ಕೇಜ್ರಿವಾಲ್ ಬಂಧನ ನಡೆದರೂ ಅವರು ದೆಹಲಿ ಸಿಎಂ ಆಗಿಯೇ ಮುಂದುವರಿಯುತ್ತಾರೆ: ಸ್ಪೀಕರ್ ರಾಮ್ ನಿವಾಸ್ ಗೋಯಲ್

ಸಿಎಂ ನಿವಾಸದ ಹೊರಗೆ ಆಗಮಿಸಿದ ಎಎಪಿ ನಾಯಕಿ ಮತ್ತು ದೆಹಲಿ ಸಚಿವೆ ಅತಿಶಿ, “ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಪ್ರಯತ್ನಿಸಿದರೆ ದೆಹಲಿಯಾದ್ಯಂತ ಜನರು ಬೀದಿಗಿಳಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ದೆಹಲಿಯ ಜನರು ಕೇಜ್ರಿವಾಲ್ ಅವರನ್ನು ಪ್ರೀತಿಸುತ್ತಾರೆ. ಅವರನ್ನು ತಮ್ಮ ಕುಟುಂಬ ಸದಸ್ಯರಂತೆ ಪರಿಗಣಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಗೆ ಅರವಿಂದ್ ಕೇಜ್ರಿವಾಲ್ ಭಯ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಬಂಧನ ನಡೆದರೂ ಅವರು ದೆಹಲಿ ಸಿಎಂ ಆಗಿಯೇ ಮುಂದುವರಿಯುತ್ತಾರೆ: ಸ್ಪೀಕರ್ ರಾಮ್ ನಿವಾಸ್ ಗೋಯಲ್
ಅರವಿಂದ್ ಕೇಜ್ರಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 21, 2024 | 9:00 PM

ದೆಹಲಿ ಮಾರ್ಚ್ 21: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ನಿವಾಸಕ್ಕೆ ಇಡಿ (ED) ತಂಡ ಆಗಮಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನೀಡಿದ ಸಮನ್ಸ್ ಗಳಿಗೆ ಕೇಜ್ರಿವಾಲ್ ಗೈರಾಗುತ್ತಿದ್ದು, ಇದೀಗ ಸರ್ಚ್ ವಾರೆಂಟ್ ಹೊರಡಿಸಿ ಜಾರಿ ನಿರ್ದೇಶನಾಲಯ ಎಎಪಿ ಮುಖ್ಯಸ್ಥರ ಮನೆಗೆ ಬಂದಿದೆ. ಏತನ್ಮಧ್ಯೆ, ಕೇಜ್ರಿವಾಲ್  ನಿವಾಸದಲ್ಲಿ ನಿಯೋಜಿಸಲಾಗುತ್ತಿರುವ ಪಡೆಗಳನ್ನು ನೋಡಿದರೆ ಮುಖ್ಯಮಂತ್ರಿಯನ್ನು ಬಂಧಿಸಲು ಇಡಿ ಬಂದಿದೆ ಎಂಬುದನ್ನು ತೋರಿಸುತ್ತದೆ. ಪ್ರಕರಣದ ವಿಚಾರಣೆಗೆ ಕೋರ್ಟ್ ಒಪ್ಪಿಗೆ ನೀಡಿದ್ದರೆ, ಇಡಿ ಏಕೆ ಚಡಪಡಿಸುತ್ತಿದೆ. ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಸಂಸ್ಥೆಯು ಒಂದು ಸಣ್ಣ ಪುರಾವೆಯನ್ನು ಪ್ರಸ್ತುತಪಡಿಸಿಲ್ಲ. ಇದು ಸಣ್ಣ ಹಿನ್ನಡೆಯಾಗಬಹುದು. ಆದರೆ ಈ ಘಟನೆಯಿಂದ ಪಕ್ಷವು ಬಲವಾಗಿ ಹೊರಹೊಮ್ಮುತ್ತದೆ. ಬಂಧನದ ನಂತರ ಸಿಎಂ ಕೇಜ್ರಿವಾಲ್ ರಾಜೀನಾಮೆ ನೀಡುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಮತ್ತು ಎಲ್ಲಾ ಶಾಸಕರು ನಿರ್ಧರಿಸಿದ್ದಾರೆ. ಸರ್ಕಾರವನ್ನು ಜೈಲಿನಿಂದ ನಡೆಸಲಾಗುವುದು ಎಂದು ದೆಹಲಿ ವಿಧಾನಭೆಯ ಸ್ಪೀಕರ್ ರಾಮ್ ನಿವಾಸ್ ಗೋಯಲ್ ( Ram Niwas Goyal) ಹೇಳಿದ್ದಾರೆ.

ಈಗ ಸಿಎಂ ಮನೆಯಲ್ಲಿ ಯಾರಿಗೂ ಫೋನ್‌ ಸಂಪರ್ಕವಿಲ್ಲ ಎಂದು ಆಪ್‌ ಶಾಸಕ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ. ಗುರುವಾರ ಸಂಜೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಫೆಡರಲ್ ಏಜೆನ್ಸಿಯ ತಂಡ ಆಗಮಿಸಿದ ನಂತರ ಎಎಪಿ ನಾಯಕರು ಬಿಜೆಪಿ ಮತ್ತು ಇಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವರು, ಶಾಸಕರು ಸೇರಿದಂತೆ ಹಲವು ಎಎಪಿ ನಾಯಕರು ಸಿಎಂ ನಿವಾಸದ ಹೊರಗೆ ಇಡಿ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಆಪ್ ಪ್ರತಿಭಟನೆ

ನರೇಂದ್ರ ಮೋದಿಗೆ ಅರವಿಂದ್ ಕೇಜ್ರಿವಾಲ್ ಭಯ

ಸಿಎಂ ನಿವಾಸದ ಹೊರಗೆ ಆಗಮಿಸಿದ ಎಎಪಿ ನಾಯಕಿ ಮತ್ತು ದೆಹಲಿ ಸಚಿವೆ ಅತಿಶಿ, “ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಪ್ರಯತ್ನಿಸಿದರೆ ದೆಹಲಿಯಾದ್ಯಂತ ಜನರು ಬೀದಿಗಿಳಿಯುತ್ತಾರೆ ಎಂದು ನಾನು ಭಾವಿಸುತ್ತೇನೆ. ದೆಹಲಿಯ ಜನರು ಕೇಜ್ರಿವಾಲ್ ಅವರನ್ನು ಪ್ರೀತಿಸುತ್ತಾರೆ. ಅವರನ್ನು ತಮ್ಮ ಕುಟುಂಬ ಸದಸ್ಯರಂತೆ ಪರಿಗಣಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಗೆ ಅರವಿಂದ್ ಕೇಜ್ರಿವಾಲ್ ಭಯ. ಇಡಿ ಮತ್ತು ಬಿಜೆಪಿ ನ್ಯಾಯಾಲಯಗಳನ್ನು ಗೌರವಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ನ್ಯಾಯಾಲಯವು ನೋಟಿಸ್ ಕಳುಹಿಸಿದಾಗ, ಅವರು ಮುಂದಿನ ದಿನಾಂಕಕ್ಕಾಗಿ ಏಕೆ ಕಾಯಬಾರದು. ಇದು ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಡಿ ಸರ್ಚ್ ವಾರಂಟ್ ನಡುವೆ ಸುಪ್ರೀಂಕೋರ್ಟ್‌ನಲ್ಲಿ ತುರ್ತು ವಿಚಾರಣೆ ಕೋರಿದ ಅರವಿಂದ್ ಕೇಜ್ರಿವಾಲ್

ಬಿಜೆಪಿಯ ದುಷ್ಕೃತ್ಯಗಳು ದೇಶದ ಮುಂದೆ ಈಗ ಬಯಲಾಗಿದೆ: ಸೌರಭ್ ಭಾರದ್ವಾಜ್

ಇಡಿ ತಂಡವು ದೆಹಲಿ ಸಿಎಂ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸವನ್ನು ತಲುಪುತ್ತಿದ್ದಂತೆ, ದೆಹಲಿ ಸಚಿವ ಮತ್ತು ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರು, “ಕೆಲವೇ ಗಂಟೆಗಳ ಹಿಂದೆ ಈ ವಿಷಯವು ದೆಹಲಿ ಹೈಕೋರ್ಟ್‌ನಲ್ಲಿತ್ತು ಎಂದು ಎಲ್ಲರಿಗೂ ತಿಳಿದಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಏಕೆ ನಿರ್ಣಾಯಕ ಎಂಬುದಕ್ಕೆ ಉತ್ತರ ನೀಡಲು ಇಡಿಗೆ ಹೈಕೋರ್ಟ್ ಏಪ್ರಿಲ್ 22 ರವರೆಗೆ ಕಾಲಾವಕಾಶ ನೀಡಿದೆ. ಒಂದು ರೀತಿಯಲ್ಲಿ, ಜಾರಿ ನಿರ್ದೇಶನಾಲಯ (ED) ಈಗ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿದೆ. ಅವರ ಹೊರಗೆ ಭಾರೀ ಪೊಲೀಸರ ನಿಯೋಜನೆ ಇದೆ .ಈಗ, ಅವರ (ಅರವಿಂದ್ ಕೇಜ್ರಿವಾಲ್), ಅಥವಾ ಅವರ ಕಾರ್ಯದರ್ಶಿಯೊಂದಿಗೆ ಸಂವಹನ ಸಾಧ್ಯವಿಲ್ಲ, ಏಜೆನ್ಸಿ ಅವರ ಫೋನ್‌ಗಳನ್ನು ತೆಗೆದುಕೊಂಡಿದೆ ಎಂದು ತೋರುತ್ತದೆ .ಇಡಿ ಅರವಿಂದ್ ಕೇಜ್ರಿವಾಲ್ ನ್ನು ಬಂಧಿಸಬಹುದು.ಬಿಜೆಪಿಯ ದೌರ್ಜನ್ಯಗಳು ಈಗ ಈ ದೇಶದ ಮುಂದೆ ಬಯಲಾಗಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ