ಅಸ್ಸಾಂ ಸರ್ಕಾರದ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ 44,700 ನೇಮಕಾತಿ ಪತ್ರ ವಿತರಿಸಲಿದ್ದಾರೆ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುವಾಹಟಿಯ ಶ್ರೀಮಂತ ಶಂಕರದೇವ ಕಲಾಕ್ಷೇತ್ರದಿಂದ ಚಾಂಗ್ಸಾರಿಯಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾನಿಲಯದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಅಸ್ಸಾಂ ಸರ್ಕಾರದ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ 44,700 ನೇಮಕಾತಿ ಪತ್ರ ವಿತರಿಸಲಿದ್ದಾರೆ ಅಮಿತ್ ಶಾ
ಅಸ್ಸಾಂಗೆ ಬಂದಿಳಿದ ಅಮಿತ್ ಶಾ
Follow us
ರಶ್ಮಿ ಕಲ್ಲಕಟ್ಟ
|

Updated on:May 25, 2023 | 2:40 PM

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಇಂದು(ಗುರುವಾರ)  ಗುವಾಹಟಿಗೆ (Guwahati) ಬಂದಿಳಿದಿದ್ದಾರೆ. ಅವರನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma), ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೋಯ್ ಅಂತರಾಷ್ಟ್ರೀಯ (LGBI) ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಅಮಿತ್ ಶಾ ಅವರನ್ನು ಸ್ವಾಗತಿಸಲು ಸಂಪುಟದ ಸಚಿವರಾದ ಅಜಂತಾ ನಿಯೋಗ್, ಜಯಂತ ಮಲ್ಲಬರುವಾ, ರಂಜೀತ್ ಕುಮಾರ್ ದಾಸ್, ಲೋಕಸಭೆ ಸಂಸದ ದಿಲೀಪ್ ಸೈಕಿಯಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಭಾಬೇಶ್ ಕಲಿತಾ ಕೂಡ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಗುವಾಹಟಿಯಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಅಸ್ಸಾಂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡ 44,700 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುವಾಹಟಿಯ ಶ್ರೀಮಂತ ಶಂಕರದೇವ ಕಲಾಕ್ಷೇತ್ರದಿಂದ ಚಾಂಗ್ಸಾರಿಯಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾನಿಲಯದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವವಿದ್ಯಾನಿಲಯದ ತಾತ್ಕಾಲಿಕ ಕ್ಯಾಂಪಸ್ ಅನ್ನು ಶಾ ಉದ್ಘಾಟಿಸಲಿದ್ದಾರೆ. ಅದೇ ಸ್ಥಳದಿಂದ ಕೇಂದ್ರ ಸಚಿವರು ಅಸ್ಸಾಂ ಪೊಲೀಸರಿಗಾಗಿ ಆ್ಯಪ್ ಅನ್ನು ಬಿಡುಗಡೆ ಮಾಡುತ್ತಾರೆ. ಈ ಆ್ಯಪ್ ಮೂಲಕ ಎಫ್‌ಐಆರ್ ದಾಖಲಿಸಬಹುದು.

ಇದನ್ನೂ ಓದಿ:  ಮೋದಿ ಸರ್ಕಾರದ 9ನೇ ವರ್ಷಾಚರಣೆ: ರಾಷ್ಟ್ರವ್ಯಾಪಿ ಸಂಪರ್ಕ ಅಭಿಯಾನ ಆಯೋಜಿಸಲಿದೆ ಬಿಜೆಪಿ

ಗುವಾಹಟಿಯ ಪಶುವೈದ್ಯಕೀಯ ಕಾಲೇಜು ಆಟದ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಸ್ಸಾಂ ಸರ್ಕಾರದ ವಿವಿಧ ಇಲಾಖೆಗಳ ಹೊಸದಾಗಿ ನೇಮಕಗೊಂಡ 44,703 ಅಭ್ಯರ್ಥಿಗಳಿಗೆ ಅಮಿತ್ ಶಾ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Thu, 25 May 23