ಹೈದರಾಬಾದ್: ಕೊರೊನಾ ವೈರಸ್ ವಿರುದ್ಧ ಆಯುರ್ವೇದ ಔಷಧ ನೀಡುವುದನ್ನು ಮುಂದುವರಿಸುವಂತೆ ನಾಟಿ ವೈದ್ಯ ಆನಂದಯ್ಯ ಅವರಿಗೆ ಆಂಧ್ರಪ್ರದೇಶ ಸರ್ಕಾರದ ಒಪ್ಪಿಗೆ ಸೂಚಿಸಿದೆ. ಪೆಡಂಭೂತವಾಗಿ ಕಾಡುತ್ತಿರುವ ಕೊರೊನಾಗೆ ನಾಟಿ ಔಷಧ ನೀಡುವ ಮೂಲಕ ನೆಲ್ಲೂರಿನ ಕೃಷ್ಣಪಟ್ಟಣಂ ಆನಂದಯ್ಯ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದರು. ಇದೀಗ ಭಾರೀ ಚರ್ಚೆಗಳು, ಪರೀಕ್ಷೆಗಳ ಬಳಿಕ ಕೆಲ ಷರತ್ತುಗಳೊಂದಿಗೆ ಆನಂದಯ್ಯ ಕೊರೊನಾ ಔಷಧಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದಾಗಿ ಆಂಧ್ರಪ್ರದೇಶದ ಸಿಎಂ ಕಚೇರಿ ತಿಳಿಸಿದೆ. AYUSH ಸಚಿವಾಲಯದ (Ayurveda, Yoga & Naturopathy, Unani, Siddha and Homeopathy) ಕೇಂದ್ರೀಯ ಆಯುರ್ವೇದ ಪರಿಶೋಧನೆ ಸಂಸ್ಥೆ ಸಮಿತಿ (Central Council for Research in Ayurvedic Sciences -CCRAS) ಅನುಮೋದನೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಂಧ್ರ ಸರ್ಕಾರ ಸ್ಪಷ್ಟಪಡಿಸಿದೆ.
ಆದರೆ ಕಣ್ಣಿಗೆ ಡ್ರಾಪ್ ಮಾತ್ರ ಹಾಕುವಂತಿಲ್ಲ ಎಂದು ಷರತ್ತು ವಿಧಿಸಿ ಆಂಧ್ರ ಸರ್ಕಾರ ನಾಟಿ ವೈದ್ಯ ಆನಂದಯ್ಯಗೆ ಕೊರೊನಾ ವಿರುದ್ಧ ಆಯುರ್ವೇದ ಔಷಧ ನೀಡುವುದನ್ನು ಮುಂದುವರಿಸುವಂತೆ ಸೂಚಿಸಿದೆ. ಕಣ್ಣಿಗೆ ಡ್ರಾಪ್ ಹಾಕುವ ವೈದ್ಯ ಪದ್ಧತಿಯ ಬಗ್ಗೆ ಸಂಶೋಧನಾ ವರದಿ ಬರಬೇಕಾಗಿದ್ದು, ಅದಕ್ಕೆ ಇನ್ನೂ 2-3 ವಾರ ಸಮಯ ಹಿಡಿಸುತ್ತದೆ ಎಂದು ಹೇಳಿದೆ.
ಕೊರೊನಾ ವಿರುದ್ಧ ನಾಟಿ ವೈದ್ಯ ಆನಂದಯ್ಯ ನೀಡುವ ಆಯುರ್ವೇದ ಔಷಧ (Anandaiah coronavirus medicine) ಬಳಸಿದರೆ ತೊಂದರೆ ಏನೂ ಇಲ್ಲ ಎಂದು CCRAS ಸಮಿತಿ ಸಲ್ಲಿಸಿದ ತಾಜಾ ಅಧ್ಯಯನ ವರದಿಯ ಮೇರೆಗೆ ಇದೀಗ ವೈದ್ಯ ಆನಂದಯ್ಯ ನೀಡುವ ವಿವಾದಿತ ಪಿಎಲ್ಎಫ್ ಔಷಧಿಗೆ ಅನುಮೋದನೆ ದೊರೆತಂತಾಗಿದೆ. ಆದರೆ ಆನಂದಯ್ಯ ನೀಡುವ ಆಯುರ್ವೇದ ಔಷಧದಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ, ಕಡಿಮೆಯಾಗುತ್ತದೆ ಎಂಬುದಕ್ಕೆ ಇನ್ನೂ ಪುಷ್ಠಿ ದೊರೆತಿಲ್ಲ ಎಂದೂ CCRAS ಸಮಿತಿ ಸ್ಪಷ್ಟಪಡಿಸಿದೆ. ಇದರೊಂದಿಗೆ ಜನ ತಮ್ಮ ಸ್ವ ಇಚ್ಛೆಯಿಂದ ಆನಂದಯ್ಯ ನಾಟಿ ಔಷಧ ಬಳಸಬಹುದು ಎಂದು ಆಂಧ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೊರೊನಾ ಸೋಂಕಿತರು ಸ್ವತಃ ಆನಂದಯ್ಯ ಅವರನ್ನು ಭೇಟಿಯಾಗಿ ಔಷಧ ಪಡೆಯಬೇಕು ಅಂತೇನೂ ಇಲ್ಲ. ಅದವರ ಬದಲಿಗೆ ಸೋಂಕಿತರ ಬಂಧು ಮಿತ್ರರು ಬಂದು ಔಷಧ ತೆಗೆದುಕೊಂಡು ಹೋಗಬಹುದು. ಇದರಿಂದ ಕೊರೊನಾ ಸೋಂಕು ವಿಸ್ತರಣೆಗೆ ತಡೆಹಾಕಬಹುದು ಎಂದೂ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಔಷಧ ನೀಡಲು ಆನಂದಯ್ಯಗೆ ಆಂಧ್ರ ಹೈಕೋರ್ಟ್ ಸಹ ಅನುಮತಿ:
ಈ ಮಧ್ಯೆ, ಕೊರೊನಾ ಔಷಧ ನೀಡಲು ಆನಂದಯ್ಯಗೆ ಆಂಧ್ರ ಹೈಕೋರ್ಟ್ ಸಹ ಅನುಮತಿ ನೀಡಿದೆ. ಆದರೆ ಕೊರೊನಾ ಐ ಡ್ರಾಪ್ಸ್ ಸಂಬಂಧ ವರದಿ ಕೇಳಿರುವ ಹೈಕೋರ್ಟ್, ಗುರುವಾರ ವರದಿ ನೀಡುವಂತೆ ಸೂಚಿಸಿದೆ.
(as per CCRAS recommendation ap government gives permission to krishnapatnam anandaiah to give coronavirus drug)
Also Read:
ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ; 10 ಸಾವಿರದಷ್ಟು ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
APಯ ನೆಲ್ಲೂರಿನ ಕೃಷ್ಣಪಟ್ಟಣಂ ಹಳ್ಳಿಯಲ್ಲಿ ಕೊರೊನಾಗೆ ಮದ್ದು! Corona | TV9Kannada
Published On - 3:25 pm, Mon, 31 May 21