ಸಾಕು ನಾಯಿ ಕಚ್ಚಿದರೆ ನಿರ್ಲಕ್ಷಿಸಬೇಡಿ, ನಾಯಿ ಕಡಿತದಿಂದ ತಂದೆ, ಮಗ ಸಾವು

ಸಾಕು ನಾಯಿ ಕಚ್ಚಿದರೆ ಎಂದೂ ನಿರ್ಲಕ್ಷಿಸಬೇಡಿ ಅದರಿಂದ ನಿಮ್ಮ ಪ್ರಾಣವೇ ಹೋಗುವ ಸಾಧ್ಯತೆ ಇರುತ್ತದೆ. ಆಂಧ್ರಪ್ರದೇಶದಲ್ಲಿ ಸಾಕು ನಾಯಿಯೊಂದು ಮನೆಯ ಮಾಲೀಕ ಹಾಗೂ ಮಗನಿಗೆ ಕಚ್ಚಿದ ಕಾರಣ ಕೆಲವು ದಿನಗಳಲ್ಲಿ ಇಬ್ಬರೂ ಕೂಡ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸಾಕು ನಾಯಿ ಕಚ್ಚಿದರೆ ನಿರ್ಲಕ್ಷಿಸಬೇಡಿ, ನಾಯಿ ಕಡಿತದಿಂದ ತಂದೆ, ಮಗ ಸಾವು
ನಾಯಿ ಕಡಿತImage Credit source: Truitt Law Offices
Follow us
|

Updated on:Jun 27, 2024 | 8:19 AM

ಸಾಕು ನಾಯಿಯನ್ನು ನೀವು ತುಂಬಾ ಪ್ರೀತಿಸುತ್ತೀರಿ ನಿಜ ಆದರೆ ನಾಯಿಗೆ ಸಿಟ್ಟು ತರಿಸುವುದು, ಅದರ ಬಾಯಿಗೆ ಬೆರಳು ಹಾಕುವುದು ಸೇರಿದಂತೆ ಇಂಥಾ ಕೆಲಸಗಳನ್ನು ಎಂದೂ ಮಾಡಬೇಡಿ, ಒಂದೊಮ್ಮೆ ನಾಯಿ ಕಚ್ಚಿದರೆ ಅದನ್ನು ನಿರ್ಲಕ್ಷಿಸಲೂ ಬೇಡಿ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಂದೆ ಹಾಗೂ ಮಗನ ಮೇಲೆ ನಾಯಿ ದಾಳಿ ನಡೆಸಿದ್ದು, ಕೆಲವೇ ದಿನಗಳಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ವಿಶಾಖಪಟ್ಟಣಂನ ಭೀಮ್ಲಿ ನಿವಾಸಿಗಳಾದ 59 ವರ್ಷದ ನರಸಿಂಗರಾವ್ ಮತ್ತು ಅವರ 27 ವರ್ಷದ ಮಗ ಭಾರ್ಗವ್​ಗೆ ಒಂದು ವಾರದ ಹಿಂದೆ ಸಾಕು ನಾಯಿ ಕಚ್ಚಿತ್ತು, ಆದರೆ ಅವರು ವೈದ್ಯಕೀಯ ಚಿಕಿತ್ಸೆ ಪಡೆದಿರಲಿಲ್ಲ.

ಘಟನೆ ನಡೆದು ಎರಡು ದಿನಗಳ ಬಳಿ ನಾಯಿ ಸಾವನ್ನಪ್ಪಿದ್ದು ಆಗ ಆ್ಯಂಟಿ ರೇಬಿಸ್​ ಚುಚ್ಚುಮದ್ದು ಪಡೆಯಲು ಆಸ್ಪತ್ರೆಗೆ ಹೋಗಿದ್ದರು, ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ರೇಬಿಸ್ ಅವರ ಮೆದುಳು ಹಾಗೂ ಯಕೃತ್ತಿಗೆ ವ್ಯಾಪಿಸಿತ್ತು, ಚಿಕಿತ್ಸೆ ಒಳಗಾಗಿದ್ದರೂ ಇಬ್ಬರೂ ಮಾರಣಾಂತಿಕ ಸೋಂಕಿಗೆ ಬಲಿಯಾದರು.

ಮತ್ತಷ್ಟು ಓದಿ: ವಿಡಿಯೋ: ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳಿಂದ ದಾಳಿ, ಚಪ್ಪಲಿಯನ್ನು ಬೀಸುತ್ತಾ ತಪ್ಪಿಸಿಕೊಂಡ ಮಹಿಳೆ

ಹೈದರಾಬಾದ್‌ನ ಮಣಿಕೊಂಡದ ಚಿತ್ರಪುರಿ ಹಿಲ್ಸ್‌ನಲ್ಲಿ ಬೆಳಗಿನ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ 15 ಬೀದಿ ನಾಯಿಗಳು ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ . ಮುಂಜಾನೆ ಈ ದಾಳಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆ ಚಪ್ಪಲಿ ಹಿಡಿದು ನಾಯಿಗಳ ಕಡೆಗೆ ಕೈ ಬೀಸಿದ ಕಾರಣ ಹೇಗೋ ಆಕೆ ದಾಳಿಯಿಂದ ತಪ್ಪಿಸಿಕೊಂಡಿದ್ದರು.  ತಮ್ಮ ಪತ್ನಿ ನಾಯಿಗಳ ದಾಳಿಯಿಂದ ಬದುಕುಳಿದಿರುವುದೇ ಸಮಾಧಾನ ಎಂದು ಆಕೆಯ ಪತಿ ಹೇಳಿದ್ದರು. ಬೀದಿ ನಾಯಿಗಳಿಗೆ ಆಹಾರ ಕೊಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಸಾಕು ನಾಯಿಯೇ ಮಾಲೀಕರಿಗೆ ಕಚ್ಚಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:17 am, Thu, 27 June 24

ತಾಜಾ ಸುದ್ದಿ
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ