ಶ್ರೀನಗರ: ನಾಳೆ ಭಾರತದ ಸ್ವಾತಂತ್ರ್ಯ ದಿನಾಚರಣೆ (Independence Day) . ಈ ಸಂಭ್ರಮವನ್ನು ಕರಾಳ ದಿನವನ್ನಾಗಿಸಬೇಕೆಂದು ಹೊಂಚು ಹಾಕಿದ್ದ ಉಗ್ರರು ಜಮ್ಮು ಕಾಶ್ಮೀರದ ಅಡಗುತಾಣದಲ್ಲಿ ಸಂಚು ರೂಪಿಸಿದ್ದರು. ದಿನದಂದು ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಆ ಅಡಗುತಾಣದ ಮೇಲೆ ದಾಳಿ ನಡೆಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ. ಈ ಉಗ್ರರು ದೆಹಲಿಯ ಪ್ರಮುಖ ಸ್ಮಾರಕಗಳು ಹಾಗೂ ಸ್ವಾತಂತ್ರ್ಯ ದಿನಾಚರಣೆ ನಡೆಯುವ ಜಾಗ, ಅಯೋಧ್ಯೆಯ ರಾಮ ಮಂದಿರ (Ram Temple in Ayodhya) ನಿರ್ಮಾಣವಾಗುತ್ತಿರುವ ಜಾಗದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದರೆ, ಆ ಉಗ್ರರನ್ನು ಪೊಲೀಸರು ಬಂಧಿಸಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಆ. 15ರಂದು ಭಾರತದ ಪ್ರಮುಖ ಸ್ಥಳಗಳ ಮೇಲೆ ಉಗ್ರರು ದಾಳಿ ನಡೆಸಲು ಹೊಂಚು ಹಾಕಿರುವುದರಿಂದ ಜಮ್ಮು ಕಾಶ್ಮೀರ ಮತ್ತು ದೆಹಲಿಯ ಸುತ್ತಮುತ್ತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಜಮ್ಮುವಿನಲ್ಲಿದ್ದ ಜೈಷ್-ಇ-ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು ಪಾಕಿಸ್ತಾನದ ಜೈಷ್ ಕಮಾಂಡರ್ಗಳ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಜಮ್ಮು ಕಾಶ್ಮೀರದ ಪೊಲೀಸರಿಗೆ ಲಭ್ಯವಾಗಿತ್ತು. ಆ ನಾಲ್ವರಲ್ಲಿ ಒಬ್ಬನಾದ ಇಜಾಹರ್ ಖಾನ್ ಉತ್ತರ ಪ್ರದೇಶದ ಶಾಮ್ಲಿಯವನಾಗಿದ್ದು, ಆತನನ್ನು ಅಯೋಧ್ಯೆಯ ರಾಮಜನ್ಮಭೂಮಿ ಹಾಗೂ ಪಾಣಿಪತ್ ಮೇಲೆ ದಾಳಿ ಮಾಡಲು ನಿಯೋಜನೆ ಮಾಡಲಾಗಿತ್ತು. ಆದರೆ, ಆ ಉಗ್ರರು ಅಯೋಧ್ಯೆ ಹಾಗೂ ದೆಹಲಿಯ ನಾನಾ ಭಾಗಗಳಲ್ಲಿ ದಾಳಿ ನಡೆಸುವ ಮೊದಲೇ ಜಮ್ಮು ಕಾಶ್ಮೀರದ ಪೊಲೀಸರನ್ನು ಅವರನ್ನು ಬಂಧಿಸಿದ್ದಾರೆ.
#JammuAndKashmir: Ahead of the #IndependenceDay, a major tragedy averted by J&K Police, after a Jaish-e-Mohammed (JeM) module busted and four terrorists arrested in Jammu.
— All India Radio News (@airnewsalerts) August 14, 2021
ಕಾಶ್ಮೀರದಲ್ಲಿದ್ದ ಜೈಷ್-ಇ-ಮೊಹಮ್ಮದ್ ಅಡಗುತಾಣಗಳ ಮೇಲೆ ಇಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ. ಬಂಧಿತ ನಾಲ್ವರು ಉಗ್ರರು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಈ ಉಗ್ರರು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ದಾಳಿ ನಡೆಸಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಡ್ರೋಣ್ ಮೂಲಕ ಕಾಶ್ಮೀರದಲ್ಲಿರುವ ಉಗ್ರರಿಗೆ ರವಾನಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಜಮ್ಮು ಕಾಶ್ಮೀರದವರೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭದ್ರತಾ ಪಡೆ ಸಿಬ್ಬಂದಿ ದೆಹಲಿಯ ಎಲ್ಲೆಡೆ ಬೀಡುಬಿಟ್ಟಿದ್ದಾರೆ. ಈ ಭಾಗಗಳಲ್ಲಿ ಡ್ರೋನ್ಗಳನ್ನು ಹಾರಿಸದಂತೆ ಆದೇಶ ಹೊರಡಿಸಲಾಗಿದೆ.
ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಉಗ್ರರಿಂದ ಅಡ್ಡಿಯಾಗುವ ಆತಂಕ ಇರುವುದರಿಂದ ದೇಶದ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಮಫ್ತಿಯಲ್ಲಿರುವ ಪೊಲೀಸರನ್ನು ನಿಯೋಜಿಸಲಾಗಿದೆ. ಹಾಗೇ ಇಂದು ಸಂಜೆಯಿಂದ ದೆಹಲಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: Kinnaur Landslide: ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆ
ನರಕವಾಗಿದೆ ಅಫ್ಘಾನಿಸ್ತಾನ; ಆಟವಾಡುವ ಮಕ್ಕಳೂ ಇಲ್ಲಿ ತಾಲಿಬಾನ್ ಉಗ್ರರ ಲೈಂಗಿಕ ಕ್ರಿಯೆಗೆ ಮೀಸಲು!
(Attack on Ayodhya Ram Temple Failed as Jammu Kashmir Police Arrested 4 Jaish Terrorists amid of Independence Day)
Published On - 5:17 pm, Sat, 14 August 21