Amit Shah: ಅಮಿತ್ ಶಾ ಮುಂಬೈ ಭೇಟಿ ವೇಳೆ ಭದ್ರತಾ ಲೋಪ, ವೇಷಧಾರಿ ವ್ಯಕ್ತಿಯ ಬಂಧನ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 08, 2022 | 10:15 AM

ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಮುಂಬೈ ಭೇಟಿ ನೀಡಿದಾಗ ಅವರ ಭದ್ರತೆ ಲೋಪವಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

Amit Shah: ಅಮಿತ್ ಶಾ ಮುಂಬೈ ಭೇಟಿ ವೇಳೆ ಭದ್ರತಾ ಲೋಪ, ವೇಷಧಾರಿ ವ್ಯಕ್ತಿಯ ಬಂಧನ
ಸಾಂದರ್ಭಿಕ ಚಿತ್ರ
Image Credit source: NDTV
Follow us on

ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈಗೆ ಭೇಟಿ ನೀಡಿದಾಗ ಅವರ ಭದ್ರತೆ ಲೋಪವಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ ನಾಯಕನ ಸುತ್ತ ಸುಳಿದಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಮಿತ್ ಶಾ ತಮ್ಮ ಎರಡು ದಿನಗಳ ಭೇಟಿಯನ್ನು ಬುಧವಾರ ಕೊನೆಗೊಳಿಸಿದರು ಆದರೆ ಘಟನೆ ಇಂದು ವರದಿಯಾಗಿದೆ.

ಬಂಧಿತ ವ್ಯಕ್ತಿ ಹೇಮಂತ್ ಪವಾರ್ ಆಂಧ್ರಪ್ರದೇಶ ಸಂಸದರೊಬ್ಬರ ಸಹಾಯಕನಂತೆ ನಟಿಸುತ್ತಿದ್ದ ಎನ್ನಲಾಗಿದೆ. ಗೃಹ ಸಚಿವಾಲಯದ ಐಡಿ-ಕಾರ್ಡ್ ಹಾಕಿಕೊಂಡು ಗಂಟೆಗಟ್ಟಲೆ ಅಮಿತ್ ಶಾ ಅವರ ಸುತ್ತ ತಿರುಗಾಡಿದ್ದ ಎಂದು ಹೇಳಲಾಗಿದೆ.

ಅನುಮಾನಗೊಂಡ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಮತ್ತು ಇದೀಗ ವಿಚಾರಣೆಯನ್ನು ನಡೆಸುತ್ತಿದ್ದಾರೆ ಪವಾರ್ ಅವರನ್ನು ಬಂಧಿಸಲಾಯಿತು. ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Published On - 10:15 am, Thu, 8 September 22