Viral: ಮಲಗಿದ್ದ ಶ್ವಾನ ಹನುಮಾನ್ ಚಾಲೀಸಾ ಕೇಳಿದ ತಕ್ಷಣ ಮಾಡಿದ್ದೇನು ನೋಡಿ!
ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ಭಾರೀ ಆಸಕ್ತಿದಾಯಕ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅದಲ್ಲೂ ಈ ಪ್ರಾಣಿಗಳ ವಿಡಿಯೋ, ಅವುಗಳ ಮಾಡುವ ಕೆಲವೊಂದು ಅದ್ಭುತ ವರ್ತನೆಗಳು ನಮ್ಮನ್ನೇ ಅಚ್ಚರಿಗೊಳಿಸುತ್ತದೆ. ಅಂತಹವೊಂದು ಘಟನೆಯೊಂದು ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ, ನಾಯಿಗಿರುವ ಹನುಮಾನ ಮೇಲೆ ಇರುವ ಭಕ್ತಿಯನ್ನು ಸಾಕ್ಷಿಯಾಗಿದೆ. ಈ ಬಗ್ಗೆ ವಿಡಿಯೋ ಇಲ್ಲಿದೆ ನೋಡಿ.

ನಾವು ಮನೆಯಲ್ಲಿ ಸಾಕುವ ಪ್ರಾಣಿಗಳಿಗೆ ನಾವು ಏನ್ನನ್ನೂ ಕಳಿಸುತ್ತೇವೆ. ಅದನ್ನೇ ಆ ಪ್ರಾಣಿಗಳು ಕೂಡ ಕಲಿಯುತ್ತದೆ. ಒಳ್ಳೆಯದನ್ನು ಕಲಿಸಿದರೆ, ಅದು ಕೂಡ ಒಳ್ಳೆಯದನ್ನೇ ಪಾಲಿಸುತ್ತದೆ. ನಮ್ಮ ಕ್ರಿಯೆ ಹೇಗಿರುತ್ತದೆ.ಅದರ ಪ್ರತಿಕ್ರಿಯೆಯೂ ಹಾಗೆ ಇರುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಾಯಿಯೊಂದು ಭಾರೀ ಸದ್ದು ಮಾಡುತ್ತಿದೆ. ನಾಯಿಯೊಂದು ಹನುಮಾನ್ ಚಾಲೀಸಾಗೆ (Hanuman Chalisa) ತನ್ನ ಅದ್ಭುತ ಪ್ರತಿಕ್ರಿಯೆ ನೀಡುವ ಮೂಲಕ ಸುದ್ದಿಯಾಗಿದೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಈ ಶ್ವಾನವು ತನ್ನ ಮನೆಯವರು ಕೇಳುತ್ತಿದ್ದ ಹಾಡಿಗೆ ಪ್ರತಿಕ್ರಿಯೆ ನೀಡುತ್ತದೆ, ಈ ವೇಳೆ ಟಿವಿಯಲ್ಲಿ ಹನುಮಾನ್ ಚಾಲೀಸಾ ಹಾಡು ಕೇಳಿದ ತಕ್ಷಣ, ಮಲಗಿದ್ದ ಶ್ವಾನ ಎದ್ದು ನಿಂತು ಕೂಗಲು ಶುರು ಮಾಡಿದೆ. ಆ ನಾಯಿ ತನ್ನದೇ ಆದ ಭಾಷೆಯಲ್ಲಿ ಹನುಮಂತನನ್ನು ಪೂಜಿಸುತ್ತಿರುವಂತೆ ತೋರುತ್ತಿತ್ತು.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ‘ರೈಗ್ನರ್’ ಎಂಬ ಹೆಸರಿನ ಜರ್ಮನ್ ಶೆಫರ್ಡ್ ನಾಯಿ ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು, ಮನೆಯವರು ವಿಡಿಯೋದಲ್ಲಿ ಬೇರೆ ಬೇರೆ ಹಾಡುಗಳನ್ನು ಒಂದು ಬಾರಿ ಶಾರುಖ್ ಖಾನ್ ಅವರ ‘ಡಂಕಿ’ ಚಿತ್ರದ ‘ಲೂಟ್ ಪುಟ್ ಗಯಾ’ ಹಾಡನ್ನು, ಆನಂತರ ಕೈಲಾಶ್ ಖೇರ್ ಅವರ ‘ಬಾಮ್ ಲಹರಿ’ ಹಾಡು ಹಾಕುತ್ತಾರೆ. ಇದು ಯಾವುದಕ್ಕೂ ಈ ಶ್ವಾನ ಪ್ರತಿಕ್ರಿಯಿಸುವುದಿಲ್ಲ. ಆದರೆ ಹನುಮಾನ್ ಚಾಲೀಸಾ ಹಾಡು ಹಾಕಿದ ತಕ್ಷಣ ಮಲಗಿದ್ದ ಶ್ವಾನ ಎದ್ದು ನಿಂತು ಕೂಗಲು ಶುರು ಮಾಡುತ್ತದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದರಲ್ಲಿ ಈ ಶ್ವಾನದ ಭಕ್ತಿ ತಿಳಿಯುತ್ತದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು thebanjaaraboy ಎಂದು ಇನ್ಸ್ಟಾ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. 1,602,909 ಜನ ಇದನ್ನು ಲೈಕ್ ಮಾಡಿದ್ದಾರೆ. ಐದು ದಿನದ ಹಿಂದೆ ಹಂಚಿಕೊಂಡ ವಿಡಿಯೋ ಕೋಟಿ ವಿಕ್ಷಣೆಯನ್ನು ಪಡೆದಿದೆ. ಹಾಗೂ ಅನೇಕರು ಈ ಬಗ್ಗೆ ಕಮೆಂಟ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಫೋಟೋ ಎಡಿಟ್ ಮಾಡಿ ಕೊಡದ ChatGPT ಜೊತೆ ವಾದಕ್ಕಿಳಿದ ಯುವತಿ
ಒಬ್ಬ ಬಳಕೆದಾರರು ಈ ರೀಲ್ ನೋಡಲು ನಿಜಕ್ಕೂ ಚೆನ್ನಾಗಿದೆ. ಮತ್ತೊಬ್ಬ ಬಳಕೆದಾರರು, “ಸಹೋದರ, ದಯವಿಟ್ಟು ಇದನ್ನು ಪ್ರತಿದಿನ ಪಠಿಸಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು “ಅವರು ಹನುಮಾನ್ ಭಕ್ತರಾದರು” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿ, ಅವರು ಇಡೀ ಚಾಲೀಸಾವನ್ನು ಕಂಠಪಾಠ ಮಾಡಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ