ಅಯೋಧ್ಯೆ: ರಾಮಲಲ್ಲಾನ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ, ನೂಕುನುಗ್ಗಲು

ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ(Ram Mandir)ವನ್ನು ನೋಡಲು ಜನರು ಕಾತುರರಾಗಿದ್ದಾರೆ. ಇಂದಿನಿಂದ ಸಾರ್ವಜನಿಕರು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ನೂಕುನುಗ್ಗಲು ಆರಂಭವಾಗಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.

ಅಯೋಧ್ಯೆ: ರಾಮಲಲ್ಲಾನ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ, ನೂಕುನುಗ್ಗಲು
ಅಯೋಧ್ಯೆ
Follow us
ನಯನಾ ರಾಜೀವ್
|

Updated on: Jan 23, 2024 | 8:21 AM

ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ(Ram Mandir)ವನ್ನು ನೋಡಲು ಜನರು ಕಾತುರರಾಗಿದ್ದಾರೆ. ಇಂದಿನಿಂದ ಸಾರ್ವಜನಿಕರು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ನೂಕುನುಗ್ಗಲು ಆರಂಭವಾಗಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.

ಕೊರೆಯುವ ಚಳಿಯಲ್ಲೂ ತನ್ನ ದೇವರನ್ನು ನೋಡಬೇಕೆಂಬ ತವಕ ಅವರನ್ನು ಅಲ್ಲಿಗೆ ತಂದು ನಿಲ್ಲಿಸಿತ್ತು, ರಾತ್ರಿ ವೇಳೆಯೂ ದೇಗುಲದ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದನ್ನು ಕಾಣಬಹುದು. ಜನರು ನಿರಂತರವಾಗಿ ಜೈ ಶ್ರೀ ರಾಮ್ ಮತ್ತು ಸಿಯಾವರ ರಾಮ್ ಚಂದ್ರ ಕೀ ಜೈ ಎಂದು ಘೋಷಣೆಗಳನ್ನು ಕೇಳಿದರು.

ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ರಾಮಮಂದಿರ ಉದ್ಘಾಟನೆಯ ನಂತರ ಜನರ ಮನದಲ್ಲಿ ಭಕ್ತಿಯ ಮಹಾಪೂರವೇ ಹರಿದಿದೆ. ರಾಮ ಮಂದಿರದ ಮುಖ್ಯ ದ್ವಾರ ತೆರೆಯುತ್ತಿದ್ದಂತೆಯೇ ಭಕ್ತರ ದಂಡು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿದ್ದು, ರಾಮಲಲ್ಲಾ ದರ್ಶನ ಹಾಗೂ ದೇಗುಲದಲ್ಲಿ ಪೂಜೆ ಸಲ್ಲಿಸಲು ಉತ್ಸುಕರಾಗಿದ್ದರು.

ರಾಮಮಂದಿರ ಉದ್ಘಾಟನೆಯ ನಂತರ ಇಡೀ ದೇಶದಲ್ಲಿ ದೀಪಾವಳಿಯಂತಹ ವಾತಾವರಣ ಕಂಡು ಬಂದಿತ್ತು. ಜನರು ದೀಪಗಳನ್ನು ಹಚ್ಚುವ ಮೂಲಕ ಮತ್ತು ಪಟಾಕಿ ಸಿಡಿಸುವ ಮೂಲಕ ಶ್ರೀರಾಮನನ್ನು ಜನರು ಸ್ವಾಗತಿಸಿದರು. ಅಯೋಧ್ಯೆಯಲ್ಲಿ ಜನವರಿ 22 ಅಂದರೆ ನಿನ್ನೆ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ವಿಧಿವಿಧಾನಗಳನ್ನು ನೆರವೇರಿಸಿದರು.

ಮತ್ತಷ್ಟು ಓದಿ: ರಾಮಮಂದಿರದಲ್ಲಿ ನಾಳೆಯಿಂದ ಸಾರ್ವಜನಿಕರಿಗೆ ರಾಮಲಲ್ಲಾ ದರ್ಶನ; ಪೂಜೆ, ಆರತಿಯ ಮಾಹಿತಿ ಇಲ್ಲಿದೆ

ದೇವಾಲಯವು ಭಕ್ತರಿಗೆ ಬೆಳಗ್ಗೆ 7.00 ಕ್ಕೆ ಬಾಗಿಲು ತೆರೆಯುತ್ತದೆ ಮತ್ತು 11.30 ರವರೆಗೆ ಪ್ರವೇಶಿಸಬಹುದಾಗಿದೆ. ಮಧ್ಯಾಹ್ನ 2 ರಿಂದ 7ರವರೆಗೆ ಪ್ರವೇಶಕ್ಕೆ ಅವಕಾಶವಿರಲಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ, ಶ್ರೀರಾಮನಿಗೆ ಪ್ರತಿ ಗಂಟೆಗೆ ಹಣ್ಣುಗಳು ಮತ್ತು ಹಾಲು ನೀಡಲಾಗುತ್ತದೆ.

ಪ್ರಾಣ ಪ್ರತಿಷ್ಠಾ ವಿಧಿ ವಿಧಾನಗಳ ನಂತರ ನಡೆದ ರಾಮಲಲ್ಲಾ ಮೂರ್ತಿಯ ಅನಾವರಣ ಸಮಾರಂಭದ ವಿಶೇಷವಾಗಿತ್ತು. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರವು ಭವ್ಯವಾದ ರಚನೆಯಾಗಿ ನಿಂತಿದೆ. ಇದು 380 ಅಡಿ ಉದ್ದ (ಪೂರ್ವ-ಪಶ್ಚಿಮ) ಮತ್ತು 250 ಅಡಿ ಅಗಲವನ್ನು ಹೊಂದಿದೆ. ನೆಲದಿಂದ 161 ಅಡಿ ಎತ್ತರದಲ್ಲಿರುವ ಈ ದೇವಾಲಯವು 392 ಕಂಬಗಳಿಂದ ಬೆಂಬಲಿತವಾಗಿದೆ ಮತ್ತು 44 ಬಾಗಿಲುಗಳನ್ನು ಹೊಂದಿದೆ.

ದೇವಾಲಯದ ಕಂಬಗಳು ಮತ್ತು ಗೋಡೆಗಳ ಮೇಲೆ ಹಿಂದೂ ದೇವತೆಗಳು, ದೇವರುಗಳ ಕೆತ್ತನೆಗಳಿವೆ. 2019 ರ ನವೆಂಬರ್‌ನಲ್ಲಿ ಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ತಕ್ಷಣವೇ ದೇವಾಲಯ ನಿರ್ಮಾಣ ಕಾಮಗಾರಿಯಲ್ಲಿ ಆರಂಭಿಸಲಾಗಿತ್ತು.

ಪ್ರಧಾನಿ ಮೋದಿ, ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ರಾಮ ಲಲ್ಲಾನ ವಿಗ್ರಹದ ಪ್ರತಿಷ್ಠಾಪನೆಯನ್ನು ಹೊಸ ಯುಗದ ಆಗಮನ ಎಂದು ಘೋಷಿಸಿದರು. ಅಭೂತಪೂರ್ವ ತಾಳ್ಮೆ, ಅಸಂಖ್ಯಾತ ತ್ಯಾಗ ಮತ್ತು ತಪಸ್ಸಿನ ನಂತರ ನಮ್ಮ ಶ್ರೀರಾಮನು ಆಗಮಿಸಿದ್ದಾನೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?