AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒರಾಂಗ್​ ರಾಷ್ಟ್ರೀಯ ಉದ್ಯಾನಕ್ಕಿದ್ದ ರಾಜೀವ್ ಗಾಂಧಿ ಹೆಸರು ತೆಗೆಯಲು ನಿರ್ಧರಿಸಿದ ಅಸ್ಸಾಂ ಸರ್ಕಾರ

ಬ್ರಹ್ಮಪುತ್ರ ನದಿಯ ಉತ್ತರ ಭಾಗದ ದಡದಲ್ಲಿರುವ ಒರಾಂಗ್​ ರಾಷ್ಟ್ರೀಯ ಉದ್ಯಾನವನ ಸುಮಾರು 78.80 ಎಕರೆ ವಿಸ್ತೀರ್ಣದಲ್ಲಿದೆ. ಅಸ್ಸಾಂನ ಅತ್ಯಂತ ಹಳೇ ಅರಣ್ಯ ಸರಂಕ್ಷಿತ ಪ್ರದೇಶವಾಗಿದೆ.

ಒರಾಂಗ್​ ರಾಷ್ಟ್ರೀಯ ಉದ್ಯಾನಕ್ಕಿದ್ದ ರಾಜೀವ್ ಗಾಂಧಿ ಹೆಸರು ತೆಗೆಯಲು ನಿರ್ಧರಿಸಿದ ಅಸ್ಸಾಂ ಸರ್ಕಾರ
ಒರಾಂಗ್​ ನ್ಯಾಶನಲ್​ ಪಾರ್ಕ್​
TV9 Web
| Updated By: Lakshmi Hegde|

Updated on: Sep 02, 2021 | 1:54 PM

Share

ಇತ್ತೀಚೆಗಷ್ಟೇ ಖೇಲ್​ ರತ್ನ ಪ್ರಶಸ್ತಿಗೆ ಇದ್ದ ರಾಜೀವ್​ಗಾಂಧಿ (Rajiv Gandhi)  ಹೆಸರನ್ನು ತೆಗೆದು, ಅದಕ್ಕೆ ಹಾಕಿ ಮಾಂತ್ರಿಕ ಧ್ಯಾನ್​ ಚಂದ ಹೆಸರಿಡಲಾಗಿತ್ತು. ಇದೀಗ ಅಸ್ಸಾಂನ ಒರಾಂಗ್​​ನಲ್ಲಿರುವ ರಾಜೀವ್​ ಗಾಂಧಿ ರಾಷ್ಟ್ರೀಯ ಉದ್ಯಾನವನ (Orang National Park) ದ ಹೆಸರನ್ನು ಬದಲಿಸಲು ಅಸ್ಸಾಂ ಸರ್ಕಾರ (Assam Government) ನಿರ್ಧರಿಸಿದೆ. ಇಲ್ಲಿನ ನ್ಯಾಶನಲ್​ ಪಾರ್ಕ್​ಗೆ ಇರುವ ರಾಜೀವ್ ಗಾಂಧಿ ಎಂಬ ಹೆಸರನ್ನು ತೆಗೆದು, ಒರಾಂಗ್​ ನ್ಯಾಶನಲ್ ಪಾರ್ಕ್​ ಎಂದು ನಾಮಕರಣ ಮಾಡಲು ಬುಧವಾರ ಅಸ್ಸಾಂ ಕ್ಯಾಬಿನೆಟ್​ ನಿರ್ಣಯ ಅಂಗೀಕಾರ ಮಾಡಿದೆ.

ಅತಿ ಹೆಚ್ಚು ಸಂಖ್ಯೆಯಲ್ಲಿ ರಾಯಲ್​ ಬೆಂಗಾಲಿ ಹುಲಿಗಳನ್ನು ಹೊಂದಿರುವ ಒರಾಂಗ್​ ರಾಷ್ಟ್ರೀಯ ಉದ್ಯಾನಕ್ಕೆ 2005ರಲ್ಲಿ ರಾಜೀವ್​ ಗಾಂಧಿ ಹೆಸರನ್ನು ಇಡಲಾಗಿತ್ತು. ಇತ್ತೀಚೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದ ಆದಿವಾಸಿ ಮತ್ತು ಚಹಾ ಬುಡಕಟ್ಟು ಜನಾಂಗದವರು, ಒರಾಂಗ್​ ರಾಷ್ಟ್ರೀಯ ಉದ್ಯಾನವನಕ್ಕಿರುವ ರಾಜೀವ್​ ಗಾಂಧಿ ಹೆಸರನ್ನು ತೆಗೆಯಬೇಕು. ಇದು ಸಮುದಾಯದ ಪರವಾದ ಆಗ್ರಹ ಎಂದು ಹೇಳಿದ್ದರು. ಈ ಒರಾಂಗ್​ದೊಂದಿಗೆ ಆದಿವಾಸಿ ಮತ್ತು ಬುಡಕಟ್ಟು ಜನಾಂಗಕ್ಕೆ ಭಾವನಾತ್ಮಕ ಬೆಸುಗೆ ಇದೆ. ಹಾಗಾಗಿ ಅವರ ಬೇಡಿಕೆಯನ್ನು ಪೂರೈಸುವ ಸಲುವಾಗಿ ರಾಜೀವ್​ ಗಾಂಧಿ ಹೆಸರನ್ನು ತೆಗೆಯಲು ನಿರ್ಧರಿಸಲಾಗಿದೆ ಎಂದು ಅಸ್ಸಾಂ ಸಂಸದೀಯ ವ್ಯವಹಾರಗಳ ಸಚಿವ ಪಿಜುಶ್ ಹಜಾರಿಕಾ ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಯ ಉತ್ತರ ಭಾಗದ ದಡದಲ್ಲಿರುವ ಒರಾಂಗ್​ ರಾಷ್ಟ್ರೀಯ ಉದ್ಯಾನವನ ಸುಮಾರು 78.80 ಎಕರೆ ವಿಸ್ತೀರ್ಣದಲ್ಲಿದೆ. ಅಸ್ಸಾಂನ ಅತ್ಯಂತ ಹಳೇ ಅರಣ್ಯ ಸರಂಕ್ಷಿತ ಪ್ರದೇಶವಾಗಿದೆ. ಮೊದಲು 1985ರಲ್ಲಿ ವನ್ಯಜೀವಿ ಅಭಯಾರಣ್ಯ ಎಂದು ಗುರುತಿಸಲಾಗಿತ್ತು. ನಂತರ 1999ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಪರಿವರ್ತಿಸಲಾಗಿದೆ. 2005ರ ಆಗಸ್ಟ್​​ನಲ್ಲಿ, ಅಂದಿನ ತರುಣ್​ ಗೊಗೊಯಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಒರಾಂಗ್​ ನ್ಯಾಶನಲ್ ಪಾರ್ಕ್​​ಗೆ ರಾಜೀವ್​ ಗಾಂಧಿ ಹೆಸರನ್ನು ಇಟ್ಟಿತ್ತು. ಆಗಲೇ ಸ್ಥಳೀಯ ಸಮುದಾಯಗಳಿಂದ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಕೆಲಸದ ಒತ್ತಡವು ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ವರದಿ

Dengue: ಮುಂಬೈನಲ್ಲಿ ಏರಿಕೆಯಾದ ಡೆಂಗ್ಯೂ ಪ್ರಕರಣ, ಆಗಸ್ಟ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ಹೆಚ್ಚಳ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!