Night Curfew: ಒಮಿಕ್ರಾನ್ ಕೇಸ್ಗಳ ಏರಿಕೆ; ಅಸ್ಸಾಂನಲ್ಲಿ ಡಿ. 26ರಿಂದ ನೈಟ್ ಕರ್ಫ್ಯೂ ಜಾರಿ
Assam Omicron Cases: ಅಸ್ಸಾಂನಲ್ಲಿ ರಾತ್ರಿ ಕರ್ಫ್ಯೂ ಅನ್ನು ಡಿಸೆಂಬರ್ 31ರವರೆಗೆ ಪ್ರತಿದಿನ ರಾತ್ರಿ 11.30 ರಿಂದ ಬೆಳಿಗ್ಗೆ 6ರವರೆಗೆ ಇರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸಲಾಗುವುದು.
ಅಸ್ಸಾಂ: ಹಿಮಾಂತ್ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಡಿಸೆಂಬರ್ 26ರಿಂದ ಅಸ್ಸಾಂನಲ್ಲಿ ರಾತ್ರಿ 11.30ರಿಂದ ಬೆಳಿಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಎಲ್ಲಾ ಕೆಲಸದ ಸ್ಥಳಗಳು, ವ್ಯಾಪಾರ/ವಾಣಿಜ್ಯ ಸಂಸ್ಥೆಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಡಾಬಾಗಳು, ಶೋ ರೂಂಗಳು, ದಿನಸಿ, ಹಣ್ಣು ಮತ್ತು ತರಕಾರಿ ಅಂಗಡಿಗಳು ರಾತ್ರಿ 10.30ರವರೆಗೆ ತೆರೆದಿರುತ್ತವೆ.
ನಿನ್ನೆ ಅಸ್ಸಾಂನ ಕೊವಿಡ್ ಕೇಸುಗಳ ಸಂಖ್ಯೆ 6,20,025ಕ್ಕೆ ಏರಿಕೆಯಾಗಿದೆ. ಹೀಗಾಗಿ, ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಹೇರುವುದಾಗಿ ಘೋಷಿಸಿದೆ. ನೈಟ್ ಕರ್ಫ್ಯೂ ಡಿಸೆಂಬರ್ 26ರಿಂದ ಜಾರಿಗೆ ಬರಲಿದೆ. ರಾತ್ರಿ ಕರ್ಫ್ಯೂ ಅನ್ನು ಡಿಸೆಂಬರ್ 31ರಂದು ತೆಗೆದುಹಾಕಲಾಗುತ್ತದೆ. ರಾತ್ರಿ ಕರ್ಫ್ಯೂ ಪ್ರತಿದಿನ ರಾತ್ರಿ 11.30 ರಿಂದ ಬೆಳಿಗ್ಗೆ 6ರವರೆಗೆ ಇರುತ್ತದೆ.
Night curfew to be in force from 11.30 PM to 6 AM, tomorrow onwards across Assam. This curfew, however, will not be applicable on December 31, 2021: Assam Govt pic.twitter.com/PLytBG3CnE
— ANI (@ANI) December 25, 2021
ಅಸ್ಸಾಂನ ಧಾರ್ಮಿಕ ಸ್ಥಳಗಳು ಪ್ರತಿ ಗಂಟೆಗೆ 60 ಸಂಪೂರ್ಣ ಲಸಿಕೆ ಪಡೆದ ವ್ಯಕ್ತಿಗಳಿಗೆ ಮುಕ್ತವಾಗಲಿದೆ. ಕೋವಿಡ್ -19 ವೈರಸ್ ನಿಯಂತ್ರಣಕ್ಕಾಗಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸೂಪರಿಂಟೆಂಡೆಂಟ್‌ಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರ ತಿಳಿಸಿದೆ. ಹಾಗೇ, ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸಲಾಗುವುದು.
ಇದನ್ನೂ ಓದಿ: ಕೊವಿಡ್ 19 ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ; ಮಹಾರಾಷ್ಟ್ರದಲ್ಲಿ ಮತ್ತೆ ಶೇ.50ರ ನಿಯಮ ಜಾರಿ, ರಾತ್ರಿ ಗುಂಪುಗೂಡುವುದು ನಿಷೇಧ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು ಧೃಡ