ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ‘ಜ್ವಾಲಾ’ ಚೀತಾ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಮೀಬಿಯಾದ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ. 1952 ರಲ್ಲಿ ಭಾರತದಲ್ಲಿ ಚೀತಾಗಳ ಸಂಖ್ಯೆ ಶೂನ್ಯ ಎಂದು ಘೋಷಿಸಲಾಯಿತು. 2022 ರಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಅವುಗಳನ್ನು ಮತ್ತೆ ಪರಿಚಯಿಸಲಾಯಿತು.

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ‘ಜ್ವಾಲಾ’ ಚೀತಾ
ಚೀತಾImage Credit source: Telegraph
Follow us
ನಯನಾ ರಾಜೀವ್
|

Updated on: Jan 23, 2024 | 11:07 AM

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಮೀಬಿಯಾದ ಚೀತಾ(Cheetah) ‘ಜ್ವಾಲಾ’ ಮೂರು ಮರಿಗಳಿಗೆ ಜನ್ಮ ನೀಡಿದೆ. ಇತ್ತೀಚೆಗಷ್ಟೇ ಮತ್ತೊಂದು ಚೀತಾ ಆಶಾ ಕೂಡ ಮರಿಗಳಿಗೆ ಜನ್ಮ ನೀಡಿತ್ತು, ಇದಾದ ಕೆಲವೇ ದಿನಗಳ ಇದು ಸಂಭವಿಸಿದೆ. 1952 ರಲ್ಲಿ ಭಾರತದಲ್ಲಿ ಚೀತಾಗಳ ಸಂಖ್ಯೆ ಶೂನ್ಯ ಎಂದು ಘೋಷಿಸಲಾಯಿತು. 2022 ರಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಅವುಗಳನ್ನು ಮತ್ತೆ ಪರಿಚಯಿಸಲಾಯಿತು.

ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪರಿಸರ ಸಚಿವ ಭೂಪೇಂದ್ರ ಯಾದವ್ ವನ್ಯಜೀವಿ ಪ್ರೇಮಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಾಜೆಕ್ಟ್​ ಚೀತಾ ಎಂಬ ಯೋಜನೆಯಡಿಯಲ್ಲಿ 2022ರಲ್ಲಿ ನಮೀಬಿಯಾದಿಂದ ಎಂಟು ಚೀತಾಗಳನ್ನು ತರಲಾಗಿತ್ತು, ಬಳಿಕ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕರೆತರಲಾಗಿತ್ತು. ಫೆಬ್ರವರಿ 2023ರಲ್ಲಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಇವುಗಳನ್ನು ಕಳುಹಿಸಲಾಯಿತು.

ಕಳೆದ ವಾರವಷ್ಟೇ ನಮೀಬಿಯಾದಿಂದ ಸ್ಥಳಾಂತರಗೊಂಡಿದ್ದ ಚೀತಾವೊಂದು ಉದ್ಯಾನದಲ್ಲಿ ಸಾವನ್ನಪ್ಪಿತ್ತು, 2023ರ ಮಾರ್ಚ್​ನಿಂದ ಇಲ್ಲಿಯವರೆಗೆ ಏಳು ಚೀತಾಗಳು ಹಾಗೂ ಮೂರು ಮರಿಗಳು ಸಾವನ್ನಪ್ಪಿವೆ. ಈ ಕುರಿತು ಸುಪ್ರೀಂಕೋರ್ಟ್​ ತೀವ್ರ ಕಳವಳ ವ್ಯಕ್ತಪಡಿಸಿದೆ. ಹಾಗೆಯೇ ಚೀತಾಗಳ ಸಾವಿನ ಹಿಂದಿರುವ ಕಾರಣಗಳು ಹಾಗೂ ತಡೆಗಟ್ಟಲು ತೆಗೆದುಕೊಂಡ ಪರಿಹಾರ ಕ್ರಮಗಳನ್ನು ವಿವರಿಸುವ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಕೇಳಿದೆ.

ಮತ್ತಷ್ಟು ಓದಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಸಾವು; ಇದು 10ನೆಯದ್ದು

ಕುನೋದಲ್ಲಿ ಕೊನೆಯ ಮತ್ತು ಒಂಬತ್ತನೇ ಚೀತಾದ ಸಾವು ಕಳೆದ ವರ್ಷ ಆಗಸ್ಟ್ 2 ರಂದು ವರದಿಯಾಗಿದೆ. ಕಳೆದ ಎರಡು ಸಾವುಗಳಿಗೆ ಮಳೆಗಾಲದಲ್ಲಿ ಕೀಟಗಳಿಂದ ಉಂಟಾದ ಸೋಂಕುಗಳು ಕಾರಣ ಎಂದು ಸರ್ಕಾರ ಸಂಸತ್ತಿನಲ್ಲಿ ಉಲ್ಲೇಖಿಸಿತ್ತು.

1952 ರಲ್ಲಿ ಭಾರತದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಯಿತು. 2022 ರಲ್ಲಿ ಮತ್ತೆ 20 ಚಿರತೆಗಳನ್ನು ವಿದೇಶದಿಂದ ಕುನೋ ಪಾರ್ಕ್‌ಗೆ ತರಲಾಯಿತು. ಚೀತಾಗಳನ್ನು ನಮೀಬಿಯಾ (2022) ಮತ್ತು ದಕ್ಷಿಣ ಆಫ್ರಿಕಾ (2023)ದಿಂದ ಎರಡು ಬ್ಯಾಚ್‌ಗಳಲ್ಲಿ ತರಲಾಗಿತ್ತು.

ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತಂದ ಚೀತಾಗಳ ಗುಂಪನ್ನು ಕುನೊದಲ್ಲಿನ ಆವರಣಕ್ಕೆ ಬಿಡುಗಡೆ ಮಾಡಿದಾಗ ಈ ಉಪಕ್ರಮವು ಪ್ರಾರಂಭವಾಯಿತು. ಅಂದಿನಿಂದ ಉದ್ಯಾನದಲ್ಲಿ ನಾಲ್ಕು ಮರಿಗಳು ಜನಿಸಿದವು, ಆದರೆ ಅವುಗಳಲ್ಲಿ ಮೂರು ಮತ್ತು ಇತರ ಆರು ಚೀತಾ ಐದು ತಿಂಗಳಲ್ಲಿ ಸಾವಿಗೀಡಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ