ಮುಂದಿನ ದಿನಗಳಲ್ಲಿ ಎಲ್ಲಾ ಪ್ರಯಾಣಿಕರು ದೃಢೀಕೃತ ರೈಲ್ವೆ ಟಿಕೆಟ್ ಪಡೆಯಬಹುದು: ಅಶ್ವಿನಿ ವೈಷ್ಣವ್
ಮುಂದಿನ ದಿನಗಳಲ್ಲಿ ರೈಲ್ವೆ ಪ್ರಯಾಣಿಕರು ಟಿಕೆಟ್ಗಾಗಿ ಕಾಯಬೇಕಿಲ್ಲ, ಪ್ರತಿಯೊಬ್ಬರೂ ದೃಢೀಕೃತ ಟಿಕೆಟ್ ಪಡೆಯಬಹುದು. ಕಳೆದ 10 ವರ್ಷಗಳಲ್ಲಿ ಸಾಕಷ್ಟು ರೈಲ್ವೆ ಅಭಿವೃದ್ಧಿಗಳಾಗಿದ್ದು, ಮುಂದಿನ 5 ವರ್ಷಗಳಲ್ಲಿ ಕೂಡ ಸಾಕಷ್ಟು ಪರಿವರ್ತನೆಯನ್ನು ಕಾಣಬಹುದು.
ಮುಂದಿನ ಐದು ವರ್ಷಗಳಲ್ಲಿ, ಬಹುತೇಕ ಎಲ್ಲಾ ರೈಲ್ವೆ ಪ್ರಯಾಣಿಕರು ದೃಢೀಕೃತ ಟಿಕೆಟ್ ಪಡೆಯಬಹುದು ಎಂದು ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್(Ashwini Vaishnav) ಮಂಗಳವಾರ ಹೇಳಿದ್ದಾರೆ. ಸಚಿವರು ಐಎಎನ್‌ಎಸ್ ಜೊತೆ ಸಂವಾದ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆಯಲ್ಲಿ ಅಭೂತಪೂರ್ವ ಪರಿವರ್ತನೆ ಮಾಡಿದ್ದಾರೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ, ರೈಲ್ವೆಯ ಸಾಮರ್ಥ್ಯವನ್ನು ತುಂಬಾ ಹೆಚ್ಚಿಸಲಾಗುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ, ಪ್ರಯಾಣಿಸಲು ಬಯಸುವ ಯಾವುದೇ ಪ್ರಯಾಣಿಕರು ಸುಲಭವಾಗಿ ದೃಢೀಕೃತ ಟಿಕೆಟ್ ಪಡೆಯಬಹುದು ಎಂದು ಕೇಂದ್ರ ಸಚಿವರು ಹೇಳಿದರು.
2014 ರಿಂದ 2024 ರವರೆಗೆ 31,000 ಕಿಲೋಮೀಟರ್ ಹೊಸ ಹಳಿಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. 2004 ರಿಂದ 2014 ರವರೆಗಿನ 10 ವರ್ಷಗಳಲ್ಲಿ, ಸುಮಾರು 5,000 ಕಿಲೋಮೀಟರ್‌ಗಳು ಮಾತ್ರ ವಿದ್ಯುದ್ದೀಕರಣಗೊಂಡಿವೆ, ಆದರೆ ಕಳೆದ 10 ವರ್ಷಗಳಲ್ಲಿ, 44,000 ಕಿಲೋಮೀಟರ್ ರೈಲ್ವೇ ವಿದ್ಯುದೀಕರಣಗೊಂಡಿದ್ದು ಇದು ಉತ್ತಮ ಬೆಳವಣಿಗೆ ಎಂದಿದ್ದಾರೆ.
2004-2014ರವರೆಗೆ ಕೇವಲ 32,000 ಕೋಚ್‌ಗಳನ್ನು ತಯಾರಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 54,000 ಕೋಚ್‌ಗಳನ್ನು ನಿರ್ಮಿಸಲಾಗಿದೆ. ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗೆ 2014 ರ ಮೊದಲು ಒಂದು ಕಿಲೋಮೀಟರ್ ಕೂಡ ಕಾರ್ಯಾರಂಭ ಮಾಡಿಲ್ಲ.
ಮತ್ತಷ್ಟು ಓದಿ:ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ವಿಶ್ವ ದಾಖಲೆ ಮಾಡಿದೆ: ಅಶ್ವಿನಿ ವೈಷ್ಣವ್
ಮುಂದಿನ ಐದು ವರ್ಷಗಳಲ್ಲಿ, ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಬಲವಾದ ಕೊಂಡಿಯಾಗಿರುವ ರೈಲ್ವೇಯನ್ನು ಮತ್ತಷ್ಟು ಬಲಪಡಿಸಲಾಗುವುದು ಮತ್ತು ವಿಶೇಷವಾಗಿ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಹೆಚ್ಚು ವೇಗದಲ್ಲಿ ವಿಸ್ತರಿಸಲಾಗುವುದು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Wed, 24 April 24