Amul Milk Price Hike: ಅಮುಲ್ ಹಾಲಿನ ದರ ಏರಿಕೆ: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬರೆ

ಅಮುಲ್ ಹಾಲಿನ ದರ ಹೆಚ್ಚಳ: ಹಾಲು ಮತ್ತು ಡೈರಿ ಉತ್ಪನ್ನಗಳ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಅಮುಲ್ ಕಂಪನಿ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಪರಿಷ್ಕೃತ ಬೆಲೆ ದೇಶಾದ್ಯಂತ ಇಂದಿನಿಂದಲೇ ಜಾರಿಗೆ ಬಂದಿದೆ. 2024 ರ ಜೂನ್​ನಿಂದ ಹಾಲಿ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.

Amul Milk Price Hike: ಅಮುಲ್ ಹಾಲಿನ ದರ ಏರಿಕೆ: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬರೆ
ಅಮುಲ್ ಹಾಲಿನ ಪ್ಯಾಕೆಟ್ (ಸಾಂದರ್ಭಿಕ ಚಿತ್ರ)

Updated on: May 01, 2025 | 6:50 AM

ನವದೆಹಲಿ, ಮೇ 1: ಕರ್ನಾಟಕದ ಕೆಎಂಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡಿದ ಹಾಗೂ ಮದರ್ ಡೈರಿ ಹಾಲಿನ ದರವನ್ನು 2 ರೂಪಾಯಿ ಹೆಚ್ಚಳ ಮಾಡಿದ ಬೆನ್ನಲ್ಲೇ ಇದೀಗ ಜನಪ್ರಿಯ ಡೈರಿ ಬ್ರಾಂಡ್ ಅಮುಲ್ ಹಾಲಿನ ದರ (Amul Milk Price) ಕೂಡ ಎರಡು ರೂಪಾಯಿ ಹೆಚ್ಚಳವಾಗಿದೆ. ಪರಿಷ್ಕೃತ ದರ ಮೇ 1ರಿಂದಲೇ ಜಾರಿಗೆ ಬರುತ್ತಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ತಿಳಿಸಿದೆ. ಇದರೊಂದಿಗೆ, ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಬೆಲೆ ಏರಿಕೆ ಹೊಡೆತ ತಟ್ಟಿದಂತಾಗಲಿದೆ.

ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್​ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್​​ಗಳಿಗೆ ಅನ್ವವಾಗುತ್ತದೆ.

ಕಳೆದ ವರ್ಷವಷ್ಟೇ ಗ್ರಾಹಕರಿಗೆ ರಿಲೀಫ್ ನೀಡಲು ಅಮುಲ್ ಸುಮಾರು ಐದು ತಿಂಗಳ ಕಾಲ 1 ಲೀಟರ್ ಮತ್ತು 2 ಲೀಟರ್ ಹಾಲಿನ ಪ್ಯಾಕ್‌ಗಳಲ್ಲಿ ಕ್ರಮವಾಗಿ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. ಇದಲ್ಲದೆ, 2025 ರ ಜನವರಿಯಲ್ಲಿ, 1 ಲೀಟರ್ ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಅಮುಲ್ ಹಾಲು ದರ ಏರಿಕೆ: ಯಾವ ಪ್ಯಾಕೆಟ್​​ಗೆ ಎಷ್ಟು?

ಅಮುಲ್ ಸ್ಟ್ಯಾಂಡರ್ಡ್ ಹಾಲು (500 ಮಿ.ಲೀ)

  • ಹಳೆಯ ಬೆಲೆ: 30 ರೂ.
  • ಹೊಸ ಬೆಲೆ: 31 ರೂ.

ಅಮುಲ್ ಬಫೆಲೋ (ಎಮ್ಮೆ ಹಾಲು) 500 ಮಿ.ಲೀ

  • ಹಳೆಯ ಬೆಲೆ: 36 ರೂ.
  • ಹೊಸ ಬೆಲೆ: 37 ರೂ.

ಅಮುಲ್ ಗೋಲ್ಡ್ ಮಿಲ್ಕ್ (500 ಮಿ.ಲೀ)

  • ಹಳೆಯ ಬೆಲೆ: 33 ರೂ.
  • ಹೊಸ ಬೆಲೆ: 34 ರೂ.

ಅಮುಲ್ ಗೋಲ್ಡ್ ಹಾಲು (1 ಲೀಟರ್)

  • ಹಳೆಯ ಬೆಲೆ: 65 ರೂ.
  • ಹೊಸ ಬೆಲೆ: 67 ರೂ.

ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್ ಮಿಲ್ಕ್ (500 ಮಿ.ಲೀ)

  • ಹಳೆಯ ಬೆಲೆ: 24 ರೂ.
  • ಹೊಸ ಬೆಲೆ: 25 ರೂ.

ಅಮುಲ್ ಚಾಯ್ ಸ್ಪೆಷಲ್ ಹಾಲು (500 ಮಿ.ಲೀ)

  • ಹಳೆಯ ಬೆಲೆ: 31 ರೂ.
  • ಹೊಸ ಬೆಲೆ: 32 ರೂ.

ಅಮುಲ್ ತಾಜಾ ಹಾಲು (500 ಮಿ.ಲೀ)

  • ಹಳೆಯ ಬೆಲೆ: 27 ರೂ.
  • ಹೊಸ ಬೆಲೆ: 28 ರೂ.

ಅಮುಲ್ ತಾಜಾ ಹಾಲು (1 ಲೀಟರ್)

  • ಹಳೆಯ ಬೆಲೆ: 53 ರೂ.
  • ಹೊಸ ಬೆಲೆ: 55 ರೂ.

ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ: ಯಾವ ಪ್ಯಾಕೆಟ್​​ಗೆ ಎಷ್ಟು ದರ? ಇಲ್ಲಿದೆ ವಿವರ

ನಿನ್ನೆಯಷ್ಟೇ (ಏಪ್ರಿಲ್ 30) ಮದರ್ ಡೈರಿ ಹಾಲಿನ ಬೆಲೆಯನ್ನು ಲೀಟರ್​​ಗೆ 2 ರೂ. ಹೆಚ್ಚಿಸಿತ್ತು. ಪರಿಷ್ಕೃತ ದರ ಏಪ್ರಿಲ್ 30 ರಿಂದಲೇ ಜಾರಿಗೆ ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ