ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತಾರ್ ಅನ್ನು ನಕ್ಸಲ್ ಮುಕ್ತ ಎಂದು ಘೋಷಿಸಿದ ಅಮಿತ್ ಶಾ
ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತಾರ್‌ನಲ್ಲಿ 170 ಮಾವೋವಾದಿಗಳು ಶರಣಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತಾರ್ ಅನ್ನು ನಕ್ಸಲ್ ಮುಕ್ತ ಎಂದು ಘೋಷಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಜನವರಿ 2024ರಿಂದ 2100 ನಕ್ಸಲರು ಶರಣಾಗಿದ್ದಾರೆ, 1785 ಜನರನ್ನು ಬಂಧಿಸಲಾಗಿದೆ ಮತ್ತು 477 ಜನರನ್ನು ಎನ್ಕೌಂಟರ್ ಮಾಡಲಾಗಿದೆ.

ನವದೆಹಲಿ, ಅಕ್ಟೋಬರ್ 16: ಛತ್ತೀಸ್‌ಗಢದ ಅಬುಜ್‌ಮರ್ ಗುಡ್ಡಗಾಡು ಅರಣ್ಯ ಪ್ರದೇಶ ಮತ್ತು ಉತ್ತರ ಬಸ್ತಾರ್‌ನಲ್ಲಿ 170 ಮಾವೋವಾದಿಗಳು ಇಂದು ಶರಣಾದ ನಂತರ ಈ ಪ್ರದೇಶಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನಕ್ಸಲ್ ಮುಕ್ತ ಎಂದು ಘೋಷಿಸಿದ್ದಾರೆ. ಎಡಪಂಥೀಯ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಇದನ್ನು ಮಹತ್ವದ ದಿನ ಎಂದು ಕರೆದ ಅಮಿತ್ ಶಾ, “ಇಂದು ಛತ್ತೀಸ್‌ಗಢದಲ್ಲಿ 170 ನಕ್ಸಲರು ಶರಣಾಗಿದ್ದಾರೆ. ನಿನ್ನೆ ರಾಜ್ಯದಲ್ಲಿ 27 ಜನರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ಮಹಾರಾಷ್ಟ್ರದಲ್ಲಿ ನಿನ್ನೆ 61 ಜನರು ಮುಖ್ಯವಾಹಿನಿಗೆ ಮರಳಿದರು. ಒಟ್ಟಾರೆಯಾಗಿ, ಕಳೆದ 2 ದಿನಗಳಲ್ಲಿ 258 ಎಡಪಂಥೀಯ ಉಗ್ರಗಾಮಿಗಳು ಹಿಂಸಾಚಾರವನ್ನು ತ್ಯಜಿಸಿದ್ದಾರೆ” ಎಂದು ಹೇಳಿದ್ದಾರೆ.
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 10 ಮಹಿಳೆಯರು ಸೇರಿದಂತೆ 27 ಮಾವೋವಾದಿಗಳು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ. ಈ ಗುಂಪಿನಲ್ಲಿ ದಂಗೆಕೋರ ಜಾಲದ ಅತ್ಯಂತ ಅಪಾಯಕಾರಿ ಘಟಕಗಳಲ್ಲಿ ಒಂದಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ -1ರ ಇಬ್ಬರು ಹಾರ್ಡ್‌ಕೋರ್ ಕಾರ್ಯಕರ್ತರು ಸೇರಿದ್ದಾರೆ.
A landmark day in our battle against Naxalism.
Today, 170 Naxalites have surrendered in Chhattisgarh. Yesterday 27 had laid down their arms in the state. In Maharashtra, 61 returned to the mainstream, yesterday. In total, 258 battle-hardened left-wing extremists have abjured…
— Amit Shah (@AmitShah) October 16, 2025
ಇದನ್ನೂ ಓದಿ: ಸರ್ಕಾರದ ಮುಂದೆ ಶರಣಾಗಿ; ನಕ್ಸಲರಿಗೆ ಅಮಿತ್ ಶಾ ಖಡಕ್ ಎಚ್ಚರಿಕೆ
ಮುಖ್ಯವಾಹಿನಿಗೆ ಸೇರಿದ ಶರಣಾಗುತ್ತಿರುವ ಮಾವೋವಾದಿಗಳನ್ನು ಸ್ವಾಗತಿಸಿದ ಅಮಿತ್ ಶಾ, ಹಿಂಸಾಚಾರವನ್ನು ತ್ಯಜಿಸುವ ಮತ್ತು ಭಾರತದ ಸಂವಿಧಾನದಲ್ಲಿ ನಂಬಿಕೆ ಇಡುವ ಅವರ ನಿರ್ಧಾರವನ್ನು ಶ್ಲಾಘಿಸಿದರು. ಭಾರತದ ಸಂವಿಧಾನದ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸಿ, ಹಿಂಸಾಚಾರವನ್ನು ತ್ಯಜಿಸುವ ಅವರ ನಿರ್ಧಾರವನ್ನು ನಾನು ಶ್ಲಾಘಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಪಿಡುಗನ್ನು ಕೊನೆಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ.
It is a matter of immense pleasure that Abujhmarh and North Bastar in Chhattisgarh that were once terror bases, have today been declared as free from Naxal terror.
Now a trace of Naxalism exists in South Bastar, which will be wiped out soon by our security forces.
Since January…
— Amit Shah (@AmitShah) October 16, 2025
ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಹೈ ಪ್ರೊಫೈಲ್ ನಕ್ಸಲ್ ಸೇರಿದಂತೆ ಮೂವರು ಮಾವೋವಾದಿಗಳ ಎನ್ಕೌಂಟರ್
ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತರ್ ಅನ್ನು ಇಂದು ನಕ್ಸಲ್ ಭಯೋತ್ಪಾದನೆಯಿಂದ ಮುಕ್ತಗೊಳಿಸಲಾಗಿದೆ ಎಂದು ಅಮಿತ್ ಶಾ ಘೋಷಿಸಿದ್ದಾರೆ. “ಒಂದು ಕಾಲದಲ್ಲಿ ಭಯೋತ್ಪಾದಕ ನೆಲೆಗಳಾಗಿದ್ದ ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತರ್ ಅನ್ನು ಇಂದು ನಕ್ಸಲ್ ಭಯೋತ್ಪಾದನೆಯಿಂದ ಮುಕ್ತಗೊಳಿಸಲಾಗಿದೆ ಎಂಬುದು ಸಂತೋಷದ ವಿಷಯ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




