ಕಂದಕಕ್ಕೆ ಉರುಳಿದ್ದ ಟ್ರಕ್, 19 ಜನರ ಸಾವಿನ ಸುದ್ದಿ ತಿಳಿಸಲು 2 ದಿನಗಳ ಕಾಲ ನಡೆದಿದ್ದ ಗಾಯಾಳು
ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಹೊತ್ತು ಹೊರಟಿದ್ದ ಟ್ರಕ್ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಎರಡು ದಿನ ಕಳೆದರೂ ಯಾರಿಗೂ ಅದರ ಬಗ್ಗೆ ಸುಳಿವೇ ಇರಲಿಲ್ಲ. 19 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಸೋಮವಾರ ರಾತ್ರಿ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಇತರ ನಿರ್ಮಾಣ ಕಾರ್ಮಿಕರೊಂದಿಗೆ ದೀಪ್ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನವು ಅಂಜಾವ್‌ನಲ್ಲಿ 300 ಮೀಟರ್ ದೂರದ ಕಂದಕಕ್ಕೆ ಉರುಳಿತ್ತು.

ಅರುಣಾಚಲ ಪ್ರದೇಶ, ಡಿಸೆಂಬರ್ 12: ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಹೊತ್ತು ಹೊರಟಿದ್ದ ಟ್ರಕ್ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಎರಡು ದಿನ ಕಳೆದರೂ ಯಾರಿಗೂ ಅದರ ಬಗ್ಗೆ ಸುಳಿವೇ ಇರಲಿಲ್ಲ. 19 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಸೋಮವಾರ ರಾತ್ರಿ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಇತರ ನಿರ್ಮಾಣ ಕಾರ್ಮಿಕರೊಂದಿಗೆ ದೀಪ್ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನವು ಅಂಜಾವ್‌ನಲ್ಲಿ 300 ಮೀಟರ್ ದೂರದ ಕಂದಕಕ್ಕೆ ಉರುಳಿತ್ತು.
ದೀಪಕ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. ಹೇಗೋ ಆ ಕಂದಕದಿಂದ ಕಷ್ಟಪಟ್ಟು ಹೊರಬಂದಿದ್ದಾರೆ. ಎರಡು ದಿನಗಳ ಕಾಲ ಅಪಾಯಕಾರಿ ಅರಣ್ಯದ ಮೂಲಕ ನಡೆದು ಹೇಗೋ ಬಿಆರ್‌ಒ ಶಿಬಿರವನ್ನು ತಲುಪಿದ್ದಾರೆ. ಸಡಿಲವಾದ ಮಣ್ಣು ಮತ್ತು ಬಂಡೆಗಳು ಬೀಳುವ ಬೆದರಿಕೆ ಪ್ರಯಾಣದ ಅಪಾಯಗಳನ್ನು ಹೆಚ್ಚಿಸಿತ್ತು. ಅವರ ಸಹೋದ್ಯೋಗಿಗಳಲ್ಲಿ 19 ಮಂದಿ ಕೊನೆಯುಸಿರೆಳೆದಿದ್ದರು.ಅವರನ್ನು ರಕ್ಷಿಸಲು ಯಾವುದೇ ಮಾರ್ಗವಿರಲಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಮ್ಯಾನ್ಮಾರ್ ಮತ್ತು ಚೀನಾ ಎರಡರ ಗಡಿಯಲ್ಲಿರುವ ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ಮತ್ತು ಚಾಗ್ಲಾಗಮ್ ನಡುವಿನ ಲಾಲಿಯಾಂಗ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಜಿಲ್ಲಾಡಳಿತ ಮತ್ತು ಬಿಆರ್‌ಒ ಗುರುವಾರ ಬೆಳಿಗ್ಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಟಿನ್ಸುಕಿಯಾ ಮತ್ತು ಅಂಜಾವ್ ಅಧಿಕಾರಿಗಳು ಟ್ರಕ್‌ನಲ್ಲಿದ್ದ 22 ಜನರಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಗುರುವಾರ ಸಂಜೆಯವರೆಗೆ ಹದಿನೇಳು ಶವಗಳನ್ನು ಗುರುತಿಸಲಾಗಿತ್ತು.
ಮತ್ತಷ್ಟು ಓದಿ: ಅರುಣಾಚಲ ಪ್ರದೇಶದಲ್ಲಿ ಟ್ರಕ್ ಕಂದಕಕ್ಕೆ ಉರುಳಿ 22 ಕಾರ್ಮಿಕರು ಸಾವು
ಮೃತರಲ್ಲಿ ಹೆಚ್ಚಿನವರು ಟಿನ್ಸುಕಿಯಾದ ಗೆಲಾಪುಖುರಿ ಪ್ರದೇಶದವರು. ನೀಲಿ ಬಣ್ಣದ ಟ್ರಕ್‌ನಲ್ಲಿ 22 ಜನರಿದ್ದರು.ನನ್ನ ಮೊಬೈಲ್ ಫೋನ್‌ನಲ್ಲಿ ಹಾಡುಗಳನ್ನು ಕೇಳುತ್ತಾ ನಾನು ನಿದ್ರೆಗೆ ಜಾರಿದೆ. ನಾನು ಹೇಗೆ ಬಿದ್ದೆ, ಹೇಗೆ ಎದ್ದೆ ಮತ್ತು ನನ್ನ ಮೊಬೈಲ್ ಫೋನ್ ಎಲ್ಲಿದೆ ಎಂದು ತಿಳಿದಿರಲಿಲ್ಲ.
ಇನ್ನೂ ಕೆಲವರು ಜೀವಂತವಿದ್ದಾರೆಯೇ ಎಂದು ಕೇಳಿದಾಗ, ಟ್ರಕ್‌ನಲ್ಲಿದ್ದವರಲ್ಲಿ ಮತ್ತೊಬ್ಬರು ಜೀವಂತವಾಗಿದ್ದರು ಎಂದು ದೀಪ್ ಹೇಳಿದರು. ಇನ್ನೊಬ್ಬ ಜೀವಂತವಾಗಿದ್ದ. ನನ್ನನ್ನು ಉಳಿಸಿಕೊಳ್ಳುವುದು ಕಷ್ಟವಾಗಿದ್ದಾಗ ನಾನು ಅವನನ್ನು ಹೇಗೆ ಉಳಿಸಲು ಸಾಧ್ಯ ಎಂದು ಅವರು ಹೇಳಿದರು.
ಪಂಕಜ್ ಮಂಕಿ, 20, ಅಜಯ್ ಮಂಕಿ, 30, ಗುಧೇಶ್ವರ್ ದೀಪ್, 23, ರಾಹುಲ್ ಕುಮಾರ್, 25, ಅಬ್ಜಯ್ ಕುಮಾರ್, 26, ಸೋಮಿರ್ ದೀಪ್, 22, ಅರ್ಜುನ್ ಕುಮಾರ್, 28, ಅಭೋಯ್ ಧುರಿಯಾ, 24, ರೋಹಿತ್ ಮಂಕಿ, 20, ಧೀರೇನ್ ಗೊಗಾಲಾ, 1, ಧೀರೇನ್ ಗೊಜಾ, 12 28, ರಾಮ್‌ಸೆಲೋಕ್ ಬುನಾ, 26, ಸಮರೋನ್ ನಾಗ್, 26, ಬಿನಯ್ ಕುಮಾರ್, 26, ಕರಣ್ ಕುಮಾರ್, 26, ಜುನಾಶ್ ಮುಂಡಾ, 20, ಧೀರೇಂದ್ರ ಕುಮಾರ್, 22 ಮತ್ತು ಅಡೋರ್ ತಂತಿ, 24. ಮೃತರು.
ಶುಕ್ರವಾರ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ, ನಂತರ ಶವಗಳನ್ನು ಅಸ್ಸಾಂಗೆ ಕಳುಹಿಸುವ ಮೊದಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




