ದೆಹಲಿ: ಉತ್ತರಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್ ಚಂದ್ರ ಪಾಂಡೆ ಅವರು ನೂತನ ಚುನಾವಣಾ ಆಯುಕ್ತರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರ ನಿವೃತ್ತಿಯ ನಂತರ ಈ ಹುದ್ದೆ ಏಪ್ರಿಲ್‌ನಲ್ಲಿ ಖಾಲಿಯಾಗಿತ್ತು.
1984 ರ ಬ್ಯಾಚ್ ಐಎಎಸ್ ಅಧಿಕಾರಿ ಪಾಂಡೆ ಚಂಡೀಗಡದ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಪಂಜಾಬ್ ವಿಶ್ವವಿದ್ಯಾಲಯದಿಂದ (ಚಂಡೀಗಡ) ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಹಾರದ ಮಗದ್ ವಿಶ್ವವಿದ್ಯಾಲಯದಿಂದ ಪ್ರಾಚೀನ ಇತಿಹಾಸದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಸೆಪ್ಟೆಂಬರ್ 2017 ರಿಂದ 2019 ರ ಆಗಸ್ಟ್ ವರೆಗೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು ಈ ಹಿಂದೆ ರಾಜ್ಯದ ಕೈಗಾರಿಕಾ ಅಭಿವೃದ್ಧಿ ಆಯುಕ್ತರಾಗಿದ್ದರು. ಮಾಜಿ ಅಧಿಕಾರಿ ಜಂಟಿ ಕಾರ್ಯದರ್ಶಿಯಾಗಿ ನಾಲ್ಕು ವರ್ಷಗಳ ಕಾಲ ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದಾರೆ.
ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಸುನಿಲ್ ಅರೋರಾ ಏಪ್ರಿಲ್ 12ರಂದು ನಿವೃತ್ತರಾಗಿದ್ದರು. ಬಳಿಕ ಅವರ ಹುದ್ದೆಗೆ ಆಯುಕ್ತರಾಗಿದ್ದ ಸುಶೀಲ್ ಚಂದ್ರ ಆಯ್ಕೆಯಾಗಿದ್ದರು. ಇಬ್ಬರು ಚುನಾವಣಾ ಆಯುಕ್ತರ ಪೈಕಿ ರಾಜೀವ್ ಕುಮಾರ್ ಒಂದು ಹುದ್ದೆಯನ್ನು ನಿರ್ವಹಿಸುತ್ತಿದ್ದು, ಇನ್ನೋರ್ವ ಆಯುಕ್ತರ ಹುದ್ದೆ ಖಾಲಿ ಉಳಿದಿತ್ತು. ಇದೀಗ ಉತ್ತರ ಪ್ರದೇಶ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಅನೂಪ್ ಚಂದ್ರ ಪಾಂಡೆ ಆ ಸ್ಥಾನಕ್ಕೆ ಆಗಮಿಸಿದ್ದಾರೆ.
Delhi: Anup Chandra Pandey meets Chief Election Commissioner Sushil Chandra after taking charge as Election Commissioner at Nirvachan Sadan pic.twitter.com/GwhvxUGcc2
— ANI (@ANI) June 9, 2021
1984ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಅನೂಪ್ ಚಂದ್ರ ಪಾಂಡೆ ಅವರನ್ನು ಚುನಾವಣಾ ಆಯೋಗದ ನೂತನ ಆಯುಕ್ತರನ್ನಾಗಿ ನೇಮಕ ಮಾಡುತ್ತಿರುವ ಕುರಿತು ನಿನ್ನೆ ಸೂಚನೆ ಹೊರಡಿಸಲಾಗಿದೆ. ಚುನಾವಣಾ ಆಯುಕ್ತರ ಹುದ್ದೆಯು ಆರು ವರ್ಷಗಳ ಕಾಲಾವಧಿಯದ್ದಾಗಿರಲಿದೆ ಅಥವಾ ಕಾಲಾವಧಿ ಪೂರ್ಣಗೊಳಿಸುವ ಮುನ್ನವೇ ಆಯುಕ್ತರ ವಯಸ್ಸು 65 ವರ್ಷ ದಾಟಿದರೆ ಮತ್ತೆ ಹೊಸಬರ ಆಯ್ಕೆ ಆಗಲಿದೆ.
“ಸಂವಿಧಾನದ 324 ನೇ ವಿಧಿಯ ಷರತ್ತು (2) ರ ಅನುಸಾರ, ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಚುನಾವಣಾ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ, ಐಎಎಸ್ (ನಿವೃತ್ತ) (ಯುಪಿ: 1984) ಅವರನ್ನು ನೇಮಕ ಮಾಡಲು ರಾಷ್ಟ್ರಪತಿಗಳು ಸಂತಸಪಟ್ಟಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೊವಿಂದ್ ಕಚೇರಿ ಮಂಗಳವಾರ ಸಂಜೆ ಬಿಡುಗಡೆ ಮಾಡಿದ ಗೆಜೆಟ್ ಅಧಿಸೂಚನೆಯಲ್ಲಿ ಈ ರೀತಿ ಹೇಳಿದೆ.
President of India (@rashtrapatibhvn) appoints, Anup Chandra Pandey as Election Commissioner to the @ECISVEEP @rsprasad @SpokespersonECI pic.twitter.com/jq1aXpnYN4
— Live Law (@LiveLawIndia) June 9, 2021
ಪಾಂಡೆ ಅವರ ನೇಮಕಾತಿಯೊಂದಿಗೆ, ಅವರು ಸುಶೀಲ್ ಚಂದ್ರ ಮತ್ತು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ ಮುಂದಿನ ವರ್ಷ ಗೋವಾ, ಮಣಿಪುರ, ಉತ್ತರಾಖಂಡ್, ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ನಡೆಯುವ ಚುನಾವಣೆಗೆ ಮುಂಚಿತವಾಗಿ ಭಾರತ ಚುನಾವಣಾ ಆಯೋಗದ (ಇಸಿಐ) ಉನ್ನತ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ಇದನ್ನೂ ಓದಿ: Election Commissioner: ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ ನೇಮಕ
Published On - 5:09 pm, Wed, 9 June 21