ಇಂಡೋ-ಮ್ಯಾನ್ಮಾರ್ ಗಡಿ ಬಳಿ ನಾಗಾ ಬಂಡುಕೋರರ ಶಿಬಿರ ನಾಶ ಮಾಡಿದ ಅರುಣಾಚಲ ಪೊಲೀಸ್
ಬಂಡುಕೋರರೊಂದಿಗೆ ತೊಡಗಿಸಿಕೊಂಡಿದ್ದ ಶಿಬಿರವನ್ನು ನಾಶಪಡಿಸಿ, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗುವಾಹಟಿ: ಚಾಂಗ್ಲಾಂಗ್ ಜಿಲ್ಲೆಯ ಭಾರತ-ಮ್ಯಾನ್ಮಾರ್ ಗಡಿಯ (India-Myanmar border) ಬಳಿ ನಾಗಾ ಬಂಡುಕೋರ (Naga rebel) ಸಂಘಟನೆಯ ಶಿಬಿರವನ್ನು ಸುಟ್ಟು ನಾಶ ಮಾಡಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿರುವುದಾಗಿ ಅರುಣಾಚಲ ಪ್ರದೇಶ ಪೊಲೀಸರು ಹೇಳಿದ್ದಾರೆ. ಸಶಸ್ತ್ರ ಗುಂಪು, ಪೂರ್ವ ನಾಗಾ ನ್ಯಾಷನಲ್ ಗವರ್ನಮೆಂಟ್ (ENNG) ವಿರುದ್ಧದ ಕಾರ್ಯಾಚರಣೆಯನ್ನು ಚಾಂಗ್ಲಾಂಗ್ ಜಿಲ್ಲಾ ಪೊಲೀಸ್ ಮತ್ತು ವಿಶೇಷ ತನಿಖಾ ತಂಡ (SIT) ಜಂಟಿ ತಂಡವು ನಡೆಸಿತು. ಬಂಡುಕೋರರೊಂದಿಗೆ ತೊಡಗಿಸಿಕೊಂಡಿದ್ದ ಶಿಬಿರವನ್ನು ನಾಶಪಡಿಸಿ, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ರಿಮಾ ಪುಟೊಕ್ ವೃತ್ತದ ಲುಂಗ್‌ಪಾಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಿಬಿರದಲ್ಲಿದ್ದ ಸುಮಾರು ಐವರು ಬಂಡುಕೋರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಪೊಲೀಸ್ ತಂಡವು ಶಿಬಿರವನ್ನು ಸುಟ್ಟುಹಾಕಿತು. ದಾಳಿಯಲ್ಲಿ AK-47 ಅಸಾಲ್ಟ್ ರೈಫಲ್, M-16 ರೈಫಲ್, ಹ್ಯಾಂಡ್ ಗ್ರೆನೇಡ್‌ಗಳು, ಮ್ಯಾಗಜೀನ್‌ಗಳು ಮತ್ತು 120 ಕ್ಕೂ ಹೆಚ್ಚು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅರುಣಾಚಲ ಪ್ರದೇಶದ ಪೊಲೀಸರು ಧೈರ್ಯಶಾಲಿ, ಪರಾಕ್ರಮಿಗಳು ಮತ್ತು ಮುಂಚೂಣಿಯಲ್ಲಿ ಹೋರಾಡುತ್ತಿದ್ದಾರೆ.ನಿಮ್ಮ ಬಗ್ಗೆ ಹೆಮ್ಮೆಯಿದೆ” ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸರ್ವಶಕ್ತನು ಪ್ರಧಾನಿಯಾಗಿ ನಮಗೆ ಮೋದಿಯನ್ನು ನೀಡಲಿ, ಅವರು ಮಹಾನ್ ವ್ಯಕ್ತಿ ಎಂದು ಹೇಳಿದ ಪಾಕಿಸ್ತಾನಿ; ವಿಡಿಯೊ ವೈರಲ್
ಜನವರಿ 2016 ರಲ್ಲಿ ರೂಪುಗೊಂಡ ENNG, ಅರುಣಾಚಲ ಪ್ರದೇಶದ ತಿರಾಪ್, ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಇದು ರಚನೆಯಾದಾಗ, ಇತರ ನಾಗಾ ಬಂಡಾಯ ಗುಂಪುಗಳು ಅನೇಕ ದಶಕಗಳ ನಂತರವೂ ನಾಗಾ ರಾಜಕೀಯ ಸಮಸ್ಯೆಗೆ ಅಂತಿಮ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ ಜನರನ್ನು ವಿಫಲಗೊಳಿಸಿವೆ ಎಂದು ಗುಂಪು ಆರೋಪಿಸಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ