ಈ ಕಾರ್ಯಕ್ರಮವು ಹಲವರ ನಿದ್ದೆಗೆಡಿಸುವುದಂತೂ ಪಕ್ಕಾ: ಪ್ರಧಾನಿ ಮೋದಿ ಹೀಗೆ ಹೇಳಿದ್ಯಾಕೆ?
PM Modi inaugurates Vizhinjam Port : ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದಲ್ಲಿ ನಿರ್ಮಿಸಲಾಗಿರುವ ವಿಳಿಂಜಂ ಅಂತರರಾಷ್ಟ್ರೀಯ ಬಂದರನ್ನು ಉದ್ಘಾಟಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಉದ್ದೇಶಿಸಿ ಮಾತನಾಡಿ, ನೀವು ಇಂಡಿ ಮೈತ್ರಿಕೂಟದ ಬಲವಾದ ಆಧಾರಸ್ತಂಭ. ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಅನೇಕ ಜನರ ನಿದ್ದೆಗೆಡಿಸಲಿದೆ ಎಂದು ನಗೆ ಚಟಾಕಿ ಹಾರಿಸಿದರು.

ತಿರುವನಂತಪುರಂ, ಮೇ 02: ಈ ಕಾರ್ಯಕ್ರಮವು ಹಲವರ ನಿದ್ದೆಗೆಡಿಸುವುದಂತೂ ನಿಶ್ಚಿತ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಕೇರಳಕ್ಕೆ ತೆರಳಲಿರುವ ಅವರು, ವಿಳಿಂಜಂ(Vizhinjam) ಅಂತರರಾಷ್ಟ್ರೀಯ ಬಂದರನ್ನು ಉದ್ಘಾಟಿಸಿ ಮಾತನಾಡಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಉದ್ದೇಶಿಸಿ ಮಾತನಾಡಿ, ನೀವು ಇಂಡಿ ಮೈತ್ರಿಕೂಟದ ಬಲವಾದ ಆಧಾರಸ್ತಂಭ. ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಅನೇಕ ಜನರ ನಿದ್ದೆಗೆಡಿಸಲಿದೆ ಎಂದು ನಗೆ ಚಟಾಕಿ ಹಾರಿಸಿದರು.
ಅದಾನಿ ಗ್ರೂಪ್ ಶ್ಲಾಘಿಸಿದ ಮೋದಿ ಭವಿಷ್ಯದಲ್ಲಿ ಕರಾವಳಿ ನಗರಗಳು ಭಾರತದ ಆರ್ಥಿಕ ಬೆಳವಣಿಗೆಯ ಕೇಂದ್ರವಾಗುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಳಿಂಜಂ ಬಂದರನ್ನು ನಿರ್ಮಿಸಿದ್ದಕ್ಕಾಗಿ ಅದಾನಿ ಗ್ರೂಪ್ ಅನ್ನು ಅವರು ಶ್ಲಾಘಿಸಿದರು. ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ) ಸುಮಾರು 8,867 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ಭಾರತದ ಕಡಲ ಭವಿಷ್ಯವನ್ನು ಹೆಚ್ಚಿಸುತ್ತದೆ ಮತ್ತು ಕೇರಳವನ್ನು ಜಾಗತಿಕ ಕಡಲ ನಕ್ಷೆಯಲ್ಲಿ ಅಗ್ರಸ್ಥಾನದಲ್ಲಿರಿಸುತ್ತದೆ ಎಂದರು.
ದೊಡ್ಡ ಸರಕು ಹಡಗುಗಳಿಗೆ ಬರಲು ಅವಕಾಶ ಪ್ರಧಾನಿ ಮೋದಿ ಅವರು ಈಗ ವಿಶ್ವದ ದೊಡ್ಡ ಸರಕು ಹಡಗುಗಳು ಇಲ್ಲಿಗೆ ಸುಲಭವಾಗಿ ಬರಲು ಸಾಧ್ಯವಾಗುತ್ತದೆ . ಭಾರತದ ಶೇ. 75 ರಷ್ಟು ಸಾಗಣೆಯನ್ನು ದೇಶದ ಹೊರಗಿನ ಬಂದರುಗಳಲ್ಲಿ ಮಾಡಲಾಗುತ್ತಿತ್ತು, ಇದರಿಂದಾಗಿ ಭಾರಿ ನಷ್ಟ ಉಂಟಾಗಿದೆ. ಈ ಪರಿಸ್ಥಿತಿ ಈಗ ಬದಲಾಗಲಿದೆ ಎಂದರು.
ಮತ್ತಷ್ಟು ಓದಿ: PM Modi cabinet panel meeting: ಪಹಲ್ಗಾಮ್ ಉಗ್ರ ದಾಳಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಂಪುಟ ಸಮಿತಿಗಳ ಸಭೆ
ಈಗ ದೇಶದ ಹಣ ದೇಶಕ್ಕೆ ಉಪಯುಕ್ತವಾಗುತ್ತದೆ. ವಿದೇಶಕ್ಕೆ ಹೋಗುತ್ತಿದ್ದ ಹಣ ಈಗ ಕೇರಳ ಮತ್ತು ವಿಳಿಂಜಂ ಜನರಿಗೆ ಹೊಸ ಅವಕಾಶಗಳನ್ನು ತರುತ್ತದೆ. ಗುಲಾಮಗಿರಿಗೂ ಮುನ್ನ, ನಮ್ಮ ಭಾರತ ಸಾವಿರಾರು ವರ್ಷಗಳ ಸಮೃದ್ಧಿಯನ್ನು ಕಂಡಿದೆ. ಒಂದು ಕಾಲದಲ್ಲಿ ಭಾರತವು ಜಾಗತಿಕ ಜಿಡಿಪಿಯಲ್ಲಿ ದೊಡ್ಡ ಪಾಲನ್ನು ಹೊಂದಿತ್ತು. ಆ ಸಮಯದಲ್ಲಿ ನಮ್ಮ ಸಮುದ್ರ ಸಾಮರ್ಥ್ಯಗಳು ನಮ್ಮನ್ನು ಇತರ ದೇಶಗಳಿಗಿಂತ ಭಿನ್ನವಾಗಿಸಿದವು.
#WATCH | Thiruvananthapuram, Kerala: At the inauguration event of Vizhinjam port, PM Modi says, ” I want to tell CM, you are a strong pillar of INDI alliance, Shashi Tharoor is also sitting here. Today’s event is going to disturb the sleep of many” pic.twitter.com/UQvFrslWBP
— ANI (@ANI) May 2, 2025
ಕೇರಳವು ಇದರಲ್ಲಿ ದೊಡ್ಡ ಕೊಡುಗೆಯನ್ನು ನೀಡಿತು ಎಂದು ಪ್ರಧಾನಿ ಹೇಳಿದರು. ಭಾರತ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸಾಗರಮಾಲಾ ಯೋಜನೆಯಡಿಯಲ್ಲಿ ಬಂದರು ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿದೆ. ಪಿಎಂ-ಗತಿಶಕ್ತಿ ಯೋಜನೆಯಡಿಯಲ್ಲಿ, ಜಲಮಾರ್ಗಗಳು, ರೈಲ್ವೆಗಳು, ಹೆದ್ದಾರಿಗಳು ಮತ್ತು ವಾಯುಮಾರ್ಗಗಳ ಅಂತರ-ಸಂಪರ್ಕವನ್ನು ತ್ವರಿತಗತಿಯಲ್ಲಿ ಸುಧಾರಿಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ