Sonia Gandhi: ಮೋತಿ ಲಾಲ್ ವೋರಾ ಅವರೇ ಎಲ್ಲ ಹಣಕಾಸು ನಿರ್ಧಾರ ತೆಗೆದುಕೊಳ್ಳುತ್ತಿದ್ದರು – ರಾಹುಲ್ ಗಾಂಧಿಯಂತೆ ಸೋನಿಯಾ ಸಹ ಅದೇ ಉತ್ತರ ನೀಡಿದರು!
National Herald case: ಮೊದಲು ರಾಹುಲ್ ಗಾಂಧಿ ಮತ್ತು ನಂತರ ಇದೀಗ ಸೋನಿಯಾ ಗಾಂಧಿ ಅವರುಗಳನ್ನು ಹೊರತುಪಡಿಸಿ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಕುಮಾರ್ ಬನ್ಸಾಲ್ ಅವರು ಸಹ ಈ ಮೊದಲು ಇ.ಡಿ ಮುಂದೆ ಇದೇ ಮೋತಿ ಲಾಲ್ ವೋರಾ ಹೆಸರನ್ನು ಹೇಳಿದ್ದರು.
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald case) ಜಾರಿ ನಿರ್ದೇಶನಾಲಯ (Enforcement Directorate -ED) ನಡೆಸಿದ ವಿಚಾರಣೆ ವೇಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ತಮ್ಮ ಪುತ್ರ ಹಾಗೂ ಪಕ್ಷದ ನಾಯಕ ರಾಹುಲ್ ಗಾಂಧಿ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಹೇಳಿದ್ದಂತೆಯೇ ತಾವೂ ಉತ್ತರ ನೀಡಿದ್ದಾರೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.
ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (Associated Journal Limited -AJL) ಮತ್ತು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ಗೆ (Young Indian Private Limited) ಸಂಬಂಧಿಸಿದ ಹಣಕಾಸಿನ ವಹಿವಾಟಿನ ಬಗ್ಗೆ ಸೋನಿಯಾ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ವಿಚಾರಣೆಯ ಮೊದಲ ಎರಡು ದಿನಗಳಲ್ಲಿ ಆಮೂಲಾಗ್ರವಾಗಿ ವಿಚಾರಿಸಿದೆ. ಇಂಡಿಯಾ ಟುಡೇ ಟಿವಿಗೆ ಮೂಲಗಳು ತಿಳಿಸಿರುವ ಪ್ರಕಾರ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ತಮ್ಮ ವಿಚಾರಣೆಯ ಸಮಯದಲ್ಲಿಯೂ ಎಲ್ಲಾ ಹಣಕಾಸು ಸಂಬಂಧಿತ ವಿಷಯಗಳನ್ನು ದಿವಂಗತ ಮೋತಿ ಲಾಲ್ ವೋರಾ (Moti Lal Vora) ನಿರ್ವಹಿಸುತ್ತಿದ್ದರು ಎಂದು ಇ.ಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ವೋರಾ 2020 ರಲ್ಲಿ ನಿಧನರಾದರು ಮತ್ತು ಕಾಂಗ್ರೆಸ್ ಪಕ್ಷದ ದೀರ್ಘಾವಧಿಯ ಖಜಾಂಚಿಯಾಗಿದ್ದರು.
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಮೂಲಕ ವೈಯಕ್ತಿಕ ಲಾಭಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ, ಜೂನ್ ತಿಂಗಳಲ್ಲಿ ರಾಹುಲ್ ಗಾಂಧಿ ತಮ್ಮ ವಿಚಾರಣೆಯ ಸಂದರ್ಭದಲ್ಲಿ, ಯಂಗ್ ಇಂಡಿಯನ್ ಕಂಪನಿಯು ಲಾಭರಹಿತ ಕಂಪನಿಯಾಗಿದ್ದು, ಕಂಪನಿಗಳ ಕಾಯಿದೆಯ ವಿಶೇಷ ನಿಬಂಧನೆಯ ಅಡಿ ಸಂಘಟಿತವಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಮೂಲಗಳ ಪ್ರಕಾರ, ಅದರಲ್ಲಿ ಒಂದು ಪೈಸೆಯನ್ನೂ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಎರಡು ದಿನಗಳ ವಿಚಾರಣೆಯಲ್ಲಿ 8 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಗಾದ ಸೋನಿಯಾ ಗಾಂಧಿ, ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನ ಪಾತ್ರ ಮತ್ತು ಈ ಕಂಪನಿಯ ಮೂಲಕ ಯಾರಾದರೂ ಹಣದ ಲಾಭ ಗಳಿಸಿದ್ದಾರೆಯೇ? ಎಂಬ ಪ್ರಶ್ನೆಗೆ ಇ.ಡಿ.ಗೆ ಇದೇ ರೀತಿಯ ಉತ್ತರಗಳನ್ನು ನೀಡಿದ್ದಾರೆ.
ಇಂದು ಸೋನಿಯಾ ಗಾಂಧಿ ಅವರನ್ನು ಏಜೆನ್ಸಿ ವಿಚಾರಣೆಗೆ ಒಳಪಡಿಸಿದ ಮೂರನೇ ದಿನವಾಗಿದೆ ಮತ್ತು ಜೂನ್‌ನಲ್ಲಿ 5 ದಿನಗಳಲ್ಲಿ 50 ಗಂಟೆಗಳ ಕಾಲ ರಾಹುಲ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಇ.ಡಿ. ಪ್ರಶ್ನಿಸಿದ್ದು, ನ್ಯಾಷನಲ್ ಹೆರಾಲ್ಡ್ ಅನ್ನು ಹೊಂದಿರುವ ಕಾಂಗ್ರೆಸ್ ನಿಂದ ಪ್ರಚಾರ ಮಾಡಲಾದ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿನ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದೆ. ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿದೆ ಮತ್ತು ಯಂಗ್ ಇಂಡಿಯನ್ ಒಡೆತನದಲ್ಲಿದೆ.