ಅಯೋಧ್ಯೆ(Ayodhya)ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮಲಲ್ಲಾಗೆ ಗುಜರಾತ್ನ ವಜ್ರದ ವ್ಯಪಾರಿಯು 11 ಕೋಟಿ ರೂ. ಮೌಲ್ಯದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ. 1 ಕೋಟಿ ಮೌಲ್ಯದ ಕಿರೀಟವನ್ನು ಹೊಸದಾಗಿ ನಿರ್ಮಿಸಲಾಗಿಗಿರುವ ರಾಮ ಮಂದಿರದ ರಾಮನಿಗಾಗಿ ವಿಶೇಷವಾಗಿ ರಚಿಸಲಾಗಿದೆ. ಸೂರತ್‌ನ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕ ಮುಖೇಶ್ ಪಟೇಲ್ ಅವರು 6 ಕಿಲೋಗ್ರಾಂ ತೂಕದ ಕಿರೀಟವನ್ನು ಭಗವಂತ ರಾಮನಿಗೆ ಅರ್ಪಿಸಿದರು, ಚಿನ್ನ, ವಜ್ರಗಳು ಮತ್ತು ಅಮೂಲ್ಯವಾದ ರತ್ನಗಳಿಂದ ಅಲಂಕರಿಸಲಾಗಿದೆ. ಮುಕೇಶ್ ಪಟೇಲ್ ಅವರು ತಮ್ಮ ಕುಟುಂಬದೊಂದಿಗೆ ಖುದ್ದಾಗಿ ಅಯೋಧ್ಯೆಗೆ ಭೇಟಿ ನೀಡಿ ದೇವಾಲಯದ ಟ್ರಸ್ಟ್ ಅಧಿಕಾರಿಗಳಿಗೆ ಕಿರೀಟವನ್ನು ಅರ್ಪಿಸಿದರು.
ರಾಮಮಂದಿರದ ಪ್ರಧಾನ ಅರ್ಚಕರು ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳ ಉಪಸ್ಥಿತಿಯಲ್ಲಿ, ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಮುಖೇಶ್ ಪಟೇಲ್ ಅವರು ಕಿರೀಟವನ್ನು ಹಸ್ತಾಂತರಿಸಿದರು.
ಅಯೋಧ್ಯೆಯಲ್ಲಿ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠೆಯನ್ನು ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿಗಳಲ್ಲಿ ಮುಖ್ಯ ಯಜಮಾನರಾಗಿ ಪಾಲ್ಗೊಂಡಿದ್ದರು. ದೇವಸ್ಥಾನಕ್ಕೆ ಏನು ನೀಡಬೇಕು ಎನ್ನುವ ಗೊಂದಲದಲ್ಲಿದ್ದರು, ಬಳಿಕ ವಜ್ತದ ಕಿರೀಟವನ್ನು ನೀಡಲು ನಿರ್ಧರಿಸಿದರು.
ಮತ್ತಷ್ಟು ಓದಿ: ವಿಡಿಯೋ ನೋಡಿ: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ದರ್ಶನಕ್ಕೆ ಮೊದಲ ದಿನ ಹೇಗಿತ್ತು ಭಕ್ತರ ರೆಸ್ಪಾನ್ಸ್?
ಪಟೇಲ್ ಚಿನ್ನ ಮತ್ತು ಇತರ ಆಭರಣಗಳಿಂದ ಮಾಡಿದ ಕಿರೀಟವನ್ನು ದಾನ ಮಾಡಲು ನಿರ್ಧರಿಸಿದರು. ಪ್ರತಿಮೆಯನ್ನು ಅಳೆಯಲು ಕಂಪನಿಯ ಇಬ್ಬರು ಉದ್ಯೋಗಿಗಳನ್ನು ಅಯೋಧ್ಯೆಗೆ ಕಳುಹಿಸಲಾಯಿತು, ಅದರ ನಂತರ ಕಿರೀಟದ ತಯಾರಿಕೆಯು ಪ್ರಾರಂಭವಾಯಿತು.
ಮತ್ತಷ್ಟು ಓದಿ: ಅಯೋಧ್ಯೆ: ರಾಮಲಲ್ಲಾನ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ, ನೂಕುನುಗ್ಗಲು
ಕಿರೀಟವು ವಿವಿಧ ಗಾತ್ರದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ನೀಲಮಣಿಗಳ ಜೊತೆಗೆ 4 ಕಿಲೋಗ್ರಾಂಗಳಷ್ಟು ಚಿನ್ನವನ್ನು ಒಳಗೊಂಡಿದೆ.
ಪ್ರಧಾನಿ ಮೋದಿ ನೇತೃತ್ವದ ಕಾರ್ಯಕ್ರಮದಲ್ಲಿ ಅಯೋಧ್ಯೆ ದೇವಸ್ಥಾನದಲ್ಲಿ ಹೊಸ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು ಮತ್ತು ಲಕ್ಷಾಂತರ ಜನರು ತಮ್ಮ ಮನೆಗಳಲ್ಲಿ ಮತ್ತು ದೇಶಾದ್ಯಂತದ ದೇವಾಲಯಗಳಲ್ಲಿ ಟಿವಿಯಲ್ಲಿ ವೀಕ್ಷಿಸಿದರು. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:34 am, Tue, 23 January 24