Assam Floods: ಪ್ರವಾಹಕ್ಕೆ ನಲುಗಿದ ಅಸ್ಸಾಂ; ಇಬ್ಬರು ಸಾವು, ಅಪಾರ ಬೆಳೆ ನಾಶ-ಪ್ರಧಾನಿಯಿಂದ ನೆರವಿನ ಭರವಸೆ

TV9 Digital Desk

| Edited By: Lakshmi Hegde

Updated on:Sep 01, 2021 | 5:51 PM

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರಿಗೆ ದೂರವಾಣಿ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನೂ

Assam Floods: ಪ್ರವಾಹಕ್ಕೆ ನಲುಗಿದ ಅಸ್ಸಾಂ; ಇಬ್ಬರು ಸಾವು, ಅಪಾರ ಬೆಳೆ ನಾಶ-ಪ್ರಧಾನಿಯಿಂದ ನೆರವಿನ ಭರವಸೆ
ಅಸ್ಸಾಂ ಪ್ರವಾಹದ ಚಿತ್ರಣ

Follow us on

ಸಿಬ್​ಸಾಗರ್​: ಭೀಕರ ಪ್ರವಾಹಕ್ಕೆ ಅಸ್ಸಾಂ (Assam Floods) ತತ್ತರಿಸಿದೆ. ಸುಮಾರು 18 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಬೆಳೆಗಳೆಲ್ಲ ನಾಶವಾಗುತ್ತಿದೆ. ರಾಜ್ಯದ 5 ಲಕ್ಷ ಮಂದಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಮಕ್ಕಳೆಲ್ಲ ನೀರಿನಲ್ಲಿ ಮುಳುಗುತ್ತಿದ್ದು, ಅವರ ರಕ್ಷಣೆಯೇ ಸವಾಲಾಗಿದೆ. ಈವರೆಗೆ ಪ್ರವಾಹ, ಮಳೆಯಿಂದ ಇಬ್ಬರು ಮೃತಪಟ್ಟಿದ್ದಾರೆ. ಇಡೀ ರಾಜ್ಯದಲ್ಲೇ ಅತ್ಯಂತ ಹೆಚ್ಚಾಗಿ ಪ್ರವಾಹಕ್ಕೆ ತುತ್ತಾದ ಪ್ರದೇಶ ನಲ್ಬರಿ ಎಂದು ಟೈಮ್ಸ್​ ನೌ ವರದಿ ಮಾಡಿದೆ.

ಕಳೆದ ಒಂದು ವಾರದಿಂದಲೂ ನದಿಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ. ಇಲ್ಲಿಯವರೆಗೆ ಸುಮಾರು 40,000 ಹೆಕ್ಟೇರ್​ಗಳಷ್ಟು ಕೃಷಿಭೂಮಿಯಲ್ಲಿದ್ದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. 14 ಜಿಲ್ಲೆಗಳಿಂದ 105 ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ. ಕಾಜಿರಂಗ ರಾಷ್ಟ್ರೀಉ ಉದ್ಯಾನವನ ಕೂಡ ಜಲಾವೃತಗೊಂಡಿದ್ದು, ಪ್ರಾಣಿಗಳ ಸುರಕ್ಷತೆ ಬಗ್ಗೆ ಆತಂಕ ಶುರುವಾಗಿದೆ.

ಕರೆ ಮಾಡಿ ವಿಚಾರಿಸಿದ ಪ್ರಧಾನಿ ಅಸ್ಸಾಂ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವರದಿ ಕೇಳಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರಿಗೆ ದೂರವಾಣಿ ಕರೆ ಮಾಡಿದ್ದ ಅವರು, ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನೂ ಕೇಂದ್ರದಿಂದ ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ. ಹಾಗೇ, ಟ್ವೀಟ್ ಮಾಡಿದ ಪ್ರಧಾನಿ, ಅಸ್ಸಾಂ ಪ್ರವಾಹದಿಂದ ತತ್ತರಿಸುತ್ತಿರುವ ಜನರ ಜೀವ ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:ಸಮಾನ ಕೆಲಸಕ್ಕೆ ಸಮಾನ ವೇತನ ತತ್ವವನ್ನು ಹುದ್ದೆಯೊಂದನ್ನೇ ಅವಲಂಬಿಸಿ ಪರಿಗಣಿಸಲು ಆಗುವುದಿಲ್ಲ: ಸುಪ್ರೀಂಕೋರ್ಟ್​

Afghanistan Crisis: ಅಫ್ಘಾನಿಸ್ತಾನದಲ್ಲಿ ಇಂದು ಅಥವಾ ನಾಳೆ ತಾಲಿಬಾನ್ ಸರ್ಕಾರ ರಚನೆ ಸಾಧ್ಯತೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada