ನವದೆಹಲಿ: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಮನೆ ಧ್ವಂಸ ಘಟನೆಯ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಇಂದು (ಶುಕ್ರವಾರ) ದೆಹಲಿ ಪೊಲೀಸ್ ಆಯುಕ್ತರನ್ನು ಕರೆಸಿದ್ದಾರೆ. ಪೋಲೀಸ್ ಅಧಿಕಾರಿಯ ಪ್ರಕಾರ, ನಾಲ್ಕೈದು ಪುರುಷರು ಸೆಂಟ್ರಲ್ ದೆಹಲಿಯಲ್ಲಿರುವ ಓವೈಸಿ ಅವರ ಮನೆಗೆ ನುಗ್ಗಿ, ಗುರುವಾರ ರಾತ್ರಿ 9 ಗಂಟೆಗೆ ಮನೆಯ ಪ್ರವೇಶ ದ್ವಾರ ಮತ್ತು ಗೋಡೆಗೆ 3 ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಓವೈಸಿ ಮನೆಯ gಓಡೆ, ಬಾಗಿಲಿನ ಮೇಲೆ ಪೋಸ್ಟರ್‌ಗಳಲ್ಲಿ ಕಿಡಿಗೇಡಿಗಳು ‘ಭಾರತ್ ಮಾತಾ ಕೀ ಜೈ’, ‘ಐ ಸ್ಟ್ಯಾಂಡ್ ವಿತ್ ಇಸ್ರೇಲ್’, ‘ಓವೈಸಿ ಅವರನ್ನು ಅಮಾನತು ಮಾಡಬೇಕು’ ಎಂಬ ಸಾಲುಗಳನ್ನು ಬರೆದಿದ್ದಾರೆ.
ವರದಿಗಳ ಪ್ರಕಾರ, ಓಂ ಬಿರ್ಲಾ ಅವರು ಸಂಸತ್ತಿನಲ್ಲಿ ಓವೈಸಿ ಅವರನ್ನು ಭೇಟಿಯಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಈ ಘಟನೆಯು ಹೈ-ಸೆಕ್ಯುರಿಟಿ ಝೋನ್ ಮತ್ತು ಪೋಲೀಸ್ ಹೆಡ್ ಕ್ವಾರ್ಟರ್ಸ್‌ಗೆ ಎದುರಾಗಿ ನಡೆದಿರುವುದರಿಂದ ಅವರು ದೆಹಲಿ ಪೊಲೀಸ್ ಆಯುಕ್ತರಿಗೆ ಸಮನ್ಸ್ ನೀಡಿದ್ದಾರೆ.
ಇದನ್ನೂ ಓದಿ: Asaduddin Owaisi: ಸದನದಲ್ಲಿ ಜೈ ಭೀಮ್, ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ಅಸಾದುದ್ದೀನ್ ಓವೈಸಿ; ವಿಡಿಯೋ ವೈರಲ್
ಅಸಾದುದ್ದೀನ್ ಓವೈಸಿ ಸಂಸತ್ನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. “ಭಾರತ್ ಮಾತಾ ಕಿ ಜೈ” ಎಂದು ಹೇಳದ ರಾಜಕಾರಣಿಯ ವಿರುದ್ಧ ದೇಶದ ಯುವಕರು ಒಂದಾಗಬೇಕು ಎಂದು ಕಿಡಿಗೇಡಿಗಳಲ್ಲಿ ಒಬ್ಬರು ಹೇಳಿರುವ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ, ದೆಹಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪೋಸ್ಟರ್‌ಗಳನ್ನು ತೆಗೆದಿದ್ದಾರೆ. ಅಷ್ಟರಲ್ಲಾಗಲೇ ಆ ವ್ಯಕ್ತಿಗಳು ಹೊರಟು ಹೋಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಓವೈಸಿ ಅವರು “ಜೈ ಪ್ಯಾಲೆಸ್ತೀನ್” ಎಂದು ಹೇಳಿದ ನಂತರ ಈ ಗದ್ದಲ ಎದ್ದಿದೆ. ಕೆಲವು ‘ಅಪರಿಚಿತ ದುಷ್ಕರ್ಮಿಗಳು’ ಇಂದು ನನ್ನ ಮನೆಗೆ ಕಪ್ಪು ಮಸಿ ಬಳಿದು ಧ್ವಂಸಗೊಳಿಸಿದ್ದಾರೆ. ದೆಹಲಿ ಪೊಲೀಸ್ ಅಧಿಕಾರಿಗಳ ವ್ಯಾಪ್ತಿಯೊಳಗೇ ಇದು ಹೇಗೆ ನಡೆಯುತ್ತಿದೆ? ಎಂದು ಓವೈಸಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಪರ ಘೋಷಣೆ ವಿವಾದ; ಪೊಳ್ಳು ಬೆದರಿಕೆಗೆ ಹೆದರುವುದಿಲ್ಲ: ಅಸಾದುದ್ದೀನ್ ಓವೈಸಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಟ್ಯಾಗ್ ಮಾಡಿದ ಓವೈಸಿ, “ಇದು ನಿಮ್ಮ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ದಯವಿಟ್ಟು ಸಂಸದರ ಸುರಕ್ಷತೆಯನ್ನು ಖಾತರಿಪಡಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಮಗೆ ತಿಳಿಸಿ” ಎಂದು ಬರೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ