ಅಮರಾವತಿ ಕೇವಲ ನಗರವಲ್ಲ, ಕನಸಿನ ಸಾಕಾರ; ಆಂಧ್ರಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಪ್ರಮುಖ ಯೋಜನೆಗಳ ಪುನರಾರಂಭ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಆಂಧ್ರಪ್ರದೇಶದಲ್ಲಿ 58,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅಮರಾವತಿ ಒಂದು ನಗರವಲ್ಲ, ಒಂದು ಶಕ್ತಿ. ಅಮರಾವತಿ ಆಂಧ್ರಪ್ರದೇಶವನ್ನು ಆಧುನಿಕ ರಾಜ್ಯವನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ. ಒಂದು ದೊಡ್ಡ ಕನಸು ನನಸಾಗಲಿದೆ. ನಾವು ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ಇದು ಬಲವಾದ ಅಡಿಪಾಯ ಎಂದು ಪ್ರಧಾನಿ ಮೋದಿ ಹೇಳಿದರು.

ಅಮರಾವತಿ ಕೇವಲ ನಗರವಲ್ಲ, ಕನಸಿನ ಸಾಕಾರ; ಆಂಧ್ರಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಪ್ರಮುಖ ಯೋಜನೆಗಳ ಪುನರಾರಂಭ
Pm Modi In Andhra Pradesh

Updated on: May 02, 2025 | 6:10 PM

ಅಮರಾವತಿ, ಮೇ 2: ಆಂಧ್ರಪ್ರದೇಶದ ಅಮರಾವತಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) 58,000 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತೆಲುಗಿನಲ್ಲಿ “ಕನಕದುರ್ಗಾ ದೇವಿಯೇ ಜಯವಾಗಲಿ” ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದರು. ಅಮರಾವತಿಯೊಂದಿಗೆ ಪ್ರತಿಯೊಬ್ಬ ಆಂಧ್ರಪ್ರದೇಶದ ವ್ಯಕ್ತಿಯ ಕನಸು ನನಸಾಗುತ್ತದೆ. ದಾಖಲೆಯ ವೇಗದಲ್ಲಿ ಅಮರಾವತಿ ನಿರ್ಮಿಸಲು ನಾವು ಸಹಾಯ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

ಅಮರಾವತಿ ಆಂಧ್ರಪ್ರದೇಶವನ್ನು ಆಧುನಿಕ ರಾಜ್ಯವನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ. ಈ ಮೂಲಕ ಒಂದು ದೊಡ್ಡ ಕನಸು ನನಸಾಗಲಿದೆ. ನಾವು ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ಇದು ಬಲವಾದ ಅಡಿಪಾಯ. ಅಮರಾವತಿ ಸ್ವರ್ಣಾಂಧ್ರ ದೃಷ್ಟಿಕೋನಕ್ಕೆ ಬಲ ನೀಡುತ್ತದೆ. ಇಂದು ಚಾಲನೆಗೊಂಡ ಯೋಜನೆಗಳು ಮೂಲಸೌಕರ್ಯವನ್ನು ಬಲಪಡಿಸುತ್ತವೆ ಮತ್ತು ರಾಜ್ಯದ ಬೆಳವಣಿಗೆಯನ್ನು ವೇಗಗೊಳಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು


ಇದನ್ನೂ ಓದಿ: ಉಗ್ರರ ಹುಟ್ಟಡಗಿಸಲು ಸಶಸ್ತ್ರ ಪಡೆಗಳಿಗೆ ಪೂರ್ತಿ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ

“ಅಮರಾವತಿ ಒಂದು ನಗರವಲ್ಲ, ಆದರೆ ನನಸಾಗುತ್ತಿರುವ ಕನಸು. ಹೊಸ ಅಮರಾವತಿ, ಹೊಸ ಆಂಧ್ರಪ್ರದೇಶವನ್ನು ನಾವು ಕಾಣಬಹುದಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಶಕ್ತಿಯನ್ನು ಅಮರಾವತಿಯಲ್ಲಿ ಕಾಣಬಹುದು. ಇಂದು ಪ್ರಾರಂಭಿಸಲಾದ ಅಭಿವೃದ್ಧಿ ಕಾರ್ಯಗಳು ಮೂಲಸೌಕರ್ಯವನ್ನು ಬಲಪಡಿಸುತ್ತವೆ ಮತ್ತು ಆಂಧ್ರಪ್ರದೇಶದ ಬೆಳವಣಿಗೆಯನ್ನು ವೇಗಗೊಳಿಸುತ್ತವೆ” ಎಂದು ಪ್ರಧಾನಿ ಮೋದಿ ತಮ್ಮ ಎನ್‌ಡಿಎ ಮಿತ್ರರಾಷ್ಟ್ರಗಳಾದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೊಂದಿಗೆ ಸಾರ್ವಜನಿಕ ಸಭೆಯಲ್ಲಿ ಹೇಳಿದರು.


ಇದನ್ನೂ ಓದಿ: ಹತ್ತಿರ ಕರೆದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ

ಅಮರಾವತಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಅಮರಾವತಿ ಇಂದ್ರಲೋಕದ ರಾಜಧಾನಿಯ ಹೆಸರಾಗಿತ್ತು. ಅಮರಾವತಿ ಆಂಧ್ರಪ್ರದೇಶದ ರಾಜಧಾನಿಯಾಗಿರುವುದು ಕೇವಲ ಕಾಕತಾಳೀಯವಲ್ಲ. ಇದು ‘ಸ್ವರ್ಣ ಆಂಧ್ರ’ ಸ್ಥಾಪನೆಯ ಸಂಕೇತವಾಗಿದೆ. ‘ಸ್ವರ್ಣ ಆಂಧ್ರ’ವು ವಿಕಸಿತ್ ಭಾರತಕ್ಕೆ ಹಾದಿಯನ್ನು ಬಲಪಡಿಸುತ್ತದೆ ಮತ್ತು ಅಮರಾವತಿ ‘ಸ್ವರ್ಣ ಆಂಧ್ರ’ದ ದೃಷ್ಟಿಕೋನವನ್ನು ಸಬಲಗೊಳಿಸುತ್ತದೆ” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:10 pm, Fri, 2 May 25