ದೆಹಲಿ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದ ಬಾಕ್ಸರ್ ದಿವ್ಯಾ ಕಾಕರಾನ್; ಆಪ್ ಸರ್ಕಾರದ ಪ್ರತಿಕ್ರಿಯೆ ಹೀಗಿತ್ತು
ಕುಸ್ತಿಪಟು ಯಾವತ್ತಾದರೂ ಕ್ರೀಡಾ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಅದನ್ನು ಪರಿಶೀಲಿಸುವುದಾಗಿ ಸರ್ಕಾರ ಹೇಳಿದೆ. ಶುಕ್ರವಾರ ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಾಕರಾನ್ ಕಂಚು ಗೆದ್ದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್..
ದೆಹಲಿ: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಕಂಚಿನ ಪದಕ ವಿಜೇತೆ ಬಾಕ್ಸರ್ ದಿವ್ಯಾ ಕಾಕರಾನ್ (Divya Kakran) ದೆಹಲಿ ನಿವಾಸಿ. ಈಕೆ ಹಲವಾರು ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದರೂ ದೆಹಲಿ ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆದಿಲ್ಲ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಯಿಸಿದ ಆಮ್ ಆದ್ಮಿ ಪಕ್ಷದ ಸರ್ಕಾರ ಎಲ್ಲಾ ಕ್ರೀಡಾ ಪಟುಗಳನ್ನು ಗೌರವಿಸುತ್ತದೆ. ಆದರೆ ಕಾಕರಾನ್ ಪ್ರಸ್ತುತ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ದೆಹಲಿ ಸರ್ಕಾರ ಹೇಳಿದೆ. ಕುಸ್ತಿಪಟು ಯಾವತ್ತಾದರೂ ಕ್ರೀಡಾ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಅದನ್ನು ಪರಿಶೀಲಿಸುವುದಾಗಿ ಸರ್ಕಾರ ಹೇಳಿದೆ. ಶುಕ್ರವಾರ ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಾಕರಾನ್ ಕಂಚು ಗೆದ್ದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅಭಿನಂದಿಸಿದ್ದಾರೆ. ಆದಾಗ್ಯೂ, ಭಾನುವಾರದ ಸರಣಿ ಟ್ವೀಟ್ ಮಾಡಿದ ಬಾಕ್ಸರ್ ಕಾಕರಾನ್ ಸರ್ಕಾರವು ತನಗೆ ಎಂದಿಗೂ ಸಹಾಯ ಮಾಡಲಿಲ್ಲ ಎಂದು ಹೇಳಿದರು.
ನನ್ನ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಕ್ಕಾಗಿ ನಾನು ದೆಹಲಿ ಮುಖ್ಯಮಂತ್ರಿಗೆ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ. ನನ್ನದೊಂದು ವಿನಂತಿ ಇದೆ. ನಾನು ಕಳೆದ 20 ವರ್ಷಗಳಿಂದ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಅಭ್ಯಾಸ ಮಾಡುತ್ತಿದ್ದೇನೆ, ಆದರೆ ನಾನು ಯಾವುದೇ ಬಹುಮಾನದ ಹಣವನ್ನು ಸ್ವೀಕರಿಸಲಿಲ್ಲ ಅಥವಾ ರಾಜ್ಯದಿಂದ ಯಾವುದೇ ಸಹಾಯವನ್ನು ಪಡೆದಿಲ್ಲ.ಇತರ ದೆಹಲಿ ಕುಸ್ತಿಪಟುಗಳು ಇತರ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದರೂ ಸಹ ನೀವು ಗೌರವಿಸುವ ರೀತಿಯಲ್ಲಿಯೇ ನನ್ನನ್ನು ಗೌರವಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಕಾಕರಾನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.
ದೆಹಲಿ ಸರ್ಕಾರವು ದೇಶದ ಎಲ್ಲಾ ಕ್ರೀಡಾಪಟುಗಳನ್ನು ಗೌರವಿಸುತ್ತದೆ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತದೆ. ಪ್ರಸ್ತುತ, ದಿವ್ಯಾ ಕಾಕರಾನ್ ಉತ್ತರ ಪ್ರದೇಶಕ್ಕಾಗಿ ಆಡುತ್ತಿದ್ದಾರೆ. ಅವರು ದೆಹಲಿಯಿಂದ ಆಡಿದ್ದರೆ ಅಥವಾ ಅವರು ಯಾವುದೇ ಕ್ರೀಡಾ ಯೋಜನೆಯ ಭಾಗವಾಗಿದ್ದರೆ ಅಥವಾ ಅವರು ಅಂತಹ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಸರ್ಕಾರ ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತದೆ ಎಂದು ದೆಹಲಿ ಸರ್ಕಾರ ಪ್ರತಿಕ್ರಿಯಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ