AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಚಿವ ಸಂಪುಟಕ್ಕೆ ಸಿದ್ಧವಾದ ಜಗನ್ ಮೋಹನ್ ರೆಡ್ಡಿ; ಆಂಧ್ರಪ್ರದೇಶದ ಎಲ್ಲ ಸಚಿವರು ರಾಜೀನಾಮೆ

ಕ್ಯಾಬಿನೆಟ್ ಸಭೆಯ ನಂತರ 24 ಸಚಿವರು ತಮ್ಮ ರಾಜೀನಾಮೆ ನೀಡಿದರು. ಉಳಿದಿರುವ ಏಕೈಕ ಸಂಪುಟ ಸದಸ್ಯ ಜಗನ್ ರೆಡ್ಡಿ ರಾಜೀನಾಮೆಯನ್ನು ಸ್ವೀಕರಿಸಿದರು. ಅಂದರೆ ಜಗನ್ ಹೊರತುಪಡಿಸಿ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ.

ಹೊಸ ಸಚಿವ ಸಂಪುಟಕ್ಕೆ ಸಿದ್ಧವಾದ ಜಗನ್ ಮೋಹನ್ ರೆಡ್ಡಿ; ಆಂಧ್ರಪ್ರದೇಶದ ಎಲ್ಲ ಸಚಿವರು ರಾಜೀನಾಮೆ
ವೈ.ಎಸ್. ಜಗನ್ ಮೋಹನ್ ರೆಡ್ಡಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 07, 2022 | 8:07 PM

ಹೈದರಾಬಾದ್: ಆಂಧ್ರಪ್ರದೇಶ (Andhra Pradesh)ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ(YS Jagan Mohan Reddy) ಅವರ ಇಡೀ ಸಚಿವ ಸಂಪುಟ ಗುರುವಾರ ರಾಜೀನಾಮೆ ನೀಡಿದೆ. 2024ರ ರಾಜ್ಯ ಚುನಾವಣೆಗೆ ಮುಂಚಿತವಾಗಿ  ಕ್ಯಾಬಿನೆಟ್ ಸಚಿವರು ರಾಜೀನಾಮೆ (Resignations) ನೀಡಿದೆ. ಕ್ಯಾಬಿನೆಟ್ ಸಭೆಯ ನಂತರ 24 ಸಚಿವರು ತಮ್ಮ ರಾಜೀನಾಮೆ ನೀಡಿದರು. ಉಳಿದಿರುವ ಏಕೈಕ ಸಂಪುಟ ಸದಸ್ಯ ಜಗನ್ ರೆಡ್ಡಿ ರಾಜೀನಾಮೆಯನ್ನು ಸ್ವೀಕರಿಸಿದರು. ಅಂದರೆ ಜಗನ್ ಹೊರತುಪಡಿಸಿ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ. ಜಗನ್ ರೆಡ್ಡಿ ಅವರು ತಮ್ಮ ಅವಧಿಯ ಅರ್ಧದಷ್ಟು ಸಂಪೂರ್ಣ ಹೊಸ ತಂಡಕ್ಕೆ ಹೋಗುವುದಾಗಿ ಹೇಳಿದ್ದರಿಂದ ಈ ಬದಲಾವಣೆಯನ್ನು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ನವೀಕರಣವನ್ನು ಡಿಸೆಂಬರ್‌ನಲ್ಲಿ ನಿಗದಿಪಡಿಸಲಾಗಿತ್ತು ಆದರೆ ಕೊವಿಡ್‌ನಿಂದಾಗಿ ಮುಂದೂಡಬೇಕಾಯಿತು. ಹೊರಹೋಗುವ ತಂಡದಿಂದ ಒಬ್ಬರು ಅಥವಾ ಇಬ್ಬರು ಸಚಿವರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರಾಜಕೀಯವಾಗಿ ಬಹುಮುಖ್ಯ ಸಮುದಾಯಗಳಿಗೆ ಸೇರಿದವರಿಗೆ ಪ್ರಾತಿನಿಧ್ಯ ನೀಡಬೇಕಾಗಿರುವುದರಿಂದ ಈ ಸಚಿವರನ್ನು ಮಾತ್ರ ಕೈ ಬಿಡುವುದಿಲ್ಲ ಎಂದು ಹೇಳಲಾಗಿದೆ. ನೂತನ ಸಚಿವ ಸಂಪುಟದಲ್ಲಿ ಹೊಸದಾಗಿ ರಚನೆಯಾಗಿರುವ ರಾಜ್ಯದ 26 ಜಿಲ್ಲೆಗಳ ಪ್ರಾತಿನಿಧ್ಯ ದೊರೆಯುವ ಸಾಧ್ಯತೆ ಇದೆ. 2019 ರ ಜೂನ್‌ನಲ್ಲಿ ಜಗನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಂತೆ ಜಾತಿ, ಪ್ರದೇಶ, ಧರ್ಮ ಮತ್ತು ಲಿಂಗವನ್ನು ಪರಿಗಣಿಸಲಾಗುತ್ತಿದೆ.

ರೆಡ್ಡಿ ಅವರು ಐದು ಉಪ ಮುಖ್ಯಮಂತ್ರಿಗಳನ್ನು ಹೊಂದಿದ್ದರು. ಅವರಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಕಾಪು ಜಾತಿಗಳು ಮತ್ತು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದಿಂದ ತಲಾ ಒಬ್ಬರಿದ್ದರು. ಸಂಪುಟದಲ್ಲಿ ಮೂವರು ಮಹಿಳೆಯರಿದ್ದರು. ದಲಿತ ಸಮುದಾಯದ ಮಹಿಳೆ ಎಂ ಸುಚರಿತಾ ಗೃಹ ಸಚಿವರಾಗಿದ್ದರು. ಹೊಸ ಸಂಪುಟದಲ್ಲಿ ಇದೇ ರೀತಿ ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಹೊರಹೋಗುವ ಸಚಿವರಿಗೆ ಪಕ್ಷದ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆಯಿದೆ. ಸಚಿವರಾಗಿ ಅವರ ದಾಖಲೆ ಮತ್ತು ಸಾರ್ವಜನಿಕರೊಂದಿಗಿನ ಅವರ ಬಾಂಧವ್ಯವು   ಸಮನ್ವಯಕ್ಕೆ ಉಪಯುಕ್ತ ಎಂದು ಮೂಲಗಳು ಹೇಳುತ್ತವೆ.

ಆಂಧ್ರಪ್ರದೇಶದ ಇತಿಹಾಸದಲ್ಲಿ ಇದು ಎರಡನೇ ಬಾರಿಗೆ ಇಡೀ ಸಚಿವ ಸಂಪುಟವು ಮಧ್ಯದಲ್ಲಿ ರಾಜೀನಾಮೆ ನೀಡುತ್ತಿದೆ. 2019ರಲ್ಲಿ, ಆಂಧ್ರಪ್ರದೇಶ ಚುನಾವಣೆಯಲ್ಲಿ ಬೃಹತ್ ವಿಜಯದ ನಂತರ, ರೆಡ್ಡಿ ಅವರು 2024 ರ ತನ್ನ ಕಾರ್ಯತಂತ್ರದ ಭಾಗವಾಗಿ ಮಧ್ಯಾವಧಿಯ ಹೊಸ ತಂಡವನ್ನು ಆಯ್ಕೆ ಮಾಡುವುದಾಗಿ ಹೇಳಿದ್ದರು. ಎಲ್ಲರಿಗೂ ಅವಕಾಶವನ್ನು ನೀಡುವುದು ಮತ್ತು ಯಾವುದೇ ವಿರೋಧಿ ಆಡಳಿತವನ್ನು ಸೋಲಿಸುವುದು ಇದರ ಉದ್ದೇಶವಾಗಿತ್ತು.

ಇದನ್ನೂ ಓದಿ: ಮನೆ ಮೇಲಿನ ದಾಳಿ ಬಿಜೆಪಿ ಗೂಂಡಾಗಿರಿ; ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆದಾಗ ಬಿಜೆಪಿ ಸರ್ಕಾರವಿತ್ತು, ಯಾಕೆ ಪುನರ್ವಸತಿ ಕಲ್ಪಿಸಿಲ್ಲ?: ಕೇಜ್ರಿವಾಲ್

Published On - 7:42 pm, Thu, 7 April 22

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್