Viral: ದ್ರೋಹಿ ನೀನು… ಘಿಬ್ಲಿ ಸ್ಟೈಲ್ ಫೋಟೋ ಎಡಿಟ್ ಮಾಡಿ ಕೊಡದ ChatGPT ಜೊತೆ ವಾದಕ್ಕಿಳಿದ ಯುವತಿ
ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಶೈಲಿಯ ಎಐ ಫೋಟೋಗಳದ್ದೇ ಹವಾ. ಎಲ್ರೂ ChatGPT ಯ ಸ್ಟುಡಿಯೋ ಘ್ಲಿಬ್ಲಿ ಸ್ಟೈಲ್ ಇಮೇಜ್ ಕ್ರಿಯೇಟರ್ ಮೂಲಕ ತಮ್ಮ ಫೋಟೋಗಳನ್ನು ಕಾರ್ಟೂನ್ ಚಿತ್ರಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬಳು ಯುವತಿ ಕೂಡಾ ತನ್ನ ಫೋಟೋವನ್ನು ಎಡಿಟ್ ಮಾಡಿಕೊಡುವಂತೆ ಕೇಳಿಕೊಂಡಿದ್ದು, ಈ ಫೋಟೋವನ್ನು ಘಿಬ್ಲಿ ಶೈಲಿಯ ಚಿತ್ರವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದ ಚಾಟ್ ಜಿಪಿಟಿ ಮೇಲೆ ಆಕೆ ಗರಂ ಆಗಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಘಿಬ್ಲಿ ಶೈಲಿಯ (Ghibli-style) ಎಐ (AI) ಚಿತ್ರಗಳು (image) ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ, ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) , ಎಕ್ಸ್ (X) ಎಲ್ಲಿ ನೋಡಿದ್ರೂ ಘಿಬ್ಲಿ ಸ್ಟೈಲ್ ಅನಿಮೇಟೆಡ್ ಫೋಟೋಗಳದ್ದೇ ಹವಾ. ಹೆಚ್ಚಿನವರು ತಮ್ಮ ತಮ್ಮ ಫೋಟೋಗಳನ್ನು ChatGPT ಗೆ ಹಾಕಿ ಸ್ಟುಡಿಯೋ ಘ್ಲಿಬ್ಲಿ ಶೈಲಿಯ ಎಐ ಚಿತ್ರಗಳಾಗಿ ಮಾಡಿ ಸ್ಟೋರಿ, ಪೋಸ್ಟ್ ಅಂತೆಲ್ಲಾ ಅಪ್‌ಲೋಡ್ ಮಾಡುತ್ತಿದ್ದಾರೆ. ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ChatGPT ಯಲ್ಲಿ ಕೆಲವೊಂದು ಫೋಟೋಗಳು (Photos) ಘಿಬ್ಲಿ ಶೈಲಿಯ ಎಐ ಇಮೇಜ್‌ಗಳಾಗಿ ಪರಿವರ್ತನೆಗೊಳ್ಳುವುದಿಲ್ಲ. ಇದೇ ಕಾರಣಕ್ಕೆ ಇಲ್ಲೊಬ್ಬಳು ಯುವತಿ ChatGPT ಮೇಲೆ ಗರಂ ಆಗಿದ್ದಾಳೆ. ಹೌದು ತನ್ನ ಫೋಟೋವನ್ನು ಘಿಬ್ಲಿ ಶೈಲಿಯ ಎಐ ಫೋಟೋ ಜನರೇಟ್ ಮಾಡಿಕೊಡದ ChatGPT ಯನ್ನು ಆಕೆ ದ್ರೋಹಿ ಎಂದು ಕರೆದಿದ್ದು, ಈ ಕುರಿತ ಹಾಸ್ಯಮಯ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ChatGPT ಯ ಸ್ಟುಡಿಯೋ ಘ್ಲಿಬ್ಲಿ ಸ್ಟೈಲ್ ಇಮೇಜ್ ಕ್ರಿಯೇಟರ್ ಮೂಲಕ ಎಲ್ಲರೂ ತಮ್ಮ ಫೋಟೋಗಳನ್ನು ಕಾರ್ಟೂನ್ ಚಿತ್ರಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಆದ್ರೆ ಇಲ್ಲೊಬ್ಬಳು ಯುವತಿ ತನ್ನ ಫೋಟೋವನ್ನು ಘ್ಲಿಬ್ಲಿ ಸ್ಟೈಲ್ ಇಮೇಜ್ ಆಗಿ ಪರಿವರ್ತಿಸಿಲ್ಲ ಎಂದು ChatGPT ಯ ಮೇಲೆಯೇ ಕೋಪ ಮಾಡಿಕೊಂಡಿದ್ದಾಳೆ. ಆಕೆ ಚಾಟ್ ಜಿಪಿಟಿಯನ್ನು ದ್ರೋಹಿ ಎಂದು ಕರೆದಿದ್ದು, ಇವರ ನಡುವಿನ ಚಾಟಿಂಗ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಈ ಕುರಿತ ವಿಡಿಯೋವನ್ನು ಅದ್ವಿತಾ (adwitagokhe__) ಎಂಬಾಕೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತನ್ನ ಫೋಟೋವನ್ನು ಘ್ಲಿಬ್ಲಿ ಸ್ಟೈಲ್ ಇಮೇಜ್ ಆಗಿ ಪರಿವರ್ತಿಸದ ChatGPT ಯ ಜೊತೆ ಯುವತಿ ನೀನು ದ್ರೋಹಿ, ಇದು ಚೀಟಿಂಗ್ ಎನ್ನುತ್ತಾ ವಾದಕ್ಕಿಳಿದಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: 1.5 ಲಕ್ಷ ಮೌಲ್ಯದ ಐಫೋನ್ ಕೊಡಿಸಲು ನಿರಾಕರಿಸಿದ ಪೋಷಕರು; ಮನನೊಂದು ಕೈ ಕೊಯ್ದುಕೊಂಡ 18 ರ ಯುವತಿ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೌದು ನನ್ನ ಫೋಟೋವನ್ನು ಕೂಡಾ ಎಡಿಟ್ ಮಾಡಿಕೊಟ್ಟಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮೊದಲ ಬಾರಿಗೆ ನಾನು ಕೂಡಾ ಇದೇ ಸಮಸ್ಯೆಯನ್ನು ಎದುರಿಸಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ತುಂಬಾ ತಮಾಷೆಯಾಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Tue, 1 April 25