ಅಫ್ಘಾನ್ನಿಂದ ಸ್ಥಳಾಂತರ ಪ್ರಕ್ರಿಯೆ ಸ್ಥಗಿತಗೊಳಿಸಿದ ಭಾರತ; ತಜಕಿಸ್ತಾನದಿಂದ ವಾಪಸ್ ಬಂದ ವಿಮಾನಗಳು
ಭಾರತ ಅಫ್ಘಾನಿಸ್ತಾನದಿಂದ ಕೇವಲ ತನ್ನ ನಾಗರಿಕರನ್ನಷ್ಟೇ ಸ್ಥಳಾಂತರ ಮಾಡಿಲ್ಲ. ಬದಲಿಗೆ ಭಾರತಕ್ಕೆ ಬರಲು ಇಚ್ಛಿಸಿದ ಅಫ್ಘಾನ್ ನಾಗರಿಕರನ್ನೂ ಕರೆತಂದಿದೆ. ಇಲ್ಲಿಯವರೆಗೆ ಆರು ಪ್ರತ್ಯೇಕ ವಿಮಾನಗಳ ಮೂಲಕ 550 ಜನರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.
ಅಫ್ಘಾನಿಸ್ತಾನದಿಂದ, ಭಾರತೀಯ ನಾಗರಿಕರು, ಅಫ್ಘಾನ್ ಪ್ರಜೆಗಳು, ಭಾರತೀಯ ವಿವಿಧ ಅಧಿಕಾರಿಗಳನ್ನು ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದ c-17 ಮತ್ತು C-130ಜೆ ವಿಮಾನಗಳನ್ನು ಮತ್ತು ಅದರ ಸಿಬ್ಬಂದಿಯನ್ನು ಭಾರತೀಯ ವಾಯುಸೇನೆ ಇದೀಗ ವಾಪಸ್ ಕರೆಸಿದೆ. ಯುದ್ಧ ಸನ್ನಿವೇಶ ಇರುವ ಅಫ್ಘಾನಿಸ್ತಾನದಿಂದ ಜನರನ್ನು ರಕ್ಷಿಸಲು ಭಾರತದ ಯುದ್ಧ ವಿಮಾನಗಳನ್ನು ತಜಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿತ್ತು. ಆ ಎಲ್ಲ ವಿಮಾನಗಳು ಮತ್ತು ಅದರ ಸಿಬ್ಬಂದಿಯನ್ನುತಜಕಿಸ್ತಾನ ಹಾಗೂ ಅಫ್ಘಾನ್ನಿಂದ ವಾಪಸ್ ಕರೆಸಲಾಗಿದ್ದು, ಅವು ಭಾರತದಲ್ಲಿರುವ ತಮ್ಮ ತಮ್ಮ ವಾಯುನೆಲೆಗಳಿಗೆ ಮರಳಿವೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಅಫ್ಘಾನ್ ತಾಲಿಬಾನ್ ವಶವಾಗುತ್ತಿದ್ದಂತೆ ಅಲ್ಲಿದ್ದ ಭಾರತೀಯ ನಾಗರಿಕರು, ಅಧಿಕಾರಿಗಳನ್ನು ವಾಪಸ್ ಕರೆತರಲು ಭಾರತ ತಜಕಿಸ್ತಾನದ ದುಶಾಂಬೆಯ ಅಯ್ನಿ ವಾಯುನೆಲೆಯಲ್ಲಿ ಕೆಲವು ಯುದ್ಧ ವಿಮಾನಗಳನ್ನು ನಿಯೋಜಿಸಿತ್ತು. ಕಾಬೂಲ್ನಿಂದ C-130J ವಿಮಾನಗಳ ಮೂಲಕ ತಜಕಿಸ್ತಾನಕ್ಕೆ ಜನರನ್ನು ಕರೆತಂದು, ಅಲ್ಲಿಂದ ಭಾರತಕ್ಕೆ ತಲುಪಿಸಲಾಗುತ್ತಿತ್ತು. ಹಾಗೇ, ಮಜರ್ ಐ ಶರಿಫ್ ಮತ್ತು ಕಂದಹಾರ್ ಧೂತಾವಾಸದಲ್ಲಿ ಸಿಲುಕಿದ್ದ ಭಾರತೀಯ ಅಧಿಕಾರಿಗಳನ್ನೂ ಸಹ ವಿಮಾನಗಳ ಮುಖಾಂತರ ರಕ್ಷಿಸಲಾಗಿದೆ. ಈ ರಕ್ಷಣಾ ಕಾರ್ಯಾಚರಣೆ ಸುಲಭದ್ದಾಗಿರಲಿ. ಬರೀ ಭಾರತವಷ್ಟೇ ಅಲ್ಲದೆ, ಯುಎಸ್ ಸೇರಿ ಇನ್ನೂ ಕೆಲವು ರಾಷ್ಟ್ರಗಳು ಸ್ಥಳಾಂತರ ಪ್ರಕ್ರಿಯೆ ನಡೆಸುತ್ತಿದ್ದುದರಿಂದ ರನ್ ವೇ ಸದಾ ಗಿಜಿಗುಡುತ್ತಿತ್ತು. ಅದರಲ್ಲೂ ವಿಮಾನ ಕಂಡರೆ ಸಾಕು, ಅಲ್ಲಿನ ಜನ ನೂಕು-ನುಗ್ಗಲು ಮಾಡುತ್ತ, ಹತ್ತಲು ಬರುತ್ತಿದ್ದರು. ಈ ಹೊತ್ತಲ್ಲಿ ಐಎಎಫ್ನ ಗರುಡ್ ಕಮಾಂಡೋಗಳು ಮತ್ತು ಇಂಡೋ-ಟಿಬೆಟಿಯನ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
550 ಜನರ ಸ್ಥಳಾಂತರ ಭಾರತ ಅಫ್ಘಾನಿಸ್ತಾನದಿಂದ ಕೇವಲ ತನ್ನ ನಾಗರಿಕರನ್ನಷ್ಟೇ ಸ್ಥಳಾಂತರ ಮಾಡಿಲ್ಲ. ಬದಲಿಗೆ ಭಾರತಕ್ಕೆ ಬರಲು ಇಚ್ಛಿಸಿದ ಅಫ್ಘಾನ್ ನಾಗರಿಕರನ್ನೂ ಕರೆತಂದಿದೆ. ಇಲ್ಲಿಯವರೆಗೆ ಆರು ಪ್ರತ್ಯೇಕ ವಿಮಾನಗಳ ಮೂಲಕ 550 ಜನರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಈ ಸ್ಥಳಾಂತರ ಪ್ರಕ್ರಿಯೆ ಸಂಬಂಧ ನಾವು ಯುಎಸ್, ತಜಕೀಸ್ತಾನ ಸೇರಿ ಹಲವು ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಎರಡು ದಿನಗಳ ಹಿಂದೆ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರರೊಬ್ಬರು ತಿಳಿಸಿದ್ದರು.
ಇದನ್ನೂ ಓದಿ: ಮೈಸೂರು: ವೃತ್ತಿ ವೈಷಮ್ಯದಿಂದ ದರೋಡೆಗೆ ಸುಪಾರಿ ನೀಡಿದ್ದ ಬೇರೊಂದು ಗೋಲ್ಡ್ ಅಂಗಡಿಯ ಮಾಲೀಕನ ಬಂಧನ
ಜೆಡಿಎಸ್ ಮುಳುಗುತ್ತಿದೆ, ಬಿಜೆಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ: ಮೈಸೂರಿನಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
Published On - 10:50 am, Tue, 31 August 21