ಕೇರಳ ಬಿಜೆಪಿ ಘಟಕ ವಿರುದ್ಧ ಹವಾಲಾ ಆರೋಪ: ಸ್ವತಂತ್ರ ಸಮಿತಿಯಿಂದ ವರದಿ ಕೇಳಿದ ಬಿಜೆಪಿ
Kodakara Money Heist Case: 3.5 ಕೋಟಿ ರೂ.ಗಳ ಅಕ್ರಮ ಹಣದ ವಹಿವಾಟು ಸಂಬಂಧಿಸಿದಂತೆ ಕೇರಳದ ಹಲವಾರು ಬಿಜೆಪಿ ನಾಯಕರನ್ನು ಕೇರಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಅದು "ಲೆಕ್ಕವಿಲ್ಲದ ಚುನಾವಣಾ ನಿಧಿಗಳು" ಎಂದು ಶಂಕಿಸಲಾಗಿದೆ.
ತಿರುವನಂತಪುರಂ: ಬಿಜೆಪಿಯ ಕೇರಳ ಘಟಕದ ವಿರುದ್ಧ ಕೇಳಿ ಬರುತ್ತಿರುವ ಹವಾಲಾ ಪ್ರಕರಣವೆಂದು ಪರಿಗಣಿಸಲಾಗುತ್ತಿರುವ ಹಣದ ಅಕ್ರಮ ವಹಿವಾಟು ಸೇರಿದಂತೆ ಹಲವಾರು ವಿವಾದಗಳ ಬಗ್ಗೆ ವರದಿ ಸಲ್ಲಿಸಲು ಪಕ್ಷದ ಉನ್ನತ ರಾಷ್ಟ್ರೀಯ ನಾಯಕತ್ವವು ಮೂವರು ಸದಸ್ಯರ “ಸ್ವತಂತ್ರ” ಸಮಿತಿಯಲ್ಲಿ ಹೇಳಿದೆ. ಈ ಸಮಿತಿಯಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ ಸಿ.ವಿ. ಆನಂದ ಬೋಸ್, ಜಾಕೋಬ್ ಥಾಮಸ್ ಮತ್ತು ಇ.ಶ್ರೀಧರನ್ ಇದ್ದಾರೆ. ಈಗಷ್ಟೇ ಮುಗಿದಿರುವ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಕೇಂದ್ರ ಬಿಜೆಪಿಯಿಂದ ರಾಜ್ಯ ಘಟಕಕ್ಕೆ ಕಳುಹಿಸಿದ ಹಣದ ಕುರಿತು ವಿವಿಧ ನಾಯಕರು ಮತ್ತು ಅಭ್ಯರ್ಥಿಗಳೊಂದಿಗೆ ಮಾತನಾಡಿದ ನಂತರ ವರದಿ ಸಲ್ಲಿಸುವಂತೆ ಕೇಳಲಾಯಿತು ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮಾಜಿ ಐಪಿಎಸ್ ಅಧಿಕಾರಿ ಥಾಮಸ್ ಮತ್ತು ದೆಹಲಿಯ ಮಾಜಿ ಮೆಟ್ರೊ ಮುಖ್ಯಸ್ಥರಾದ ಶ್ರೀಧರನ್ ಅವರು ಏಪ್ರಿಲ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ಗಳಲ್ಲಿ ಸ್ಪರ್ಧಿಸಿದ್ದರೂ, ಅವರು ಇತ್ತೀಚೆಗೆ ಪಕ್ಷದ ಸಕ್ರಿಯ ಸದಸ್ಯರಾಗಿರಲಿಲ್ಲ. ಆದ್ದರಿಂದ ಯಾವುದೇ ನಿರ್ದಿಷ್ಟ ಬಣಕ್ಕೆ ಸೇರಿದವರಾಗಿ ಕಾಣಲಿಲ್ಲ. ಬೋಸ್ ನಿವೃತ್ತ ಐಎಎಸ್ ಅಧಿಕಾರಿ ಆಗಿದ್ದಾರೆ. ಇವರಲ್ಲಿ ಒಬ್ಬರು ವರದಿ ಸಲ್ಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಖಚಿತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ವರದಿಗಳನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಬಣಗಳಿಂದ ಕೂಡಿದ ರಾಜ್ಯ ಘಟಕದಲ್ಲಿ ದೂರುಗಳು ಮತ್ತು ನಾಯಕತ್ವದ ಬದಲಾವಣೆಯ ಬೇಡಿಕೆಗಳಿಂದ ತುಂಬಿರುವ ಪಕ್ಷದ ನಾಯಕತ್ವವು ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಅವರನ್ನು ರಾಜ್ಯ ನಾಯಕರ “ಮಾಹಿತಿ ಸಂಗ್ರಹಿಸಲು” ಕೇಳಿದೆ.
ಸ್ವತಂತ್ರ ತಂಡದಿಂದ ವರದಿಯನ್ನು ಪಡೆಯುವ ಉನ್ನತ ನಾಯಕತ್ವದ ಕ್ರಮವು ಮಹತ್ವದ್ದಾಗಿದೆ, ಏಕೆಂದರೆ ಪ್ರಧಾನ ಕಾರ್ಯದರ್ಶಿ (ಸಂಸ್ಥೆ) ಬಿ. ಎಲ್. ಸಂತೋಷ್ ಅವರು ರಾಜ್ಯ ವ್ಯವಹಾರಗಳ ಉಸ್ತುವಾರಿ ವಹಿಸಿದ್ದರು. ಕೇರಳದ ಬಿಜೆಪಿ ನಾಯಕರಲ್ಲಿ ಒಂದು ಭಾಗವು ಸಂತೋಷ್ ವಿರುದ್ಧ ಉನ್ನತ ನಾಯಕತ್ವಕ್ಕೆ ದೂರು ನೀಡಿದ ಸಮಯದಲ್ಲಿ, ರಾಜ್ಯ ಘಟಕದ ಮುಖ್ಯಸ್ಥ ಕೆ.ಸುರೇಂದ್ರನ್ ನೇತೃತ್ವದ ಅಧಿಕೃತ ಬಣಕ್ಕೆ ಒಲವು ತೋರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
3.5 ಕೋಟಿ ರೂ.ಗಳ ಅಕ್ರಮ ಹಣದ ವಹಿವಾಟು ಸಂಬಂಧಿಸಿದಂತೆ ಕೇರಳದ ಹಲವಾರು ಬಿಜೆಪಿ ನಾಯಕರನ್ನು ಕೇರಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಅದು “ಲೆಕ್ಕವಿಲ್ಲದ ಚುನಾವಣಾ ನಿಧಿಗಳು” ಎಂದು ಶಂಕಿಸಲಾಗಿದೆ. ಹಿರಿಯ ಬಿಜೆಪಿ ನಾಯಕರು ಮತ್ತು ಸುರೇಂದ್ರನ್ ಅವರ ವೈಯಕ್ತಿಕ ಸಹಾಯಕರನ್ನು ಈಗಾಗಲೇ ಪ್ರಶ್ನಿಸಲಾಗಿದೆ. ಜನಾಧಿಪತ್ಯ ರಾಷ್ಟ್ರೀಯ ಸಭಾ ಪಕ್ಷದ ಮುಖ್ಯಸ್ಥೆ ಸಿ.ಕೆ ಜಾನು ಅವರು, ಏಪ್ರಿಲ್ 6ರಂದು ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಜತೆ ಸೇರಲು ಸುರೇಂದ್ರನ್ ಅವರಿಂದ ನಾನು 10 ಕೋಟಿ ರೂ.ಗಳನ್ನು ಕೇಳಿದ್ದೆ ಕೊನೆಗೆ 10 ಲಕ್ಷ ರೂ. ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರಿಂದಾಗಿ ಪಕ್ಷದ ನಾಯಕತ್ವವು ಹೆಚ್ಚು ಮುಜುಗರವನ್ನು ಎದುರಿಸಬೇಕಾಯಿತು.
ನಂತರ, ಸುರೇಂದ್ರನ್ ಸ್ಪರ್ಧಿಸಿದ ಸ್ಥಾನಗಳಲ್ಲಿ ಒಂದಾದ ಮಂಜೇಶ್ವರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಬಿಎಸ್ ಪಿ ಅಭ್ಯರ್ಥಿ ಕೆ.ಸುಂದರ ಅವರು ನಾಮಪತ್ರ ಹಿಂತೆಗೆದುಕೊಳ್ಳಲು 2.5 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಆರೋಪಿಸಿದಾಗ ಪಕ್ಷಕ್ಕೆ ಇನ್ನಷ್ಟು ಮುಜುಗರ ಉಂಟಾಗಿದೆ. ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ. ವಿವಾದಗಳು ವಿಶ್ವಾಸಾರ್ಹ ರಾಜಕೀಯ ಪರ್ಯಾಯವಾಗಿ ಹೊರಹೊಮ್ಮುವ ಬಿಜೆಪಿಯ ಭವಿಷ್ಯವನ್ನು ಇನ್ನಷ್ಟು ಹದಗೆಡಿಸಿವೆ ಎಂದು ಖಾಸಗಿಯಾಗಿ ಒಪ್ಪಿಕೊಂಡರೆ, ರಾಷ್ಟ್ರೀಯ ನಾಯಕತ್ವವು ರಾಜ್ಯ ನಾಯಕರನ್ನು ತಮ್ಮ ಕಾರ್ಯವನ್ನು ಒಟ್ಟುಗೂಡಿಸಲು ಏಕ ಘಟಕವಾಗಿ ಬರಲು ನಿರ್ದೇಶಿಸಿದೆ.
ಭಾನುವಾರ, ರಾಜ್ಯ ಬಿಜೆಪಿ ಪ್ರಮುಖ ಕೋರ್ ಸಮಿತಿ ಸಭೆಯ ಮುನ್ನ, ಪಕ್ಷದ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು ಆಡಳಿತಾರೂಢ ಸಿಪಿಐ-ಎಂ ಮತ್ತು ಮುಖ್ಯ ವಿರೋಧ ಪಕ್ಷದ ಕಾಂಗ್ರೆಸ್ ಸುರೇಂದ್ರನ್ ಅವರನ್ನು “ಮೂಲೆ ಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು. “ಬಿಜೆಪಿ ಅದನ್ನು ಅನುಮತಿಸುವುದಿಲ್ಲ” ಎಂದು ರಾಜಶೇಖರನ್ ಹೇಳಿದರು.
ಕೇರಳದ ಬಿಜೆಪಿಯ ಮೂಲಗಳ ಪ್ರಕಾರ ರಾಷ್ಟ್ರೀಯ ನಾಯಕತ್ವವು ಇನ್ನೂ ಸ್ವಚ್ಛ ರಾಜಕಾರಣಿ ಎಂಬ ಚಿತ್ರಣವನ್ನು ಹೊಂದಿರುವ ರಾಜಶೇಖರನ್ ಅವರನ್ನು ಪಕ್ಷವನ್ನು ರಕ್ಷಿಸುವ ಉಸ್ತುವಾರಿ ವಹಿಸಿದೆ. ಮೂಲಗಳ ಪ್ರಕಾರ, ಅಕ್ರಮ ಹಣದ ವ್ಯವಹಾರ ಪ್ರಕರಣದಲ್ಲಿ ಬಿಜೆಪಿಯ ಸಮರ್ಥನೆಯು ಕೋರ್ ಕಮಿಟಿ ಸಭೆಯಲ್ಲಿ ತೀವ್ರ ಟೀಕೆಗೆ ಗುರಿಯಾಯಿತು. ಈ ಪ್ರಕರಣದಲ್ಲಿ ಪಕ್ಷದ “ನಿರಾಕರಣೆ” ತನ್ನ ಇಮೇಜ್ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹಾನಿಯುಂಟು ಮಾಡಲಿದೆ ಎಂದು ಒಂದು ವಿಭಾಗದ ನಾಯಕರು ಎಚ್ಚರಿಸಿದ್ದಾರೆ. ಮೂಲಗಳ ಪ್ರಕಾರ, “ನಾವು ಸಾರ್ವಜನಿಕರ ಮುಂದೆ ಅಪಹಾಸ್ಯಕ್ಕೊಳಗಾಗುತ್ತೇವೆ” ಎಂದು ನಾಯಕರೊಬ್ಬರು ಎಚ್ಚರಿಸಿದ್ದಾರೆ.
“ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಷ್ಟೇ ಅಲ್ಲ, ಇತ್ತೀಚಿನ ವಿವಾದಗಳು ಪಕ್ಷದ ಚಿತ್ರಣ ಮತ್ತು ವಿಶ್ವಾಸಾರ್ಹತೆಗೆ ಚ್ಯುತಿ ತಂದಿದೆ” ಎಂದು ಹೆಸರು ಹೇಳಲಿಚ್ಛಿಸದ ಕೇರಳದ ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
“ಪಕ್ಷವು ಒಂದಾಗಿದ್ದರೆ ಈ ಪ್ರಕರಣ ಹೊರಬರುತ್ತಿರಲಿಲ್ಲ. ಇದು ಬಣವಾಗಿ ವಿಭಜನೆಗೊಂಡ ಕಾರಣದಿಂದಾಗಿ ಮಾತ್ರ ಬಹಿರಂಗವಾಯಿತು, ”ಎಂದು ಆ ನಾಯಕ ಹೇಳಿದರು. ಕೆಲವರು ಇದು ನಾಟಕ ಎಂದು ಹೇಳುತ್ತಿದ್ದರೂ ‘ಅವ್ಯವಹಾರ ಪ್ರಕರಣ’ ಪೊಲೀಸರಿಗೆ ವರದಿಯಾಗಿದೆ,. ಏಕೆಂದರೆ ಪ್ರತಿಸ್ಪರ್ಧಿ ಬಣವು ಹಣವನ್ನು ತಮ್ಮ ಅಭ್ಯರ್ಥಿಗಳನ್ನು ತಲುಪಿಲ್ಲ ಎಂದು ಅರಿತುಕೊಂಡಿದೆ. “ಈಗ ಇದು ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ದೊಡ್ಡ ಮುಜುಗರವಾಗಿದೆ,.ಏಕೆಂದರೆ ಆರ್ ಎಸ್ ಎಸ್ ನಾಯಕರ ಹೆಸರುಗಳನ್ನು ಸಹ ಇಲ್ಲಿ ಎಳೆದು ತರಲಾಗುತ್ತಿದೆ” ಎಂದು ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿ ಈ ವಿಧಾನಸಭಾ ಚುನಾವಣೆಯಲ್ಲಿ ತನ್ನ ಏಕೈಕ ಸ್ಥಾನವನ್ನು ನೇಮಮ್ ಅನ್ನು ಕಳೆದುಕೊಂಡಿತ್ತು. ಅಷ್ಟೇ ಅಲ್ಲದೆ 2016 ರ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳು ಶೇ 14.46 ರಿಂದ ಈ ಬಾರಿ ಶೇ 11.30 ಕ್ಕೆ ಇಳಿದಿದೆ.
ಇದನ್ನೂ ಓದಿ: ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್