯ ತನಿಖೆಗಾಗಿ ಸ್ಥಳೀಯರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪೊಲೀಸರು ಪ್ರಸ್ತುತ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ನಾಯಿಯನ್ನು ಮುದ್ದಾಡಲು ಹೋದ ವಾಚ್‌ಮ್ಯಾನ್‌ ಮೇಲೆ ಏಕಾಏಕಿ ದಾಳಿ ನಡೆಸಿದ ಮತ್ತೊಂದು ಶ್ವಾನ

ಉಮ್ರಿ ವಾರ್ಡ್ ನಿವಾಸಿ ಸಂದೀಪ್ ಗವಾಂಡೆ ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ, ಈ ಕುರಿತು ಟಿವಿ9 ಮರಾಠಿಯೊಂದಿಗೆ ಮಾತನಾಡಿರುವ ಅವರು, ಇದು ಅತ್ಯಂತ ಖಂಡನೀಯ ಘಟನೆ. ಈ ರೀತಿ ಮುಗ್ಧ ಪ್ರಾಣಿಗಳನ್ನು ಕೊಲ್ಲುವುದು ಕ್ರೌರ್ಯದ ಸಂಕೇತ. ಆಡಳಿತವು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಈ ಘಟನೆಯು ಅಕೋಲಾ ನಗರದಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕೊಲೆಗಾರನ ಬಗ್ಗೆ ನಾಗರಿಕರಲ್ಲಿ ತೀವ್ರ ಕೋಪವೂ ಇದೆ. ಈ ಪ್ರಕರಣದಲ್ಲಿ ಪೊಲೀಸರು ಈಗ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:34 pm, Fri, 4 April 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ